Pakistan Economic Crisis: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟು ಸೇನೆಯ ಅವ್ಯವಸ್ಥೆಗಳಲ್ಲಿ ಆಹಾರದ ಕೊರತೆಗೆ ಕಾರಣವಾಗಿದ್ದು, ದೇಶದ ಪುಮುಖ ಸಂಸ್ಥೆಗಳಲ್ಲಿ ಒಂದಾದ ಪಾಕಿಸ್ತಾನ ಸೇನೆಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ವರದಿಯಾಗಿದೆ.
ಫೀಲ್ಡ್ ಕಮಾಂಡರ್‌ಗಳು ಕ್ವಾರ್ಟರ್ ಮಾಸ್ಟರ್ ಜನರಲ್ ಕಚೇರಿಗೆ ಪತ್ರಗಳನ್ನು ಬರೆದಿದ್ದಾರೆ ಎಂದು ವರದಿಯಾಗಿದೆ, ಎಲ್ಲಾ ಸೇನಾ ಮೆಸ್‌ಗಳಲ್ಲಿ ಸೈನಿಕರಿಗೆ ಆಹಾರ ಪೂರೈಕೆಯಲ್ಲಿ ಕಡಿತವನ್ನು ಎತ್ತಿ ತೋರಿಸುತ್ತದೆ. ಸೇನಾ ಅಧಿಕಾರಿಗಳು ಆಹಾರ ಪೂರೈಕೆ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಗಳನ್ನು ಲಾಜಿಸ್ಟಿಕ್ ಸ್ನಾಫ್ ಮತ್ತು ಡೈರೆಕ್ಟರ್ ಜನರಲ್ ಮಿಲಿಟರಿ ಕಾರ್ಯಾಚರಣೆಗಳೊಂದಿಗೆ ಚರ್ಚಿಸಿದ್ದಾರೆ, ಈ ಸಮಸ್ಯೆಯನ್ನು ಸೇನಾ ಮುಖ್ಯಸ್ಮ ಜನರಲ್ ಅಸಿಮ್ ಮುನೀರ್ ಅವರೊಂದಿಗೆ ಪುಸ್ತಾಪಿಸಿದ್ದಾರೆ.
ಸೇನೆಗೆ ಆಹಾರ ಸರಬರಾಜು ಮತ್ತು ನಿಧಿಯ ಬೇಡಿಕೆಗಳನ್ನು ರಕ್ಷಣಾ ಸಚಿವಾಲಯ ತುರ್ತು ಆಧಾರದಲ್ಲಿ ಪೂರೈಸುವುದನ್ನು ಖಾತರಿಪಡಿಸುವಂತೆ ಸೇನಾ ಮುಖ್ಯಸ್ಥ ಸೈಯದ್ ಅಸೀಂ ಮುನೀರ್ ಸಂಬಂಧಪಟ್ಟ ಎಲ್ಲ ಸನ ವಿಭಾಗಗಳಿಗೆ ನಿರ್ದೇಶಿಸಿ ದ್ವಾರ. 2022-23ನೇ ಸಾಲಿನ ಪಾಕ್ ಬಜೆಟ್‌ನಲ್ಲಿ ಸುಮಾರು 7.5 ಶತಕೋಟಿ ಡಾಲರ್ (1.52 ಶೈಲಿಯ ರೂಪಾಯಿ ಹಣವನ್ನು ರಕ್ಷಣಾ ವಲಯಕ್ಕೆ ಹಂಚಿಕೆ ಮಾಡಲಾಗಿದೆ. ಇದು ಕಳೆದ ವಿತ್ತ ವರ್ಷಕ್ಕಿಂತ ಶೇ. 11.6 ಹೆಚ್ಚಳವಾಗಿದೆ. ಪಾಕ್ ಪುತಿ ಸೈನಿಕನಿಗೆ ವಾರ್ಷಿಕ ಸರಾಸರಿ 1,34,000 ಡಾಲರ್ ವ್ಯಯಿಸುತ್ತದೆ.
ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ರನ್ನು ಪರಿಹರಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇವುಗಳಲ್ಲಿ ಸರ್ಕಾರಿ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದು,ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಮತ್ತು ಇಂಟೆಲಿಜೆನ್ಸ್ ಬ್ಯೂರೋ (IB) ಗಳ ಅನುದಾನ ಮತ್ತು ರಹಸ್ಯ ಸೇವಾ ನಿಧಿಗಳನ್ನು ಮಿತಿಗೊಳಿಸುವುದು.
ವಿದೇಶಗಳಲ್ಲಿ ರುವ ರಾಜತಾಂತ್ರಿಕ ಕಚೇರಿಗಳ ವೆಚ್ಚಗಳನ್ನು ಕಡಿತ ಮಾಡುವಂತೆ ಖಡಕ್ ನಿರ್ದೇಶನ ನೀಡಿದ. ಈ ಸಂಬಂಧ ಅದು ವಿದೇಶಾಂಗ ಕಚೇರಿಗೆ ಆದೇಶ ಹೊರಡಿಸಿದೆ. ವಿದೇಶಗಳಲ್ಲಿರುವ ಕೆಲವು ಮಿಷನ್ ಮತ್ತು ಕಚೇರಿಗಳ ಸಂಖ್ಯೆಯನ್ನು ಕಡಿತ ಮಾಡುವಂತೆಯೂ ಸೂಚಿಸಿದ, ಮಿತವ್ಯಯ ಸಾಧಿಸಲು ಸಿಬ್ಬಂದಿ ಕಡಿತ ಮತ್ತು ಇತರ ಕ್ರಮಗಳನ್ನು ಕೈಗೊಳ್ಳುವಂತೆ ಪಿಎಂಒ ಕಚೇರಿಯ ಆದೇಶದಲ್ಲಿ ನಿರ್ದೇಶಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ಬುಧವಾರ ತಿಳಿಸಿದ, ಈ ವಿಚಾರ ದಲ್ಲಿ ಸೂಕ್ತ ಪ್ರಸ್ತಾವನೆಗಳನ್ನು 2 ಬಾರದೊಳಗೆ ಸಲ್ಲಿಸು ವಂತೆ ಪ್ರಧಾನಿ ಶಹಬಾಜ್ ಪರೀಖ್ ಸೂಚಿಸಿದ್ದಾರೆ, ವಿದೇಶಿ ಮಿಷನ್‌ಗಳ ವೆಚ್ಚದಲ್ಲಿ ಶೇ. 15ರಷ್ಟು ಕಡಿತ ಮಾಡಲು ಪ್ರಧಾನಿ ನೇಮಿಸಿದ್ದ ರಾಷ್ಟ್ರೀಯ ಮಿತ ವ್ಯಯ ಸಮಿತಿ (ಎನ್‌ಎಸಿ) ಶಿಫಾರಸು ಮಾಡಿದೆ.