ಯಶ್ ಎಂದರೆ ಸಾಕು ಅಭಿಮಾನಿಗಳು ಕಿವಿ ನಿಮಿರುತ್ತೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವಿದೆ. ಯಶ್ಗೆ ಪೊಗರು ಜಾಸ್ತಿ ಎಂದು ಕಮೆಂಟ್ ಮಾಡುವ ಹಲವು ಮಂದಿಗೆ ಯಶ್ ಏನು ಎನ್ನುವುದು ಅರ್ಥವಾಗಿದೆ. ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಯುವಜನ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ನಮ್ಮೂರು. ಇಲ್ಲಿನ ಪಡುವಾರಹಳ್ಳಿ, ಕಾಳಿದಾಸ ರಸ್ತೆ ಹಾಗೂ ಗಂಗೋತ್ರಿಯಲ್ಲಿ ಓಡಾಡಿದ್ದೇನೆ ಎಂದು ಕಾಲೇಜ್ ದಿನ ನೆನಪು ಮಾಡಿಕೊಂಡಿದ್ದಾರೆ. ನಮ್ಮೂರಿನಲ್ಲಿ ದೇಶದ ಹೆಮ್ಮೆಯ […]
ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನಟಿ ಮೇಘನಾ ರಾಜ್. ಹೊಸ ಸೆನ್ಸೇಶನ್…!!!
‘ಬಿಗ್ ಬಾಸ್ ಒಟಿಟಿ ಕನ್ನಡ’ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲ ಸೀಸನ್ ಆದ್ದರಿಂದ ನಿರೀಕ್ಷೆಗಳು ಕೊಂಚ ಹೆಚ್ಚೇ ಇದೆ. ವೂಟ್ ಆ್ಯಪ್ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು ಆಗುವುದಿಲ್ಲ. ದಿನದ 24 ಗಂಟೆ ವೂಟ್ ಆ್ಯಪ್ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಜತೆಗೆ ನಿತ್ಯ ಏನೆಲ್ಲ ಆಯಿತು ಎಂಬುದನ್ನು ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಅಭಿನಯ ಚಕ್ರವರ್ತಿ […]
ಕಿನ್ನರಿ ಧಾರಾವಾಹಿಯ ಮಣಿ ಪಾತ್ರಧಾರಿ ಯಾರು ಗೊತ್ತಾ? ಆಕೆ ಈಗ ಏನು ಮಾಡುತ್ತಿದ್ದಾಳೆ ತಿಳಿದಿದೆಯೇ?
ಕಳೆದ ನಾಲ್ಕು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿನ್ನರಿ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಮಣಿ ಎಂಬ ಪ್ರಮುಖ ನಟಿಯ ಬಾಲ್ಯ ಹಾಗೂ ಯೌವ್ವನದ ಹಂತಗಳನ್ನು ತೋರಿಸಲಾಗಿತ್ತು. ಒಬ್ಬ ವ್ಯಕ್ತಿ ಮದುವೆ ಮಾಡಿಕೊಂಡು ಮಗು ಪಡೆದ ನಂತರ ತನ್ನ ಹಂಡತಿಯನ್ನು ತೊರೆದು ಹೋಗುತ್ತಾನೆ. ಆ ನಂತರ ಶ್ರೀಮಂತ ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿಕೊಂಡು ಜೀವನ ಮಾಡುತ್ತಿರುತ್ತಾನೆ. ಎರಡನೇ ಮದುವೆಯಾದ ನಂತರ ಆಕೆಗೆ ಮಕ್ಕಳಾಗುತ್ತಾರೆ. ಸಂಸಾರ ದೊಡ್ಡದಾಗುತ್ತದೆ. ಇದೇ ವೇಳೆ ಹಳ್ಳಿಯಲ್ಲಿ ಮೊದಲನೇ […]
ಸ್ವಂತ ವಿಮಾನದ ಮೂಲಕ ಪ್ರಯಾಣ ಮಾಡುವ ಬಾಲಿವುಡ್ ನಟ ಯಾರು ಗೊತ್ತಾ?
ಸಿನಿಮಾ ಮಾತ್ರವಲ್ಲದೇ ಅಕ್ಷಯ್ ಸಹಾಯ ಮಾಡುವುದರಲ್ಲೂ ಎತ್ತಿದ ಕೈ. ಕೊರೋನಾ ಸಂಕಷ್ಟದ ಸಮಯದಲ್ಲಿ 25 ಕೋಟಿ ರೂ. ಹಣವನ್ನು ದೇಣಿಗೆಯಾಗಿ ನೀಡುವುದು ಮಾತ್ರವಲ್ಲದೇ ಸಂಕಷ್ಟದಲ್ಲಿರುವ ಬಡ ಜನರಿಗೆ ಸಹಾಯ ಹಸ್ತ ಚಾಚಿರುವುದು ಇದಕ್ಕೆ ಉದಾಹರಣೆಯಾಗಿದೆ. ಅಕ್ಷಯ್ ಕುಮಾರ್ ಅವರು ದುಬಾರಿ ಬೆಲೆಯ ಕಾರುಗಳನ್ನು ಓಡಿಸುತ್ತಾರೆ. ಅವರು ಸಾಮಾನ್ಯವಾಗಿ ಶೂಟಿಂಗ್ ಸೆಟ್ಗೆ ಬರುವಾಗ ಬೈಕ್ ನಲ್ಲೇ ಬರುತ್ತಾರೆ. ಅಷ್ಟೇ ಏಕೆ ಅಕ್ಷಯ್ ಅವರ ಬಳಿ ಸ್ವಂತ ವಿಮಾನವೇ ಇದೆ. ಎಂದರೆ ನಿವು ನಂಬಲೇಬೇಕು. ಆ ವಿಮಾನದ […]
ದಪ್ಪ ಆಗಿದ್ದರಿಂದ ತಮ್ಮ ಬದುಕನ್ನೇ ಕೊನೆಯಾಗಿಸಲು ಮುಂದಾಗಿದ್ದ ನಟಿ, ಈ ನಟಿ ಯಾರು ಗೊತ್ತಾ?
ತನ್ನ ಸೌಂದರ್ಯದ ಮೂಲಕವೇ ದಕ್ಷಿಣ ಭಾರತದ ಪ್ರೇಕ್ಷಕರ ಮನ ಗೆದ್ದ ನಟಿ ನಮಿತಾ ಅವರು ಪರದೆ ಮೇಲೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಇವರು ತಮ್ಮ ವೃತ್ತಿ ಜೀವನವನ್ನು ಸ್ವಂತಂ ಸಿನಿಮಾ ಮೂಲಕ ಪ್ರಾರಂಭಿಸಿದರು. ಆದರೆ ಜೆಮಿನಿ ಮತ್ತು ಬಿರ್ಲಾ ಚಿತ್ರಗಳು ಮಾತ್ರ ಆಕೆಗೆ ಹೆಚ್ಚು ಹೆಸರನ್ನು ತಂದುಕೊಟ್ಟವು. ನಟಿ ನಮಿತಾ ಅವರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ವೇಳೆ ತಳ್ಳಗೆ ಬೆಳ್ಳಗೆ ಕಾಣಿಸುತ್ತಿದ್ದರು. ಆದರೆ ಸ್ವಲ್ಪ ವರ್ಷಗಳ ಬಳಿಕ ಅವರು ಸಿಕ್ಕಾಪಟ್ಟೆ ದಪ್ಪ ಆದರು. […]
೮೩ರ ವೃದ್ಧನ ಮದುವೆ ೨೩ರ ಹರೆಯದ ಹುಡುಗಿ ಜೊತೆಗೆ. ಅದು ಕೂಡ ಪರಸ್ಪರ ಇಬ್ಬರೂ ಪ್ರೀತಿಸಿ ಮದುವೆಯಾದರು
ಪ್ರೀತಿಗೆ ಜಾತಿ, ವಯಸ್ಸಿನ ಮಿತಿಯಿಲ್ಲ. ಅದು ಯಾವಾಗ ಬೇಕಾದರೂ, ಯಾರ ಮೇಲಾದರೂ ಹುಟ್ಟಬಹುದು. ಹಾಗೆಯೇ ಸಾಯಬಹುದು. ಯಾವ ವಯಸ್ಸಿನಲ್ಲಿ ಬೇಕಾದರೂ ಪ್ರೀತಿ ಚಿಗುರಬಹುದು. ಇದಕ್ಕೆ ಇತ್ತೀಚೆಗೆ ಇಂಡೋನೇಷಿಯಾದಲ್ಲಿ ನಡೆದ ಮದುವೆಯೇ ಉತ್ತಮ ಉದಾಹರಣೆ. ವರ ಮಹಾಶಯನಿಗೆ ಬರೋಬ್ಬರಿ ೮೩ರ ಹರೆಯ, ಆಕೆಗೆ ಇನ್ನೂ ೨೭ ವರ್ಷದ ಹದಿಹರೆಯ. ಇವರಿಬ್ಬರೂ ಈಗ ಸತಿ ಪತಿಗಳಾಗಿದ್ದಾರೆ. ಇದು ಸುಳ್ಳು ಹೀಗೆಲ್ಲಾ ಆಗಲು ಸಾಧ್ಯವೇ ಎಂದು ಎಂದು ನೀವು ಮೂಗು ಮುರಿಯಬಹುದು. ಇದು ಸತ್ಯವಾದ ಘಟನೆ. ಹಾಗಾಗಿ ನೀವು ನಂಬಲೇಬೇಕು. […]
ಮಾಲಾಶ್ರೀ ಅವರ ಮಗಳು ಅನನ್ಯ ಅವರ ರಾಖಿ ಸಂಭ್ರಮದ ಕ್ಷಣಗಳು, ತಂದೆಯ ನಿಧನದ ನಂತರ ಮತ್ತೆ ನಗು ಮೂಡಿಸಿದ ಹಬ್ಬ ರಾಖಿ
ನಮ್ಮ ದೇಶ ಹಲವು ಸಂಪ್ರದಾಯಗಳು ಹಾಗೂ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಇಂತಹ ಆಚರಣೆಗಳು ಹಾಗೂ ಸಂಪ್ರದಾಯಗಳಿಂದ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳು ಜೀವಂತವಾಗಿ ಉಳಿದುಕೊಂಡಿದೆ. ಅದೇ ಕಾರಣದಿಂದಾಗಿಯೂ ನಮ್ಮ ನಡುವೆ ಸಂಬಂಧಗಳು ಜೀವಂತವಾಗಿದೆ. ಹಿಂದಿನ ಕಾಲದಲ್ಲಿ ಯುದ್ಧಕ್ಕೆ ಹೊರಟ ಯೋಧನಿಗೆ ಹೆಂಡತಿ ಅಥವಾ ತಾಯಿ ವಿಜಯಿಯಾಗಿ ಬರಲೆಂದು ತಿಲಕವಿಟ್ಟು ಯುದ್ಧಭೂಮಿಗೆ ಕಳುಹಿಸುತ್ತಿದ್ದರು. ಇದೇ ಪರಂಪರೆ ರಾಖಿ ಕಟ್ಟುವ ಸಂಪ್ರದಾಯವಾಗಿ ಬೆಳೆದು ಬಂದಿತು. ಮನೆಯಲ್ಲಿ ಇರುವ ಹೆಣ್ಣು ಮಕ್ಕಳನ್ನು ಆಕೆಯ ತಮ್ಮ ಅಥವಾ ಅಣ್ಣ ರಕ್ಷಣೆ ಮಾಡುವ […]
ಐರಾ ತನ್ನ ತಮ್ಮನಿಗೆ ಜೋ ಜೋ ಹೇಳಿ ಮಲಗಿಸುವ ಪರಿಯನ್ನು ನೋಡಿದರೆ ಎಂತಹಾ ಅಮ್ಮನಿಗೂ ಅಸೂಯೆಯಾಗಬಹುದು.
ಸಾಮಾನ್ಯವಾಗಿ ಮಕ್ಕಳು ಮನೆಯಲ್ಲಿ ಇದ್ದರೆ ಅಲ್ಲಿ ಸಂತೋಷ ನಗು ಎಲ್ಲವೂ ತುಂಬಿರುತ್ತದೆ. ಯಾವಾಗಲೂ ಅವರು ಖುಷಿಯಾಗಿ ಇರುವುದರ ಜೊತೆಗೆ ತಮ್ಮ ಜೊತೆಗೆ ಇರುವವರನ್ನು ಖುಷಿಯಾಗಿ ಇರಿಸುತ್ತಾರೆ. ಅವರು ಇದ್ದ ಕಡೆಯೆಲ್ಲಾ ಸಂತೋಷ ಎಂಬುದು ಕಾಲು ಮುರಿದುಕೊಂಡು ಬಿದ್ದಿರುತ್ತದೆ. ಅದೇ ಕಾರಣಕ್ಕೆ ಮಕ್ಕಳಿರಲವ್ವಾ ಮನೆ ತುಂಬಾ ಎಂದು ಜಾನಪದ ಹಾಡುಗಳಲ್ಲಿ ಹೇಳಲಾಗುತ್ತಿತ್ತು. ಸೆಲೆಬ್ರಿಟಿಗಳ ಮಕ್ಕಳು ಎಂದರೆ ಕೇಳಬೇಕಾ? ಅವರು ಏನೇ ಮಾಡಿದರೂ ದೊಡ್ಡ ಸುದ್ದಿಯಾಗುತ್ತಾರೆ. ಅವರು ಆಡುವ ಆಟ, ಮಾಡುವ ತುಂಟಾಟ ಎಲ್ಲವೂ ವೈರಲ್ ಆಗುತ್ತದೆ. […]
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಧಾ ರಮಣ ಧಾರಾವಾಹಿ ಖ್ಯಾತಿಯ ರಾಣಿ ಅಲಿಯಾಸ್ ಆಶಿತಾ ಚಂದ್ರಪ್ಪ
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶೋನ ೫ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಅವರು ಇದೇ ವರ್ಷ ರೋಹನ್ ರಾಘವೇಂದ್ರ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನಟಿ ಜೊತೆ ಜೊತೆಯಲಿ ಧಾರಾವಾಹಿಯ ಮೊದಲ ಸೀಸನ್ ನಲ್ಲಿ ಶಿಕ್ಷಕಿಯೊಬ್ಬಳು ತನ್ನ ಶಿಷ್ಯನನ್ನೇ ಮದುವೆಯಾಗುವ ಪಾತ್ರದಲ್ಲಿ ನಟಿಸಿದ್ದರು. ನಟಿ ಆಶಿತಾ ಅವರ ಮದುವೆ ಬಹಳ ಅದ್ಧೂರಿಯಾಗಿ ನಡೆದರೂ ಅಲ್ಲಿ ಸಾಕಷ್ಟು ಜನರು ಭಾಗವಹಿಸಲು ಅವಕಾಶವಿರಲಿಲ್ಲ. ಏಕೆಂದರೆ […]
ವಿಜಯ್ ಪ್ರಕಾಶ್ ಅವರ ಮಗಳು ಕೂಡ ಅದ್ಭುತವಾದ ಗಾಯಕಿ, ಆಕೆ ಬಗ್ಗೆ ನಿಮಗೆ ತಿಳಿದಿದೆಯೇ?
ದಕ್ಷಿಣ ಭಾರತದ ಸಂಗೀತ ಲೋಕದಲ್ಲಿ ತಮ್ಮದೇ ಆದ ಗಾಯನ ಶೈಲಿಯ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಗಾಯಕ ಎಂದರೆ ವಿಜಯ್ ಪ್ರಕಾಶ್ ಅವರು. ವಿಜಯ್ ಅವರು ಹಿಂದಿ, ತಮಿಳು, ತಮಿಳು ಭಾಷೆಯ ಸಿನಿಮಾಗಳನ್ನು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೇ, ಕನ್ನಡ ಸಿನಿಮಾ ಲೋಕದಲ್ಲಿ ವಿಜಯ್ ಪ್ರಕಾಶ್ ಅವರು ಮನೆ ಮಾತಾಗಿರುವ ಗಾಯಕ. ಇವರು ಸಿನಿಮಾ ಮಾತ್ರವಲ್ಲದೇ, ಜಾಹೀರಾತುಗಳಿಗೂ ತಮ್ಮ ಹಿನ್ನಲೆ ಧ್ವನಿಯನ್ನು ನೀಡಿದ್ದಾರೆ. ಇವರ ಪತ್ನಿಯೂ ಕೂಡ ಹಿನ್ನಲೆ ಧ್ವನಿಯನ್ನು ಬಹುತೇಕ ಜಾಹೀರಾತುಗಳಿಗೆ ನೀಡಿದ್ದಾರೆ. […]