ಕಿರುತೆರೆ ಎಂದಾಕ್ಷಣ ದಾರವಾಹಿಯೇ ಮೊದಲಿಗೆ ನೆನಪಾಗುತ್ತದೆ. ಕೆಲವು ಅಭಿಮಾನಿಗಳು ಧಾರವಾಹಿಯನ್ನು ಮೀರಿ ರಿಯಾಲಿಟಿ ಶೋಗಳನ್ನು(reality show) ಹೆಚ್ಚು ಇಷ್ಟಪಡುತ್ತಿರುತ್ತಾರೆ. ದಿನಾಲು ಪ್ರಸಾರವಾಗುವ ದಾರವಾಹಿಗಳಿಗೆ ಎಷ್ಟು ಬೇಡಿಕೆ ಇದೆಯೋ ಅಷ್ಟೇ ಬೇಡಿಕೆ ವಾರಂತ್ಯದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಿಗೂ ಕೂಡ ಇದೆ. ರಿಯಾಲಿಟಿ ಶೋ ಗಾಗಿ ಅಭಿಮಾನಿಗಳು ವಾರಾಂತ್ಯದಲ್ಲಿ ಬರುವ ಶೋ ಹಾಗೂ ವಾರವಿಡೀ ಕಾಯುತ್ತಾ ಕುಳಿತಿರುತ್ತಾರೆ. ಶನಿವಾರ ಮತ್ತು ಭಾನುವಾರ ಬಂತೆಂದರೆ ಸಾಕು ರಿಯಾಲಿಟಿ ಶೋಗಾಗಿ ಟಿವಿ ಮುಂದೆ ಕುಳಿತು ಬಿಡುತ್ತಾರೆ.

 

 

ಕನ್ನಡದಲ್ಲಿ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು, ಮಜಾ ಭಾರತ, ನನ್ನಮ್ಮ ಸೂಪರ್ ಸ್ಟಾರ್, ನಾರಿಗೊಂದು ಸೀರೆ ಮುಂತಾದ ರಿಯಾಲಿಟಿ ಶೋಗಳು ಜನರನ್ನು ಮನರಂಜಿಸುತ್ತಿವೆ. ರಿಯಾಲಿಟಿ ಶೋಗಳಿಗೆ ಟಿಆರ್ಪಿ ಕೂಡ ಹೆಚ್ಚಾಗಿದ್ದು ಅದನ್ನು ಹೆಚ್ಚು ಜನರು ವೀಕ್ಷಿಸುತ್ತಾರೆ. ರಿಯಾಲಿಟಿ ಶೋಗಳು ಜನರಿಗೆ ಕೇವಲ ಮನರಂಜನೆಯನ್ನು ಮಾತ್ರ ನೀಡದೆ ಹಲವಾರು ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತವೆ. ಮಕ್ಕಳು ಹಾಗೂ ವಯಸ್ಕರ ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಒಂದು ಉತ್ತಮ ಅವಕಾಶವೇ ರಿಯಾಲಿಟಿ ಶೋ ಎಂದರೆ ತಪ್ಪಾಗಲಾರದು.

 

 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ(sa re ga ma pa reality show) ಇದೀಗಾಗಲೇ 15 ಸೀಜನ್ ಗಳನ್ನು ಮುಗಿಸಿದ್ದು ಸರಿಗಮಪ ರಿಯಾಲಿಟಿ ಶೋನಲ್ಲಿ ಆಂಕರ್ ಅನುಶ್ರೀರವರು(anchor Anushree) ನಿರೂಪಣೆಯನ್ನು ಮಾಡುತ್ತಾರೆ. ಕಾಮಿಡಿ ಕಿಲಾಡಿಗಳು ಮಜಾ ಭಾರತ ಇಂತಹ ಶೋಗಳಿಂದ ಹಾಸ್ಯ ಕಲಾವಿದರು ಹುಟ್ಟಿಕೊಂಡರೆ ಸರಿಗಮಪ ಶೋ ಮೂಲಕ ಹೊಸ ಹೊಸ ಸಂಗೀತಗಾರರು ಹುಟ್ಟಿಕೊಳ್ಳುತ್ತಿದ್ದಾರೆ.

 

 

ಇದೀಗ ಸರಿಗಮಪ ಸೀಸನ್ 15ರ ಆಡಿಷನ್ ನಡೆಯುತ್ತಿದ್ದು ಈ ಬಾರಿ ಸರಿಗಮಪ ರಿಯಾಲಿಟಿ ಶೋ ಗೆ ಬಂದಿರುವ ಪುಟ್ಟ ಮಕ್ಕಳೆಲ್ಲರೂ ಸಿಕ್ಕಾಪಟ್ಟೆ ಟ್ಯಾಲೆಂಟ್ ಹೊಂದಿದ್ದಾರೆ. ಇವರು ಹಾಡುವುದು ಮಾತ್ರವಲ್ಲದೆ ಅದನ್ನು ಮೀರಿ ಸಾಕಷ್ಟ ಪ್ರತಿಭೆಗಳನ್ನು ಹೊಂದಿದ್ದಾರೆ. ಸರಿಗಮಪ ವೇದಿಕೆ ಮೇಲೆ ಸಂಗೀತವನ್ನು ಮಾತ್ರವಲ್ಲದೆ ತಮ್ಮಲ್ಲಿ ಅಡಗಿರುವ ಹಲವು ಪ್ರತಿಭೆಗಳನ್ನು ಹೊರಹಾಕುತ್ತಿದ್ದಾರೆ. ಇದೀಗ ಸರಿಗಮಪ ಸೀಸನ್ 15 ರೋಚಕವಾಗಿ ಮೂಡಿ ಬರುತ್ತಿದ್ದು ಇತ್ತೀಚಿಗಷ್ಟೇ ಒಂದು ಹಾಡಿನ ಮೂಲಕ ದಿಯಾ ಹೆಗಡೆ ಎಂಬ ಪುಟಾಣಿ ಎಲ್ಲರ ಗಮನ ಸೆಳೆದಿದ್ದಳು

ಇದೀಗ ದಿಯಾ ಹೆಗಡೆ (Diya Hegde)ಹಾಡಿರುವ ಹಾಡು ಎಲ್ಲಾ ಕಡೆ ವೈರಲ್ ಆಗಿದ್ದು ಜಡ್ಜ್ಗಳು ಕೂಡ ಇವಳ ಹಾಡಿಗೆ ಮನಸ್ಸುತಿದ್ದಾರೆ. ನೆಟ್ಟಿಗರು ಕೂಡ ದಿಯಾ ಹೆಗಡೆ ಹಾಡನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದು ದಿಯಾ ಹೆಗಡೆ “ನಾ ಮುದುಕಿ ಆದರೇನಾತು” ಎನ್ನುವ ಜನಪದ ಹಾಡೊಂದು ಶುಶ್ರಾವ್ಯವಾಗಿ ಹಾಡಿದ್ದಳು ಸರಿಗಮಪ ಸೀಸನ್ 15ರ ವೇದಿಕೆ ಮೇಲೆ ದಿಯಾ ಹೆಗಡೆ ಈ ಹಾಡನ್ನು ಹಾಡಿದ್ದು ಹಾಡುವಾಗ ಪುಟಾಣಿಯ ಬಾಯಿಯಲ್ಲಿ ಬರುತ್ತಿದ್ದ ಪಟಾಕಿ ಗಾನ ,ನೃತ್ಯ, ಹಾವಭಾವ ಎಲ್ಲವೂ ಕೂಡ ಜನರ ಗಮನವನ್ನು ಸೆಳೆದಿತ್ತು. ಪಟಾಕಿಯಂತೆ ಮಾತುಗಳನ್ನಾಡುವ ದಿಯಾ ಮಾಸ್ಟರ್ ಆನಂದ್ (master Anand daughter Vanshika)ರವರ ಮಗಳು ವಂಶಿಕಳಂತೆ ತುಂಬಾ ಚೂಟಿಯಾಗಿದ್ದಾರೆ.

 

 

ದಿಯಾ ಹೆಗಡೆ ಚಿಕ್ಕವಳಾಗಿದ್ದರೂ ಕೂಡ ಪ್ರತಿಭೆ ತುಂಬಾ ಇದ್ದು ಜಡ್ಜ್ಗಳು ಕೂಡ ಇವಳ ಪ್ರತಿಭೆಯನ್ನು ನೋಡಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ದಿಯಾ ಹೆಗಡೆಯಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ನ ಟಿ ಆರ್ ಪಿ ಕೂಡ ಸಿಕ್ಕಾಪಟ್ಟೆ ಹೆಚ್ಚಾಗಿದ್ದು ಪುಟಾಣಿ ದಿಯಾ ಹೆಗಡೆಗೆ ವಾರದ ಸಂಬಳ ಕೂಡ ಹೆಚ್ಚಾಗಿಯೇ ಸಿಕ್ಕಿದೆ. ಎನ್ನುವ ಮಾಹಿತಿ ಎಲ್ಲಾ ಕಡೆ ಹರಿದಾಡುತ್ತಿದೆ. ದಿಯಾ ಹೆಗಡೆಗೆ ಇದೀಗ ವಾರಕ್ಕೆ 20 ಸಾವಿರ ರೂಪಾಯಿ ಸಂಭಾವನೆ ಸಿಗುತ್ತಿದ್ದು ಮುಂದಿನ ದಿನಗಳಲ್ಲಿ ದಿಯಾ ಹೆಗಡೆ ಇದೇ ರೀತಿ ಕನ್ನಡಿಗರನ್ನು ರಂಜಿಸಿದರೆ ಆದಷ್ಟು ಬೇಗ ವಂಶಿಕ ಅಂಜನಿ ಕಶ್ಯಪ (Vanshika Anjani Kashyap)ರೀತಿ ಕರ್ನಾಟಕದಲ್ಲಿ ಫೇಮಸ್ ಆಗುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Leave a comment

Your email address will not be published. Required fields are marked *