ಬಿಗ್ ಬಾಸ್ ಸೀಸನ್ 9ರ(bigg Boss season 9) ಕಾರ್ಯಕ್ರಮ ಮುಕ್ತಾಯವಾಗಿದೆ. ಬಿಗ್ ಬಾಸ್ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ(bigg Boss season 9 winner rupesh Shetty) ವಿನ್ನರ್ ಆಗಿದ್ದಾರೆ. ರಾಕೇಶ್ ಅಡಿಗ (bigg Boss season 9 runner Rakesh adiga) ಸೋತರೂ ಕೂಡ ರನ್ನರ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 9ರ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ, ಜೋಡಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು ಅದೇ ರೀತಿ ಅಮೂಲ್ಯ ಗೌಡ ಹಾಗೂ ರಾಕೇಶ್ ಅಡಿಗಾ ಜೋಡಿ ಕೂಡ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿತ್ತು.
ಬಿಗ್ ಬಾಸ್ ಸೀಸನ್ ೯ರಲ್ಲಿ ರನ್ನರ್ ಆಗಿರುವ ರಾಕೇಶ್ ಅಡಿಗ ಹಲವಾರು ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ರಾಕೇಶ್ ಅಡಿಗ ರವರನ್ನು ಅವರ ಅಭಿಮಾನಿಗಳು ಆರ್ಸಿಬಿಗೆ ಹೋಲಿಸಿ ಟ್ರೋಫಿ ಗೆದ್ದರೂ ಗೆಲ್ಲದಿದ್ದರೂ ಆರ್ಸಿಬಿ ಆರ್ಸಿಬಿ ನೆ ಆರ್ಸಿಬಿ ಯನ್ನು ಎಂದಿಗೂ ಕೂಡ ಬಿಟ್ಟುಕೊಡಲು ಸಾಧ್ಯವಿಲ್ಲ ಅದೇ ರೀತಿ ರಾಕೇಶ್ ಅಡಿಗಾ ಟ್ರೋಪಿಯನ್ನು ಗೆದ್ದಿಲ್ಲವಾದರೂ ಅವರೇ ನಮ್ಮ ಹೀರೋ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ರಾಕೇಶ್ ತುಂಬಾ ಒಳ್ಳೆಯ ವ್ಯಕ್ತಿ ಹಾಗೂ ನೇರವಾಗಿ ಮಾತನಾಡುತ್ತಾರೆ ಎನ್ನುವುದರಿಂದಲೇ ಪ್ರಸಿದ್ಧಿ ಎಂದು ಪಡೆದುಕೊಂಡಿದ್ದರು ರಾಕೇಶ್ ಅಡಿಗ ಕೂಡ ಸಂದರ್ಶನದಲ್ಲಿ ಮಾತನಾಡಿ ನಾನು ಹೇಗಿದ್ದೇನೋ ಹಾಗೆ ಇರುತ್ತೇನೆ ನಾನು ಸತ್ಯದಿಂದ ಇರುತ್ತೇನೆ ನನ್ನನ್ನು ಇಷ್ಟಪಡುವವರೆಲ್ಲರಿಗೂ ಕೂಡ ನೋವಾಗದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ರೂಪೇಶ್ ಶೆಟ್ಟಿಗೆ ಮೊದಲಿನಿಂದ ನೀನು ಗೆಲ್ಲುತ್ತೀಯ ಎಂದು ಹೇಳುತ್ತಿದ್ದೆ ಹಾಗೆ ರೂಪೇಶ್ ಕೂಡ ಗೆದ್ದಿದ್ದಾನೆ. ಅವನು ಈಗ ಇಂಟರ್ವ್ಯೂ ಅದು ಇದು ಎಂದು ಬಿಸಿಯಾಗಿದ್ದಾನೆ. ನಮ್ಮಿಬ್ಬರ ಸ್ನೇಹ ಇದೆ ರೀತಿ ಕಂಟಿನ್ಯೂ ಆಗುತ್ತದೆ. ಬಿಗ್ ಬಾಸ್ ಮುಗಿದ ಕಾರಣ ನಿಮ್ಮನ್ನು ಕಾಣಲು ಆಗುವುದಿಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ರಾಕೇಶ್ ಅಡಿಗ ಅಭಿಮಾನಿಗಳು ಕೂಡ ಹೇಳುತ್ತಿದ್ದಾರೆ.
ನನ್ನ ಅಭಿಮಾನಿಗಳಿಗೆ ಬೇಸರವಾಗಬಾರದು ಎಂದು ಒಂದು ಮಿನಿ ಸಾಂಗ್ ಅನ್ನು ಬಿಡುಗಡೆ ಮಾಡುತ್ತೇನೆ ಅದರ ಪ್ಲಾನಿಂಗ್ ಇನ್ನು ನಡೆಯುತ್ತಿದೆ. ನಾನು ನಟಿಸುತ್ತಿರುವ ಕಾಕ್ರೋಚ್ ಎನ್ನುವ ಸಿನಿಮಾದ ಗ್ಲಿಂಪ್ಸ್ ಕೂಡ ಬಿಡುಗಡೆ ಮಾಡಬೇಕು ಸಿನಿಮಾದಲ್ಲೂ ನಟಿಸುತ್ತೇನೆ ಅವಕಾಶಗಳು ಸಿಕ್ಕರೆ ಒಳ್ಳೆಯ ಪಾತ್ರಗಳಲ್ಲಿ ಹೀರೋ ಅಥವಾ ವಿಲ್ಲನ್ ಆಗಿ ನಟಿಸುತ್ತೇನೆ ಎಂದಿದ್ದಾರೆ. ಮದುವೆಯ ಬಗ್ಗೆ ಕೇಳಿದಾಗ ರಾಕೇಶ್ ಅಡಿಗ ಮಾತನಾಡಿ ಮದುವೆಯ ಬಗ್ಗೆ ತಿನ್ನು ಯೋಚಿಸಿಲ್ಲ ನನಗೆ ಯಾರಾದರೂ ಇಷ್ಟವಾದರೆ ನಾನು ಮದುವೆಯಾಗುತ್ತೇನೆ ಎಂದು ರಾಕೇಶ್ ಅಡಿಗ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.