ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಮನೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಯಿತು. ನಟಿ ನಿವೇದಿತಾ ಗೌಡ ಲಂಗಾ ದವಣಿಯುಟ್ಟು ಚಿತ್ರದಲ್ಲಿ ಮಿಂಚುತ್ತಿದ್ದಾರೆ. ನಿವೇದಿತಾ ಗೌಡ ದೀಪಾವಳಿಯನ್ನು ಮನೆಯಲ್ಲಿ ಸಡಗರದಿಂದ ಆಚರಿಸಿದ್ದಾರೆ. ನಿವಿ ಪತಿ ಚಂದನ್ ಶೆಟ್ಟಿ ನಿವಾಸದಲ್ಲಿ ಈಗ ಬೆಳಕಿನ ಹಬ್ಬದ ಸಂಭ್ರಮ ಜೋರಾಗಿದೆ.
ಈ ಹಬ್ಬಕ್ಕೆ ನಟಿ ನಿವೇದಿತಾ ಗೌಡ ಸ್ಕರ್ಟ್ ತೊಟ್ಟಿದ್ದರು. ಟ್ರೆಡಿಷನಲ್ ಲುಕ್‌ನಲ್ಲಿರುವ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಮರಾಗೆ ಕ್ಯೂಟ್ ಆಗಿ ಹಂಚಿಕೊಂಡಿದ್ದು, ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.
ನಿವೇದಿತಾ ಗೌಡ ಲಂಗಾ ದವನಿಯಲ್ಲಿ ಫೋಟೋಗೆ ಪೋಸ್ ನೀಡಿದ್ದು ವೈರಲ್ ಆಗಿದೆ. ನಿವಿ ಫೋಟೋಗೆ ಅಭಿಮಾನಿಗಳು ಲೈಕ್‌ಗಳ ಸುರಿಮಳೆಗೈದಿದ್ದಾರೆ. ಅವರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.
View this post on Instagram
ಬಾರ್ಬಿ ಗೊಂಬೆ ಎಂದೇ ಫೇಮಸ್ ಆಗಿರುವ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಸದಾ ರೀಲುಗಳನ್ನು ತಯಾರಿಸಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
ನಿವೇದಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಎಲ್ಲಾ ವಿಡಿಯೋಗಳು ಸುದ್ದಿ ಮಾಡುತ್ತವೆ. ಯಾವ ಬಟ್ಟೆ ತೊಟ್ಟರೂ ತುಂಬಾ ಮುದ್ದಾಗಿ ಕಾಣಿಸುತ್ತಾಳೆ ಅಂತ ಕಮೆಂಟ್ ಗಳ ಸುರಿಮಳೆಯೇ. ಅದರ ಜೊತೆಗೆ ಟ್ರೋಲ್‌ಗಳೂ ಬರುತ್ತವೆ.
ನಿವೇದಿತಾ ಗೌಡ ಪ್ರಸ್ತುತ Instagram ನಲ್ಲಿ ಸುಮಾರು 1.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ನಿವೇದಿತಾ ಇದುವರೆಗೆ 1,765 ಪೋಸ್ಟ್‌ಗಳನ್ನು ಮಾಡಿದ್ದಾರೆ. ನಿವೇದಿತಾ ಗೌಡ ಕೂಡ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.