ಸಂಗೀತಗಾರ ರಾಪರ್ ಚಂದನ್ ಶೆಟ್ಟಿ ರವರ ಮುದ್ದಿನ ಮಡದಿ ನಿವೇದಿತಾ ಗೌಡರವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಲೊ ಟ್ರಿಪ್ ಎಂದು ನಿವೇದಿತಾ ಗೌಡ ಬಾಲಿಗೆ ತೆರಳಿದ್ದರು ಅಲ್ಲಿ ಸುಂದರ ಪರಿಸರದ ನಡುವೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತು ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ತುಂಡು ಹುಡುಗೆಯನ್ನು ತೊಟ್ಟು ಸ್ವಿಮ್ಮಿಂಗ್ ಪೂಲ್ ಬಳಿ ನಿಂತಿರುವ ನಿವೇದಿತಾ ಗೌಡ ಫೋಟೋಗಳು ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿವೆ.
ಸೋಶಿಯಲ್ ಮೀಡಿಯಾ ಸ್ಟಾರ್ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ತಮ್ಮಪತಿ ಚಂದನ್ ಶೆಟ್ಟಿಯನ್ನು ಇಲ್ಲಿಯೇ ಬಿಟ್ಟು ಏಕಾಂಗಿಯಾಗಿ ಬಾಳಿಗೆ ತೆರಳಿದ್ದಾರೆ. ಹನಿಮೂನ್ ಸ್ಪಾಟ್ ಆಗಿರುವ ಬಾಲಿಯಲ್ಲಿ ನಿವೇದಿತಾ ಗೌಡ ಒಬ್ಬಂಟಿಯಾಗಿ ಟ್ರಿಪ್ ಗೆ ಹೋಗಿದ್ದಾರೆ. ಇತ್ತ ಚಂದನ್ ಶೆಟ್ಟಿ ಕೂಡ ಒಂಟಿಯಾಗಿ ವಿದೇಶ ಪ್ರಯಾಣವನ್ನು ಮಾಡುತ್ತಿದ್ದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ತಮ್ಮ ಅಭಿಮಾನಿಗಳಾಗಿ ಹಲವಾರು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನಿವೇದಿತಾ ಬಿಳಿ ಹಾಗೂ ಗುಲಾಬಿ ಬಣ್ಣದ ತುಂಡು ಬಟ್ಟೆಯಲ್ಲಿ ಬಾಲಿಯಲ್ಲಿರುವ ಸ್ವಿಮ್ಮಿಂಗ್ ಪೂಲ್ ಬಳಿ ನಿವೇದಿತಾ ವಿವಿಧ ಪೋಸ್ ಗಳನ್ನು ಕೊಟ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ನಿವೇದಿತಾ ಗೌಡ ಕಿರುತೆರೆಯ ಶೋಗಳಲ್ಲಿ ಬಿಸಿಯಾಗಿದ್ದಾರೆ. ನಿವೇದಿತಾ ಗೌಡ ಇದೀಗ ತಮ್ಮ ವೈಯಕ್ತಿಕ ಜೀವನಕ್ಕಾಗಿ ಎಂದು ಕೊಂಚ ಸಮಯವನ್ನು ನೀಡಿ ಒಂಟಿಯಾಗಿ ತನ್ನ ಜೀವನದ ಸುಂದರ ಕ್ಷಣಗಳನ್ನು ಕಳೆಯಲು ಬಾಲಿಗೆ ಹಾರಿದ್ದಾರೆ.
ಇನ್ನು ನಿವೇದಿತಾ ಗೌಡರವರು ಸೋಶಿಯಲ್ ಮೀಡಿಯಾದಿಂದಲೇ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವಂತಹ ರ್ಯಾಪರ್ ಚಂದನ್ ಶೆಟ್ಟಿ ಹಾಗೆ ನಿವೇದಿತಾ ಗೌಡ ಫನ್ನಿ ರಿಲ್ಸ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
View this post on Instagram
ಇದೀಗ ನಿವೇದಿತಾ ಗೌಡ ಬಾಲಿಯಲ್ಲಿ ಸ್ವಿಮ್ಮಿಂಗ್ ಪೂಲ್ ಮುಂದೆ ನಿಂತುಕೊಂಡು ವಿವಿಧ ಬಂಗಿಗಳಲ್ಲಿ ತೆಗೆದುಕೊಂಡಿರುವ ಫೋಟೋಗಳಲ್ಲಿ ನಿವೇದಿತ ಗೌಡ ಸಖತ್ ಆಗಿ ಕಾಣಿಸುತ್ತಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ಸೂಪರ್ ಕ್ಯೂಟ್ ಸೇರಿದಂತೆ ಫೈಯರ್ ಎಮೋಜಿಗಳನ್ನು ಕಳಿಸುತ್ತಿದ್ದಾರೆ. ಯಥಾ ಪ್ರಕಾರ ನೆಟ್ಟಿಗರು ನಿವೇದಿತಾ ಗೌಡ ರವರ ಹೊಸ ಅವತಾರವನ್ನು ನೋಡಿ ಬ್ಯಾಡ್ ಕಮೆಂಟ್ಗಳನ್ನು ಕೂಡ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಿವೇದಿತಾ ಗೌಡ ಬಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.