ನಟ ವಿನೋದ್ ಪ್ರಭಾಕರ್ ರವರು ಕನ್ನಡದ ಚಿತ್ರರಂಗದ ಮೇರು ನಟನಾದ ಟೈಗರ್ ಪ್ರಭಾಕರ್ ರವರ ಮಗನಾಗಿದ್ದು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನಾ ಸಾಮರ್ಥ್ಯ ಹಾಗೂ ಬಾಡಿ ಬಿಲ್ಡರ್ ಆಗಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. “ದಿಲ್” ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮರಿ ಟೈಗರ್ ವಿನೋದ್ ಪ್ರಭಾಕರ್ ಇದೀಗ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿದ್ದಾರೆ. ತಮ್ಮ ಹೊಸ ಸಿನಿಮಾ “ಲಂಕಾಸುರ” ಚಿತ್ರದ ಬಗ್ಗೆ ಮಾತನಾಡುವಾಗ ತಮ್ಮ ಎರಡನೇ ಹೆಂಡತಿಯ ಬಗ್ಗೆ ಮಾತನಾಡಿದ್ದಾರೆ.
ನಟ ವಿನೋದ್ ಪ್ರಭಾಕರ್ 2002 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಇವರು ನಿಶಾ ವಿನೋದ್ ಪ್ರಭಾಕರ್ ರವರನ್ನು ವಿವಾಹವಾಗಿದ್ದಾರೆ. ದಿಲ್ ,ಡಿ ಬಾಸ್ ದರ್ಶನ್ ರವರ ಜೊತೆಗಿನ ನವಗ್ರಹ, ಹೋರಿ, ಟೈಸನ್, ಮರಿ ಟೈಗರ್, ರಾಬರ್ಟ್, ಇದೀಗ ಲಂಕಾಸುರ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ವಿನೋದ್ ಪ್ರಭಾಕರ್ ರವರು ಇತ್ತೀಚಿಗಷ್ಟೇ ತಮ್ಮ ತಂದೆ ಟೈಗರ್ ಪ್ರಭಾಕರ್ ರವರ ಬೆಡ್ ರೂಮಿನಲ್ಲಿರುವ ಹಳೆಯ ಕಾಲದ ವಿಸ್ಕಿ ಬಾಟಲ್ ಗಳ ಕಲೆಕ್ಷನ್ ಅನ್ನು ಯೂಟ್ಯೂಬ್ ನಲ್ಲಿ ವಿಡಿಯೋ ಮಾಡಿ ಹಾಕಿದ್ದಾರಾ ವಿಚಾರವಾಗಿ ಸುದ್ದಿಯಲ್ಲಿದ್ದರು.
ಈ ಬಾರಿ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತವಾಗಿ “ಟೈಗರ್ ಟಾಕೀಸ್” ಎಂಬ ಒಂದು ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿದ್ದಾರೆ. ಟೈಗರ್ ಟಾಕೀಸ್ ನಿರ್ಮಾಣ ಸಂಸ್ಥೆಯ ನಿರ್ಮಾಪಕರಾಗಿ ವಿನೋದ್ ಪ್ರಭಾಕರ್ ತಮ್ಮ ಪತ್ನಿ ನಿಶಾ ವಿನೋದ್ ಪ್ರಭಾಕರ್ ರವರು ಕಾರ್ಯನಿರ್ವಹಿಸಲಿದ್ದಾರೆ. ಇದೀಗಾಗಲೇ ಟೈಗರ್ ಟಾಕೀಸ್ ನಿರ್ಮಾಣದ ಅಡಿಯಲ್ಲಿ ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ನಿರ್ಮಾಣದಲ್ಲಿ ಲಂಕಾಸುರ ಎನ್ನುವ ಚಿತ್ರ ನಿರ್ಮಾಣವಾಗಿದೆ.
ಲಂಕಾಸುರ ಚಿತ್ರದ ಆಡಿಯೋ ಲಾಂಚ್ ಕೂಡ ಮುಗಿದಿದ್ದು “ಇಂಡಸ್ಟ್ರಿಯ ಹುಲಿಯ ವಂಶ” ಎನ್ನುವ ಹಾಡನ್ನು ಬಿಡುಗಡೆ ಮಾಡಿದ್ದಾರೆ. ವಿನೋದ್ ಪ್ರಭಾಕರ್ ರವರ ಟೈಗರ್ ಚಿತ್ರವನ್ನು ಪ್ರಮೋದ್ ಕುಮಾರ್ ರವರು ನಿರ್ದೇಶಿಸಿದ್ದು ವಿನೋದ್ ಪ್ರಭಾಕರ್ ಜೊತೆಗೆ ಲೂಸ್ ಮಾದ ಯೋಗಿ ಕೂಡ ಲಂಕಾಸುರ ಚಿತ್ರದಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ವಿಲನ್ ಆಗಿ ರವಿಶಂಕರ್ ರವರು ಬಣ್ಣ ಹಚ್ಚಿದ್ದಾರೆ. ಲಂಕಾಸುರ ಚಿತ್ರದ ನಾಯಕ ನಟಿಯಾಗಿ ಪಾರ್ವತಿ ಅರುಣ್ ಮತ್ತು ಆದ್ಯ ಪ್ರಿಯ ರವರು ತೆರೆ ಹಂಚಿಕೊಂಡಿದ್ದಾರೆ.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್ ಹಾಗು ಅವರ ಪತ್ನಿ ನಿಶಾ ವಿನೋದ್ ಪ್ರಭಾಕರ್ ತಮ್ಮ ಸಿನಿಮಾದ ಶೂಟಿಂಗ್ ಇದೀಗಾಗಲೇ ಮುಗಿದು ಅದನ್ನು ರಿಲೀಸ್ ಮಾಡಬೇಕಾಗಿದೆ. ಈ ತಿಂಗಳೇ ಲಂಕಾಸುರ ಚಿತ್ರವನ್ನು ರಿಲೀಸ್ ಮಾಡಬೇಕು ಎಂದುಕೊಂಡಿದ್ದೆವು ಆದರೆ ಇದೀಗ ಹಲವಾರು ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ ನಮ್ಮ ನಿರ್ಮಾಣದಲ್ಲಿ ಮೂಡಿಬಂದಿರುವ ಲಂಕಾಸುರ ಚಿತ್ರವನ್ನು ಸಮಯ ನೋಡಿಕೊಂಡು ರಿಲೀಸ್ ಮಾಡಲು ನಿರ್ಧರಿಸುತ್ತೇವೆ ಎಂದಿದ್ದಾರೆ.
ಈ ಸಂದರ್ಶನದ ವೇಳೆ ನಿಶಾ ವಿನೋದ್ ಪ್ರಭಾಕರ್ ತಮ್ಮ ಪತಿ ವಿನೋದ್ ಪ್ರಭಾಕರ್ ರವರಿಗೆ ಬರ್ತಡೇ ಗಿಫ್ಟ್ ಆಗಿ ನೀಡಿರುವ ವಿಭಿನ್ನ ರೀತಿಯ ಪಲ್ಸ್ ಚೆಕ್ ಮಾಡುವ ವಾಚ್ ಬಗ್ಗೆ ಮಾತನಾಡಿದರು ನಿಶಾ ವಿನೋದ್ ಪ್ರಭಾಕರ್ ಮಾತನಾಡಿ ನಾನು ಅವರ ಪಕ್ಕದಲ್ಲಿರುವಾಗ ಯಾವಾಗಲೂ ವಿನೋದ್ ಎನರ್ಜಿಟಿಕ್ ಆಗಿರುತ್ತಾರೆ. ಆದರೆ, ನಾನು ಇಲ್ಲದೆ ಇರುವ ಸಮಯದಲ್ಲಿ ನಾನು ಜೊತೆಗೆ ಇದ್ದೇನೆ ಎಂದುಕೊಂಡು ಈ ವಾಚ್ ನೋಡುತ್ತಾ ಇರಬೇಕು ಎಂದಿದ್ದಾರೆ ಈ ಮಾತಿಗೆ ವಿನೋದ್ ಪ್ರಭಾಕರ್ ರವರು ಈ ವಾಚ್ ನನಗೆ ಎರಡನೇ ನಿಶಾ ಇದ್ದ ಹಾಗೆ ಎಂದಿದ್ದಕ್ಕೆ ನಿಶಾ ವಿನೋದ್ ಪ್ರಭಾಕರ್ ಮಾತನಾಡಿ ನಿಮಗೆ ಎರಡನೇ ನಿಶಾ ಎಂದರೆ ಎರಡನೇ ಹೆಂಡತಿ ಎಂದಿಗೂ ಕೂಡ ಬರುವುದಿಲ್ಲ ಅದು ವಾಚ್ ಮಾತ್ರ ಎಂದು ಮುಗುಳ್ನಕ್ಕಿದ್ದಾರೆ.