ಸಕ್ಕತ್ ಕ್ಯೂಟ್ ಆಗಿರುವ ನಿಖಿಲ್ ಕುಮಾರಸ್ವಾಮಿ ಮಗ; ದೊಡ್ಡ ಗೌಡರ ಮರಿ ಮೊಮ್ಮಗ

ಯುವ ರಾಜಕಾರಣಿ ಹಾಗೂ ನಟ ನಿಖಿಲ್ ಕುಮಾರಸ್ವಾಮಿಯವರು ರೇವತಿ ಎನ್ನುವವರನ್ನು ವಿವಾಹವಾಗಿದ್ದು ಇವರಿಬ್ಬರಿಗೂ ಈಗಾಗಲೇ ಮಗನಿದ್ದಾನೆ ಎನ್ನುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. 2020ರಲ್ಲಿ ಬಿಡದಿಯ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ನಿಖಿಲ್ ಹಾಗೂ ರೇವತಿಯವರ ಮದುವೆ ಅದ್ದೂರಿಯಾಗಿ ನಡೆದಿತ್ತು. 2021ರ ಸೆಪ್ಟೆಂಬರ್ ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು.ಆ ಮಗುವಿನ ನಾಮಕರಣವನ್ನು ಕೂಡ ನೆರವೇರಿಸಿದ್ದಾರೆ.

 

 

ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಮಗನ ನಾಮಕರಣ ಶಾಸ್ತ್ರವನ್ನು ಮಾಡಿದ್ದು ನಾಮಕರಣ ಶಾಸ್ತ್ರದ ಜೊತೆಗೆ ಕನಕ ಅಭಿಷೇಕ ಮುಂತಾದ ಕಾರ್ಯಕ್ರಮಗಳನ್ನು ಕೂಡ ನಿಖಿಲ್ ಕುಮಾರಸ್ವಾಮಿ ಮನೆಯವರು ಹಮ್ಮಿಕೊಂಡಿದ್ದರು. ಈ ಸಮಾರಂಭವನ್ನು ಬಹಳ ಸರಳ ಹಾಗೂ ಸುಂದರವಾಗಿ ಮಾಡಿದ್ದು ನಿಖಿಲ್ ಕುಮಾರಸ್ವಾಮಿ ಮಗನಿಗೆ ಆವ್ಯಾನ್ ದೇವ್ ಎಂದು ನಾಮಕರಣವನ್ನು ಮಾಡಲಾಗಿದೆ.

 

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ರವರು ತಮ್ಮ ಮಗನ ನಾಮಕರಣದ ಫೋಟೋಗಳು ಹಾಗೂ ಹಲವಾರು ಫೋಟೋಶೂಟ್ಗಳನ್ನು ಮಾಡಿ ಕೂಡ ಮಾಡಿಸಿ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಅಭಿಮಾನಿಗಳಿಂದ ಎಲ್ಲಾ ಫೋಟೋಗಳು ವೈರಲ್ ಆಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಕುಮಾರಸ್ವಾಮಿ ಮಗನ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ.

ನಿಖಿಲ್ ಕುಮಾರಸ್ವಾಮಿಯವರು ಯುವರಾಜಕಾರಣಿಯಾಗಿದ್ದರೂ ಕೂಡ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು 2016ರಲ್ಲಿ ಬಿಡುಗಡೆಯಾದ ಜಾಗ್ವಾರ್ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದ್ದರು ತದನಂತರ ಸೀತಾರಾಮ ಕಲ್ಯಾಣ ಎಂಬ ಚಿತ್ರದಲ್ಲಿ ರಚಿತಾ ರಾಮ್ ರವರ ಜೊತೆ ಕೂಡ ನಟಿಸಿದ್ದರು ಇದಾದ ನಂತರ ರೈಡರ್ ಎಂಬ ಚಿತ್ರದಲ್ಲೂ ಕೂಡ ನಟಿಸಿದ್ದರು. ಈಗಲೂ ಕೂಡ ಹಲವಾರು ಚಿತ್ರಗಳನ್ನು ನಟ ನಿಖಿಲ್ ಕುಮಾರಸ್ವಾಮಿ ಒಪ್ಪಿಕೊಂಡಿದ್ದು ಅವುಗಳ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ.

 

 

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ರವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಇವರಿಬ್ಬರ ವಿವಾಹದ ಫೋಟೋಗಳು ಕೂಡ ಸಕ್ಕತ್ ವೈರಲ್ ಆಗಿದ್ದವು. ತದನಂತರ ರೇವತಿ ರವರ ಸೀಮಂತ ಕಾರ್ಯಕ್ರಮದ ಫೋಟೋಗಳ ಮೇಲೂ ಕೂಡ ನೆಟ್ಟಿಗರು ಕಣ್ಣು ಹಾಯಿಸಿದ್ದರು. ಇದಾದ ನಂತರ ಈಗ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗಳ ಮುದ್ದಿನ ಮಗ ಆವ್ಯಾನ ದೇವ್ ಫೋಟೋಗಳು ಕೂಡ ಬಹಳ ವೈರಲ್ ಆಗುತ್ತಿವೆ.

Be the first to comment

Leave a Reply

Your email address will not be published.


*