ಭಾರತ ದೇಶದ ಪ್ರತಿಯೊಬ್ಬ ನಾಗರಿಕನು ಕೂಡ ತಾವುಗಳಿಸಿದ ಹಣದಲ್ಲಿ ಅತ್ಯಲ್ಪ ಹಣವನ್ನಾದರೂ ಹೂಡಿಕೆ ಮಾಡಿ ಉಳಿತಾಯ ಮಾಡಬೇಕು ಅದನ್ನು ಕಷ್ಟ ಕಾಲಕ್ಕೆ ಉಪಯೋಗಿಸಬೇಕು ಎಂದು ಇಚ್ಛೆ ಪಡುತ್ತಾರೆ. ಹೂಡಿಕೆ ಮಾಡುವ ಜಾಗಗಳು ಹಲವಾರು ಎಂದು ಒಂದು ಜಾಗದಲ್ಲಿ ಉತ್ತಮ ಆದಾಯ ಪಡೆದರೆ ತಮ್ಮ ಹಣಕ್ಕೆ ಸುರಕ್ಷತೆ ಇರುವುದಿಲ್ಲ ಹಣಕ್ಕೆ ಸುರಕ್ಷತೆ ಇದ್ದರೆ ಉತ್ತಮ ಆದಾಯ ಕೂಡ ಸಿಗುವುದಿಲ್ಲ ಹೀಗಾಗುತ್ತದೆ ಹಾಗಾಗಿ ಉತ್ತಮ ಹೂಡಿಕೆ ಮತ್ತು ಉತ್ತಮ ಆದಾಯ ಎರಡಕ್ಕೂ ಸರಿಯಾದ ವ್ಯವಸ್ಥೆ ಎಂದರೆ ಅದು ಭಾರತದ ಅಂಚೆ ಇಲಾಖೆ.
ಅಂಚೆ ಇಲಾಖೆಯು ನಂಬಲರ್ಹವಾದ ಕೇಂದ್ರವಾಗಿದ್ದು ಯಾವುದೇ ವ್ಯಕ್ತಿಯು ಯಾವುದೇ ಭಯವಿಲ್ಲದೆ ಅಂಚೆ ಕಚೇರಿಯಲ್ಲಿ ತಾವು ಬೆವರು ಹರಿಸಿ ದುಡಿದ ಹಣವನ್ನು ಠೇವಣಿಗೆ ಇಡಬಹುದಾಗಿದೆ. ಒಮ್ಮೊಮ್ಮೆ ನಾವು ಯಾರನ್ನು ನಂಬಿ ಕೂಡಿಕೆ ಮಾಡಿರುತ್ತೇವೆ ಆ ಹೂಡಿಕೆಯ ಹಣವು ಸ್ವಲ್ಪ ಕಾಲದಲ್ಲಿ ನಮ್ಮಿಂದ ದೂರವಾಗಿ ಅದರಿಂದ ನೋವನ್ನು ಅನುಭವಿಸಬೇಕಾಗಿ ಬರುತ್ತದೆ. ಪೋಸ್ಟ್ ಆಫೀಸ್ನಲ್ಲಿ ಮಾಡುವ ಹೂಡಿಕೆಯನ್ನು ಕಡಿಮೆ ಅಪಾಯದ ಹೂಡಿಕೆ ಎಂದೇ ಪರಿಗಣಿಸಲಾಗುತ್ತದೆ.
ಆದ್ದರಿಂದಲೇ ಕೇಂದ್ರ ಸರ್ಕಾರವು ಹಲವು ಹೂಡಿಕೆಯ ಯೋಜನೆಗಳನ್ನು ಅಂಚೆ ಕಚೇರಿಗೆ ನೀಡುತ್ತದೆ. ಇದರಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಹೂಡಿಕೆ ಮಾಡಬಹುದಾಗಿದೆ. ಎಸ್ ಸಿ ಎಸ್ ಎಸ್ ಯೋಜನೆಯ ಅಡಿಯಲ್ಲಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ನಾಗರೀಕ ನೌಕರರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ರಕ್ಷಣಾ ನೌಕರರು ಹಲವಾರು ಶರತ್ತುಗಳೊಂದಿಗೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ.
ಎಸ್ ಸಿ ಎಸ್ ಎಸ್(scss) ಯೋಜನೆಯ ಅಡಿಯಲ್ಲಿ ಒಬ್ಬ ವ್ಯಕ್ತಿ ಕನಿಷ್ಠ ಒಂದು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕು ತದನಂತರ ಗರಿಷ್ಠ 15 ಲಕ್ಷ ರೂಪಾಯಿಗಳ ವರೆಗೂ ಹಣವನ್ನು ಪಡೆಯಬಹುದಾಗಿದೆ. ಎಸ್ ಸಿ ಎಸ್ ಎಸ್ ಯೋಜನೆ ಐದು ವರ್ಷಗಳ ಅವಧಿಯವರೆಗೂ ಆಕ್ಟಿವ್ ಆಗಿರುತ್ತದೆ. ಯೋಜನೆಯಲ್ಲಿ ಹೂಡಿಕೆಯನ್ನು ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 80 c ಅಡಿಯಲ್ಲಿ ಪಡೆಯಬಹುದಾಗಿದೆ. ಈ ಯೋಜನೆಯು ಐದು ವರ್ಷಗಳವರೆಗೆ ಚಾಲ್ತಿಯಲ್ಲಿದ್ದು ಇದನ್ನು ಮೂರು ವರ್ಷಗಳವರೆಗೂ ಕೂಡ ವಿಸ್ತರಿಸಬಹುದಾಗಿದೆ.