2005 ರಲ್ಲಿ ತೆರೆ ಕಂಡ ಸೂಪರ್ ಡೂಪರ್ ಸಿನಿಮಾ ನೆನಪಿರಲಿ ಚಿತ್ರ ಇಂದಿಗೂ ಎಲ್ಲರಿಗೂ ನೆನಪಿರುತ್ತದೆ . ಸ್ಯಾಂಡಲ್ ವುಡ್ ನಲ್ಲಿ ಈ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಟಿ ವರ್ಷ ಅಭಿನಯದಲ್ಲಿ ಈ ಚಿತ್ರ ಮೂಡಿಬಂದಿತ್ತು ಲವ್ಲಿ ಸ್ಟಾರ್ ಪ್ರೇಮ್ ನೆನಪಿರಲಿ ಚಿತ್ರದ ನಂತರ ನೆನಪಿರಲಿ ಪ್ರೇಮ್ ಎಂದು ಬದಲಾದರು ಅಷ್ಟರ ಮಟ್ಟಿಗೆ ಈ ಚಿತ್ರ ಸದ್ದು ಮಾಡಿತ್ತು.
ನೆನಪಿರಲಿ ಚಿತ್ರ ವರ್ಷ ರವರಿಗೆ ದೊಡ್ಡ ಜನಪ್ರಿಯತೆ ತಂದು ಕೊಟ್ಟಿತ್ತು ಈ ಚಿತ್ರದ ನಂತರ ಹಲವಾರು ಅವಕಾಶಗಳು ದೊರಕಿದವು ನವಗ್ರಹ ಸಿನಿಮಾದಲ್ಲಿ ವರ್ಷ ನಟಿಸಿದ್ದರು ನವಗ್ರಹ ಸಿನಿಮಾದ ನಂತರ ಇವರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.ವರ್ಷ ತಮ್ಮ ಅಮೋಘ ನಟನೆಯ ಮೂಲಕ ಸಿನಿಪ್ರಿಯರ ಮನ ಗೆದ್ದಿದ್ದರು ಅವಕಾಶಗಳು ಇದ್ದರೂ ಕೂಡ ಇವರು ಚಿತ್ರರಂಗದಿಂದ ದೂರವಾಗಿದ್ದರು.
ಸಿನಿಮಾ ಜೊತೆ ಯಾರಿಗುಂಟು ಯಾರಿಗಿಲ್ಲ ಶೋ ನಿರೂಪಕಿಯಾಗಿ ಕೆಲಸ ಮಾಡಿದ್ದರು ವರ್ಷ ನಟಿಸಿದ್ದು ಕೇವಲ ಕೆಲವು ಸಿನಿಮಾಗಳಲ್ಲಿ ಮಾತ್ರ ಆದರೂ ಕೂಡ ಅವರನ್ನು ಜನ ಮರೆತಿಲ್ಲ ವರ್ಷ ಸ್ಯಾಂಡಲ್ ವುಡ್ ನಿಂದ ದೂರವಾಗಿದ್ದಕ್ಕೆ ಅವರ ಹೈಟ್ ಕಾರಣವೆಂದು ಹಲವು ಜನರು ಹೇಳುತ್ತಾರೆ. ವರ್ಷ ದರ್ಶನ್ ಹಾಗೂ ಸುದೀಪ್ ಜೊತೆ ಸಿನಿಮಾ ಮಾಡಿದರೆ ಸೆಟ್ ಆಗುತ್ತಾರೆ ಇನ್ಯಾವುದೇ ನಟರ ಜೊತೆ ಅವರಿಗೆ ಪೇರ್ ಹೊಂದಾಣಿಕೆ ಆಗುವುದಿಲ್ಲ.
ವರ್ಷ ರವರಿಗೆ ಕಿರುತೆರೆಯಲ್ಲಿ ಹಲವು ಅವಕಾಶಗಳು ಇದ್ದವು ಆದರೆ ಕೂಡ ಅವರು ಸಿನಿಮಾ ರಂಗದಿಂದ ದೂರ ಉಳಿದರು ಸೃಜನ್ ಲೋಕೇಶ್ ಹಾಗೂ ಶ್ವೇತಾ ಚಂಗಪ್ಪ ಗುರುತಿಸಿಕೊಂಡ ಸಮಯದಲ್ಲಿ ವರ್ಷ ಕೂಡ ಗುರುತಿಸಿಕೊಂಡಿದ್ದರು ವರ್ಷಾ ಬರ ಬರುತ್ತಾ ವೇಟ್ ಗೇನ್ ಮಾಡಿಕೊಂಡರು ಅಷ್ಟೇ ಅಲ್ಲದೆ ಕೂದಲಿನ ಸಮಸ್ಯೆ ಕೂಡ ಅವರಿಗೆ ಕಾಡುತ್ತಿತ್ತು ಒಂದು ಕಡೆ ಅವಕಾಶ ಕಮ್ಮಿ ಆದರೆ ಇನ್ನೊಂದು ಕಡೆ ಈ ರೀತಿ ತೊಂದರೆಗಳಾದವು ಹಾಗಾಗಿ ವರ್ಷ ಕೌಟುಂಬಿಕ ಜೀವನದ ಕಡೆ ಹೆಚ್ಚು ಗಮನಹರಿಸಿದರು.
ವರ್ಷ ಕಾಮೇಶ್ ಎನ್ನುವವರನ್ನು ವಿವಾಹವಾಗಿದ್ದಾರೆ ಇವರಿಗೆ ಇಬ್ಬರು ಮಕ್ಕಳಿದ್ದಾರೆ ಅಮ್ಮ ಮಗಳ ಕುರಿತು ಒಂದು ವೆಬ್ ಸೀರೀಸ್ ನಲ್ಲಿ ಇತ್ತೀಚಿಗೆ ವರ್ಷ ಹಾಗೂ ಶಾಲಿನಿ ನಟಿಸಿದ್ದರು ಈ ಸೀರೀಸ್ ನಲ್ಲಿ ಅಮ್ಮ ಮಗಳ ಸಂಬಂಧವನ್ನು ತೋರಿಸಲಾಗಿತ್ತು ಹಲವು ವರ್ಷಗಳ ನಂತರ ವರ್ಷ ರವರನ್ನು ತೆರೆಯ ಮೇಲೆ ನೋಡಿ ಎಲ್ಲರು ಮೆಚ್ಚಿಕೊಂಡಿದ್ದರು
1 thought on “ಸ್ಟಾರ್ ನಟಿಯಾಗಿದ್ದ ವರ್ಷಾಗೆ ಇದ್ದಕ್ಕಿದ್ದಂತೆ ಇಂಥ ಪರಿಸ್ಥಿತಿ, ನಟಿ ವರ್ಷಾಗೆ ಕಾಡಿತ್ತು ಅದೊಂದು ಕಾಯಿಲೆ, ನಟಿ ವರ್ಷ ದುರಂತ ಕಥೆ!!”