ದಣಿವಿಲ್ಲದ ದಿವ್ಯ, ಪ್ರವಚನಕಾರ ಸಿದ್ದೇಶ್ವರ ಸ್ವಾಮೀಜಿ(siddeshwara Swamiji) ಪಿಎಮ್ ಮೋದಿ(PM Modi) ರವರು ಸುತ್ತೂರು ಶಾಖ ಮಠದ(suttru Shaka mat) ಕಾರ್ಯಕ್ರಮಕ್ಕೆ ಬಂದ ವೇಳೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸುತ್ತೂರಿನ ಶಾಖ ಮಠ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರಿನಲ್ಲಿದೆ. ಸುತ್ತೂರಿನ ಕಾರ್ಯಕ್ರಮಕ್ಕೆ ರಾಜ್ಯಪಾಲ ತಾವರ್ ಚೆಂದ್ ಗೆಹ್ಲೋಟ್ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM basavaraja bommai), ಸಿದ್ದಗಂಗಾ ಶ್ರೀ, ಸಿದ್ದೇಶ್ವರ ಶ್ರೀಗಳು ಉಪಸ್ಥಿತರಿದ್ದರು ಈ ವೇಳೆ ಪ್ರಧಾನಮಂತ್ರಿಗೆ ರುದ್ರಾಕ್ಷಿಮಾಲೆಯನ್ನು ಹಾಕಿ ಮೈಸೂರು ಪೇಟವನ್ನು ತೋರಿಸಿ ಸನ್ಮಾನ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಪ್ರಧಾನಮಂತ್ರಿ ಮೋದಿ ಅವರಿಗೆ ಮೋದಿ ತಮ್ಮ ತಾಯಿಯ(PM Modi mother) ಜೊತೆಗಿರುವ ಫೋಟೋ ಹಾಗೂ ಬಸವಣ್ಣನ ಫೋಟೋವನ್ನು ಕಾಣಿಕೆಯಾಗಿ ನೀಡಿ ಗೌರವಿಸಿದ್ದಾರೆ. ಸುತ್ತೂರು ಶಾಖ ಮಠದ ಸಿದ್ದೇಶ್ವರ ಸ್ವಾಮೀಜಿಗಳ ಭಾಷಣವನ್ನು (siddeshwara Swamiji speech)ಕೇಳಿ ಮೋದಿ ಫಿದಾ ಆಗಿದ್ದಾರೆ.
ಸುತ್ತೂರು ಶಾಖ ಮಠದ ಸಿದ್ದೇಶ್ವರ ಸ್ವಾಮಿಜಿ ಮೋದಿ ರವರನ್ನು ಹೊಗಳುತ್ತಾ ಇಂತಹ ಪ್ರಧಾನಿಯನ್ನು ಪಡೆದ ನಮ್ಮ ದೇಶವೇ ಭಾಗ್ಯ ತಮ್ಮ ಉತ್ತಮ ಚಿಂತನೆಗಳ ಮೂಲಕ ಜನರಿಗೆ ಒಳ್ಳೆಯದನ್ನೇ ಮಾಡುತ್ತಾ ಬಂದಿದ್ದಾರೆ. ಜನ ಚಿಂತನೆಗಾಗಿ, ದೇಶದ ಅಭಿವೃದ್ಧಿಗಾಗಿ ಅವರು ತಮ್ಮನ್ನು ತಾವು ಮೀಸಲಾಗಿಟ್ಟಿದ್ದಾರೆ.
ಭಾರತ ಮಾತ್ರವಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳ ಜನರು ಅವರನ್ನು ಪ್ರೀತಿಸುತ್ತಾರೆ. ಅದು ತುಂಬಾ ಮೆಚ್ಚುವಂತಹ ಗುಣವಾಗಿದೆ. ಅವರ ಅಷ್ಟೆಲ್ಲ ಕಾರ್ಯಕ್ರಮಗಳ ನಡುವೆ ಅವರ ಪ್ರಸನ್ನತೆ ಕಡಿಮೆಯಾಗುವುದಿಲ್ಲ ಮೋದಿಜಿ ಈ ಕಾರ್ಯಕ್ರಮದಲ್ಲಿ ಮೂರು ಗ್ರಂಥಗಳನ್ನು ಬಿಡುಗಡೆ ಮಾಡಿದ್ದಾರೆ.
ಅವೆಲ್ಲ ಯೋಗದ ಗ್ರಂಥಗಳು ಶಿವ ಸೂತ್ರ, ಪತಂಜಲಸೂತ್ರ, ಭಕ್ತಿ ಸೂತ್ರ ಅವರಿಂದಲೇ ಈ ಗ್ರಂಥಗಳನ್ನು ಏಕೆ ಬಿಡುಗಡೆ ಮಾಡಿಸಿದೆವು ಎಂದರೆ ಅವರು ಯೋಗಿಗಳಾಗಿರುವುದರಿಂದ ಈ ಗ್ರಂಥಗಳನ್ನು ಅವರ ಕೈಯಿಂದ ಬಿಡುಗಡೆ ಮಾಡಿಸಲಾಗಿದೆ. ಅವರು ಜೀವನವನ್ನು ಹೇಗೆ ಸಾಗಿಸುತ್ತಿದ್ದಾರೆ ಎಂದರೆ ಅವರ ಬಳಿ ಜೇಬುಗಳಿವೆ ಆದರೆ ಅವುಗಳನ್ನು ತುಂಬಿಸುವ ಮನಸ್ಸು ಅವರಿಗಿಲ್ಲ.
ಜನರ ಹೃದಯದಲ್ಲಿ ಅವರ ಮಾತುಗಳನ್ನು ಮೂಡಿಸುತ್ತಾರೆ. ಭಾರತ ದೇಶ ಕಂಡ ಬಹಳ ಅಪರೂಪದ ಪ್ರಧಾನ ಮಂತ್ರಿ ಆ ಮೂರು ಗ್ರಂಥಗಳಲ್ಲಿ ಇರುವ ವಿಚಾರವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ,ನಿಮ್ಮನ್ನು ಪ್ರೀತಿಸಿರಿ, ನಿಮ್ಮ ಜನರನ್ನು ಪ್ರೀತಿಸಿರಿ, ಇಡೀ ಜಗತ್ತನ್ನು ಪ್ರೀತಿಸಿ ಇದು ಯೋಗ. ಇದು ಬಹಳ ಸುಂದರವಾದ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡುವುದೇ ಸುಂದರ ನೀವು ಮಾತನಾಡುವ ಮಾತುಗಳು ಸುಂದರವಾಗಿರುತ್ತದೆ. ನಿಮ್ಮ ಮಾತುಗಳನ್ನು ಜನರು ಗಮನವಿಟ್ಟು ಆಲಿಸುತ್ತಾರೆ. ಮೋದಿ ರವರ ತಾಯಿಗೆ ನೂರು ವರ್ಷ ಹಾಗೆ ಇವರು ಕೂಡ ನೂರು ವರ್ಷಕ್ಕಿಂತ ಹೆಚ್ಚಾಗಿ ಬಾಳುತ್ತಾರೆ. ಇವರನ್ನು ನೋಡಿ ಯುವಕರು ದಿನಪೂರ್ತಿ ಕೆಲಸ ಮಾಡಿದರು ಮುಖದ ಮೇಲಿರುವ ನಗು ಕಡಿಮೆಯಾಗುವುದಿಲ್ಲ ಎಂದು ಕಲಿಯಬೇಕಾಗಿದೆ. ಎಂದು ಸುತ್ತೂರು ಶಾಖ ಮಠದ ಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿದ್ದಾರೆ.