ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ 90ರ ದಶಕದಲ್ಲಿ ಆಳಿದ ಕನಸಿನ ರಾಣಿ ಮಾಲಾಶ್ರೀಯವರ ಮಗಳು ರಾಧನಾ ರಾಮ್ ಈಗ ಹೆಚ್ಚು ಸುದ್ದಿಯಲ್ಲಿದ್ದಾರೆ. ಕನ್ನಡದ ಮೊದಲ ಚಿತ್ರದಲ್ಲಿಯೇ ಬಾಸ್, ಚಾಲೇಂಜಿಗ್ ಸ್ಟಾರ್ ದರ್ಶನ ಅವರಿಗೆ ನಾಯಕಿಯಾಗಿ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ. ಇದರ ಹೊರತಾಗಿ ರಾಧನಾ ಅವರು ಸಾಮಾಜಿಕ ಸೇವೆ ಮಾಡುವಲ್ಲಿಯೂ ಕೂಡ ಮುಂಚೂಣಿಯಲ್ಲಿದ್ದು, ದರ್ಶನ ಜೊತೆ ಸೇರಿ ಸೇವೆ ಮಾಡುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಖ್ಯಾತಿಯ ನಟ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ಬಿಡುಗಡೆಯಾಗಿದೆ. ಈ ಮಧ್ಯೆ ವರಮಹಾಲಕ್ಷ್ಮಿ ಹಬ್ಬದಂದು ಅವರ ಹೊಸ ಚಿತ್ರವೊಂದರ ಮುಹೂರ್ತ ಸದ್ದಿಲ್ಲದೆ ನೆರವೇರಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಹೊಸ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಲಿದ್ದಾರೆ.
ಸ್ಯಾಂಡಲ್ವುಡ್ನ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿರುವ ನಟಿ ಮಾಲಾಶ್ರೀ ಮಗಳು ರಾಧನಾ ರಾಮ್ ಇಲ್ಲಿಯವರೆಗೂ ಅನನ್ಯಾ ರಾಮ್ ಆಗಿದ್ದ ಇವರೀಗ, ರಾಧನಾ ರಾಮ್ ಹೆಸರಿನಿಂದ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ. ಇಂತಹ ಯಶಸ್ವಿ ಲೇಡಿ ಬಾಂಡ್ ನಟಿ ಮಾಲಾಶ್ರೀ ಅವರ ಮಗಳು ದರ್ಶನ್ ಅವರ ಮುಂದಿನ ನಾಯಕಿ ಬೇರೆ ಯಾರೂ ಅಲ್ಲ, ಸ್ಯಾಂಡಲ್ವುಡ್ನ ಮೂಲ ಮಹಿಳಾ ಸೂಪರ್ಸ್ಟಾರ್ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಎನ್ನುವುದು ತಿಳಿದುಬಂದಿದೆ.
ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ನಿರ್ದೇಶಕ ತರುಣ್ ಸುಧೀರ. ಈ ಸಂದರ್ಭದಲ್ಲಿ ಮಾತನಾಡಿದ ಮಾಲಾಶ್ರೀ, ‘ರಾಧನಾಗೆ ಬಾಲ್ಯದಿಂದಲೂ ನಟನೆ ಇಷ್ಟ ಎಂದಿದ್ದಾರೆ. ಮುಂಬೈನಲ್ಲಿ ನಟನೆ ಮತ್ತು ನೃತ್ಯದಲ್ಲಿ ವಿಶೇಷ ತರಬೇತಿ ಪಡೆಡಿದ್ದಾರೆ. ನನ್ನ ಮಗಳು ಸ್ವಂತ ಪ್ರತಿಭೆ ಮೂಲಕ ಉದ್ಯಮದಲ್ಲಿ ಮಿಂಚಬೇಕು ಎಂಬುದು ನನ್ನ ಆಸೆ’ ಎಂದಿದ್ದಾರೆ..
ಇನ್ನು ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56 ನೇ ಚಿತ್ರವಾಗಿದ್ದು ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಇನ್ನೊಂದು ವಿಶೇಷ, ತನ್ನ ಮೊದಲ ಚಿತ್ರವೇ ಪ್ಯಾನ್ ಇಂಡಿಯಾ ಸಿನಿಮಾ ಎಂದರೇ ರಾಧನಾ ರಾಮ್ ಅದೃಷ್ಟವೇ ಸರಿ, ಆದಾಗ್ಯೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕೆಯು ಸಹ ಈ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದಾರೆ. ದರ್ಶನ್ ಜೊತೆಗೆ ಅಭಿನಯಿಸುತ್ತಿದ್ದು ಮೊದಲ ಚಿತ್ರವೇ ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಆಕೆಯ ಮೇಲೆ ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಿದೆ.
ಚಿತ್ರದ ಜೊತೆ ಜೊತೆಯಲ್ಲಿಯೇ ದರ್ಶನ ಜೊತೆ ಸೇರಿ ಅನಾಥಶ್ರಮದಲ್ಲಿ ಸೇವೆ ಮಾಡುತ್ತಿರುವ ಚಿತ್ರಗಳು ಸುದ್ಸಿ ವೈರಲ್ ಆಗಿದ್ದು, ಅಭಿಮಾನಿಗಳು ಕೂಡ ಸಂತೋಷಗೊಂಡಿದ್ದಾರೆ. ರಾಧನಾ ರಾಮ್ ಅವರ ಸಾಮಾಜಿಕ ಸೇವೆ ಮುಂದುವರೆಯಲಿ ಎಂದು ಆಶಿಸಿದ್ದಾರೆ