ನಟಿ ಮೇಘನಾ ರಾಜ್ ಸದಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಮಗ ರಾಯನ್ ಬಗ್ಗೆ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಿರುತ್ತಾರೆ. ಮೇಘನಾ ರಾಜ್ ಸಿಂಗಲ್ ಪೇರೆಂಟ್ ಆಗಿ ತನ್ನ ಮಗನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಪ್ರೀತಿಯಿಂದ ಬೆಳೆಸುತ್ತಿದ್ದಾರೆ.
ತನ್ನ ಮಗ ರಾಯನ್ ತಂದೆಯಂತೆ ಉತ್ತಮ ಸಂಸ್ಕಾರ ದಿಂದ ಬೆಳೆಯಬೇಕು ಎಂದು ತಂದೆಯ ಗುಣಗಳನ್ನು ಹೇಳಿಕೊಡುತ್ತಾರೆ. ಅಷ್ಟೇ ಅಲ್ಲದೆ ಅವರ ಸಿನಿಮಾಗಳನ್ನು ತೋರಿಸಿ ತಮ್ಮ ಮಗನಿಗೆ ತಂದೆಯ ಗುಣಗಳನ್ನು ಕಲಿಸುತ್ತಿದ್ದಾರೆ. ರಾಯನ್ ತಂದೆ ಧ್ರುವ ಸರ್ಜಾ ಮಾತನಾಡಿರುವ ಆಡಿಯೋ ಗಳಲ್ಲಿ ಕೇಳಿಸುವ ಮೂಲಕ ತನ್ನ ಮಗನಿಗೆ ತಮ್ಮ ತಂದೆಯ ದನಿಯನ್ನು ಪರಿಚಯ ಮಾಡಿಕೊಡುತ್ತಾರೆ.
ಇದೀಗ ನಟಿ ಮೇಘನ ರಾಜ್ ಮತ್ತೊಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನನ್ನ ಮಗ ರಾಯನ್ ಇಂದು ಚಿಕ್ಕವನು ಆದರೂ ಕೂಡ ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾನೆ ನಿಮಗೆಲ್ಲರಿಗೂ ಗೊತ್ತಿರುವಂತೆ ಚಿರಂಜೀವಿ ಸರ್ಜಾ ರವರ ಕೊನೆಯ ಚಿತ್ರ ರಾಜಮಾರ್ಥಂಡ ಇನ್ನು ಕೂಡ ಬಿಡುಗಡೆಯಾಗಿಲ್ಲ ಚಿರು ಅಭಿನಯದ ಕೊನೆಯ ಚಿತ್ರ ರಾಜ ಮಾರ್ತಾಂಡ ಚಿತ್ರವನ್ನು ಫೆಬ್ರವರಿ 17ಕ್ಕೆ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
ಚಿರಂಜೀವಿ ಸರ್ಜಾ ರವರ ಕೊನೆಯ ಚಿತ್ರ ವಾದ ರಾಜ ಮಾರ್ತಂಡ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ರವರ ಮಗ ರಾಯನ್ ಒಂದು ಸಣ್ಣ ಪಾತ್ರವನ್ನು ಮಾಡಿದ್ದಾನೆ. ಅಪ್ಪನ ಕೊನೆಯ ಚಿತ್ರ ಮಗನ ಮೊದಲ ಚಿತ್ರವಾಗುತ್ತಿದೆ. ಅಷ್ಟೇ ಅಲ್ಲದೆ ಮೇಘನಾ ರಾಜ್ ರವರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಗ ರಾಯನ್ ನಟಿಸುತ್ತಿದ್ದಾನೆ ಎನ್ನುವ ಮಾತು ಕೇಳಿ ಬರುತ್ತಿದೆ.