Meghana Raj: ಮೇಘನಾ ರಾಜ್ ಬಾಲ್ಯದ ಯಾರೂ ನೋಡದ ಅಪರೂಪದ ವಿಡಿಯೋ ವೈರಲ್

Meghana Raj: ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಂದರರಾಜ್(Sundar raj) ಮತ್ತು ಪ್ರಮೀಳಾ ಜೋಷಾಯ್(Pramila Joshi) ದಂಪತಿಗೆ 1990 ರಲ್ಲಿ ಹುಟ್ಟದ ಏಕೈಕ ಪುತ್ರಿ ಮೇಘನಾ ರಾಜ್(Meghana Raj). ಬೆಂಗಳೂರಿನಲ್ಲಿ ಜನಿಸಿದ ಮೇಘನಾ ತಮ್ಮ ಶಾಲಾ ಶಿಕ್ಷಣವನ್ನು ನಗರದ ಜನಪ್ರಿಯ ಶಿಕ್ಷಣ ಸಂಸ್ಥೆಯಾದ ಬಾಲ್ಡ್ವಿನ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು.

 

 

ಅವರು ನಂತರದ ಕ್ರಿಶ್ಚಿಯನ್ ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಪದವಿಯನ್ನೂ ಪಡೆದರು. ಬಾಲ್ಯದಲ್ಲಿ ಕಲೆ ಮತ್ತು ನಟನೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಮೇಘನಾ ರಾಜ್ ಅವರು ತಮ್ಮ ತಂದೆ ಸುಂದರ್ ರಾಜ್ ಅವರೊಂದಿಗೆ ಹಲವು ನಾಟಕಗಳಲ್ಲಿ ನಟಿಸಿದ್ದಾರೆ.

 

Meghana Raj

 

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ ಮೇಘನಾಗೆ ಸಿನಿಮಾ ವೃತ್ತಿ ಆರಂಭಿಸಲು ಅವಕಾಶ ನೀಡಿದ್ದು ಮಲಯಾಳಂ ಸಿನಿಮಾ. 2009ರಲ್ಲಿ ತೆರೆಕಂಡ `ಬಂದು ಅಪ್ಪಾರಾವ್ ಆರ್‌ಎಂಪಿ’ ಚಿತ್ರದ ಮೂಲಕ ಸಿನಿಮಾ ಜೀವನ ಆರಂಭಿಸಿದ ಮೇಘನಾ, ಈ ಹಿಂದೆ ಕೆ.ಬಾಲಚಂದರ್ ನಿರ್ಮಾಣದ `ಕೃಷ್ಣಲೀಲೈ’ ಚಿತ್ರದಲ್ಲಿ ನಟಿಸಿದ್ದರು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಬಿಡುಗಡೆಯಾಗಲಿಲ್ಲ.

 

Meghana Raj

 

ನಂತರ 2010 ರಲ್ಲಿ, ಅವರು ಲೂಸ್ ಮಾದ ಯೋಗೇಶ್ ಅವರೊಂದಿಗೆ `ಪುಂಡ’ ಚಿತ್ರದ ಮೂಲಕ ಚಂದನವನದಲ್ಲಿ ನಾಯಕಿಯಾಗಿ ತಮ್ಮ ಇನ್ನಿಂಗ್ಸ್ ಆರಂಭಿಸಿದರು. ಆದರೆ ಮೇಘನಾ ಅವರ ಸಿನಿಮಾ ಕೆರಿಯರ್ ಗೆ ಬ್ರೇಕ್ ಕೊಟ್ಟಿದ್ದು ಮಲಯಾಳಂ ಸಿನಿಮಾ. ಹತ್ತು ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಮೇಘನಾ ಅಲ್ಲಿ ಅಗ್ರ ನಾಯಕಿಯಾದರು.

 

Meghana Raj

 

2013 ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಡೂಪರ್ ಸಿನಿಮಾ “ರಾಜಾಹುಲಿ’ ಮೂಲಕ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿದ ಅವರು, ನಂತರ “ಬಹುಪರಾಕ್”, “ಆಟಗಾರ” ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

 

Meghana Raj

 

2018 ರಲ್ಲಿ, ಅವರು ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಕನ್ನಡದ ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾದರು, ಅವರ ಚಲನಚಿತ್ರ ಜೀವನವು ಸುಗಮವಾಗಿ ಸಾಗುತ್ತಿದೆ. ಸಿನಿಮಾ ಲೈಫ್ ನಲ್ಲಿ ಖುಷಿಯಾಗಿ, ದಾಂಪತ್ಯ ಜೀವನದಲ್ಲೂ ಖುಷಿಯಾಗಿದ್ದ ಮೇಘನಾ ಮುಂದೊಂದು ದಿನ ಸಿಡಿಲು ಬಡಿದು ಜೀವನ ದುಃಖಮಯವಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

 

 

ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಚಿರು ಮತ್ತು ಮೇಘನಾ ರಾಜ್ ಬಗ್ಗೆ ಒಂದಿಲ್ಲೊಂದು ವಿಷಯ ಹರಿದಾಡುತ್ತಿದೆ. ಇದೀಗ ಮೇಘನಾ ರಾಜ್ ಬಾಲ್ಯದ ಅಪರೂಪದ ಫೋಟೋಗಳು ಹರಿದಾಡುತ್ತಿದ್ದು, ಮೇಘನಾ ಬಾಲ್ಯದಲ್ಲಿ ಹೇಗಿದ್ದರು ನೋಡಿ.

Leave a Comment