ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದ್ದು, ಇದು ಏನು ಎಂದು ಜನರು ಕುತೂಹಲದಿಂದ ಚರ್ಚಿಸುತ್ತಿದ್ದಾರೆ. 2020, ಭಾನುವಾರ ನನ್ನ ಜೀವನ ಬದಲಾಯಿತು. ಅಂದಿನಿಂದ ನನಗೆ ಒಂದು ಪ್ರಶ್ನೆ ಕೇಳಲಾಗುತ್ತಿದೆ. ಆ ಒಂದು ಪ್ರಶ್ನೆಗೆ ಉತ್ತರಿಸುವ ಸಮಯ ಬಂದಿದೆ ಎಂದು ಮೇಘನಾ ರಾಜ್ ಪೋಸ್ಟ್ ಮಾಡಿದ್ದರು. ನೀವೆಲ್ಲ ಕೇಳುತ್ತಿರುವ ಪ್ರಶ್ನೆಗೆ ಇಂದು ಭಾನುವಾರ 10.35ಕ್ಕೆ ಉತ್ತರಿಸುತ್ತೇನೆ ಎಂದು ನಟಿ ಮೇಘನಾ ರಾಜ್ ಪೋಸ್ಟ್ ಮಾಡಿದ್ದಾರೆ.
ಮೇಘನಾ ರಾಜ್ ಸರ್ಜಾ ‘ತತ್ಸಮ ತದ್ಭವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಶೇರ್ ಮಾಡಿರುವ ಅವರು, “ನಾನು ಯಾವಾಗ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತೇನೆ? ಈ ಪ್ರಶ್ನೆಯನ್ನು ಹಲವು ಬಾರಿ ಎದುರಿಸಿದ್ದೇನೆ. ಉತ್ತರ ಇಲ್ಲಿದೆ” ಎಂದಿದ್ದಾರೆ.
ಚಿತ್ರವನ್ನು ವಿಶಾಲ್ ಆತ್ರೇಯ ನಿರ್ದೇಶಿಸಿದ್ದಾರೆ, ಮೇಘನಾರಾಜ್ ಅವರ ಆತ್ಮೀಯ ಸ್ನೇಹಿತರಾದ ಪನ್ನಗಾಭರಣ ಮತ್ತು ಶಿರ್ಷಾ ಅನಿಲ್ ನಿರ್ಮಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶಕರು. ಸರ್ಪ್ರೈಸ್ ಕೊಡುತ್ತೇನೆ ಎಂದಿರುವ ಮೇಘನಾ ರಾಜ್ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ನಟಿ ಮೇಘನಾ ರಾಜ್ ಕನ್ನಡ ಹಾಗೂ ಮಲಯಾಳಂನಲ್ಲೂ ತುಂಬಾ ಜನಪ್ರಿಯ ನಟಿ. ಹಾಗಾಗಿ ಈ ಹೊಸ ಸಿನಿಮಾವನ್ನು ಕನ್ನಡದ ಜೊತೆಗೆ ಮಲಯಾಳಂನಲ್ಲೂ ತೆರೆಗೆ ತರಲು ಪ್ಲಾನ್ ಮಾಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಕುತೂಹಲಕಾರಿಯಾಗಿ, ಶೀರ್ಷಿಕೆ ಪೋಸ್ಟರ್ ಅನ್ನು ನೂರಾರು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಏಕಕಾಲದಲ್ಲಿ ಅನಾವರಣಗೊಳಿಸಿದ್ದಾರೆ. ಅಷ್ಟೇ ಅಲ್ಲ, ಜಗತ್ತಿನ 30ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡ ಪರ ಸಂಘಟನೆಗಳು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿವೆ.
View this post on Instagram
ಈ ಸಿನಿಮಾದ ಬಗ್ಗೆ ನಟಿ ಮೇಘನಾ ರಾಜ್ ಹೇಳಿದ್ದು, ಈ ಸಿನಿಮಾದಲ್ಲಿ ನಾನು ಮಧ್ಯಮ ವರ್ಗದ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ಇದೊಂದು ಥ್ರಿಲ್ಲರ್ ಕಥೆ. ಒಂದು ಕ್ರೈಮ್ ಥ್ರಿಲ್ಲರ್. ಅವಳ ಜೀವನ ರಾತ್ರೋರಾತ್ರಿ ಬದಲಾಗುತ್ತದೆ. ಏನಾಯಿತು ಎಂದು ಅವಳು ಅರಿತುಕೊಂಡ ತಕ್ಷಣ, ಅವಳ ಜೀವನವು ತೀವ್ರವಾಗಿ ಬದಲಾಗುತ್ತದೆ. ಇದು ನನಗೆ ವಿಶೇಷವಾಗಿ ಕನೆಕ್ಟ್ ಆಯಿತು ಎಂದು ಹೇಳಿದ್ದಾರೆ.