ಮೇಘನಾ ರಾಜ್ ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಮರೆತು ತನ್ನ ಮುದ್ದಿನ ಮಗಾ ರಾಯನ್ ಜೊತೆ ಖುಷಿಖುಷಿಯಿಂದ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಹೀಗಾಗಿ ತನ್ನ ಮಗನ ಭವಿಷ್ಯದ ಮೇಲೆ ಗಮನವನ್ನು ಹರಿಸುವ ಮೂಲಕ ತನ್ನ ವೃತ್ತಿ ಜೀವನದಲ್ಲಿ ಕೂಡ ಸಕ್ರಿಯ ರಾಗಿದ್ದಾರೆ.
ಮೇಘನಾ ರಾಜ್ ಇದೀಗ ಎರಡು ಸಿನಿಮಾಗಳಲ್ಲಿ ಬಿಜಿಯಾಗಿದ್ದು ನಟಿ ಮಾತ್ರವಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕಿಯಾಗಿ ಹೊರಹೊಮ್ಮಿದ್ದಾರೆ. ಚಿರು ಸಾವನ್ನಪ್ಪಿದ ನಂತರ ಮೇಘನ ರಾಜ್ ಎರಡನೇ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಅಂದಿನಿಂದ ಇಂದಿನವರೆಗೂ ಕೇಳಿ ಬರುತ್ತಿವೆ.
ಆದರೆ ಮೇಘನಾ ರಾಜ್ ಎಂದಿಗೂ ಕೂಡ ತಮ್ಮ ಎರಡನೇ ಮದುವೆಯ ಬಗ್ಗೆ ಯೋಚಿಸಿದವರಲ್ಲ ತಮ್ಮ ಎರಡನೇ ಮದುವೆಯ ಬಗ್ಗೆ ಸುದ್ದಿ ಹರಿದಾಡುತ್ತಿರುವುದನ್ನು ಕಂಡು ನಟಿ ಮೇಘನ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೇ ಮೇಘನಾ ರಾಜ್ ರವರ ಎರಡನೆಯ ಮದುವೆ ಬಗ್ಗೆ ಧ್ರುವ ಸರ್ಜಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಚಿರಂಜೀವಿ ಸರ್ಜಾ ಆಗಲಿದ ನಂತರ ಮೇಘನಾ ರಾಜ್ ಕಳೆದ ತಿಂಗಳಷ್ಟೇ ಡಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಕಿರುತೆರೆಗೆ ಮರಳಿದ್ದರು ಸದ್ಯಕ್ಕೆ ತಮ್ಮ ವೃತ್ತಿ ಜೀವನದಲ್ಲಿ ಬಿಸಿಯಾಗಿದ್ದಾರೆ. ಪ್ರಾರಂಭದ ದಿನದಿಂದಲೂ ಮೇಘನಾ ರಾಜ್ ರವರ ಎರಡನೆಯ ಮದುವೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ಈ ವಿಚಾರವಾಗಿ ಮೇಘನಾ ರಾಜ್ ಖಡಕ್ಕಾಗಿ ಉತ್ತರವನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಮೇಘನಾ ರಾಜು ಒಂದು ಸಂದರ್ಶನದಲ್ಲಿ ಮಾತನಾಡುವ ವೇಳೆ ನಿರುಪಕರು ನೀವು ಎರಡನೇ ಮದುವೆಯ ಬಗ್ಗೆ ಯೋಚಿಸಿದ್ದೀರಾ ಎಂದು ಪ್ರಶ್ನಿಸಿದ್ದರು ಇದಕ್ಕೆ ಉತ್ತರಿಸಿದ ನಟಿ ಮೇಘನಾ ರಾಜ್ ನನಗೆ ಮದುವೆಯಾಗುವಂತೆ ಸಲಹೆ ನೀಡುವ ಗುಂಪು ಕೂಡ ಇದೆ ಹಾಗೆಯೇ ಮದುವೆ ಆಗಬೇಡಿ ಎಂದು ಸಲಹೆ ಕೊಡುವ ಗುಂಪು ಕೂಡ ಇದೆ ನೀವು ನಿಮ್ಮ ಮಗನ ಜೊತೆ ಖುಷಿಯಾಗಿರಿ ಎಂದು ಹೇಳುವ ಗುಂಪು ಕೂಡ ಇದೆ ಹಾಗಾದರೆ ನಾನು ಯಾರ ಮಾತನ್ನು ಕೇಳಲಿ.
ಚಿರಂಜೀವಿ ಸರ್ಜಾ ಬದುಕಿದ್ದಾಗ ನನಗೆ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು ಜನರು ಏನೇ ಹೇಳಿದರೂ ಕೂಡ ನೀನು ನಿನ್ನ ಹೃದಯವನ್ನು ಆಲಿಸು ಎಂದು ಹೇಳುತ್ತಿದ್ದರು ನಾನು ನನ್ನ ಹೃದಯವನ್ನು ಇನ್ನು ಮದುವೆಯ ಬಗ್ಗೆ ಪ್ರಶ್ನೆ ಕೇಳಿಲ್ಲ ಎಂದು ನಟಿ ಮೇಘನಾ ರಾಜ್ ಕುಮಾರ್ ಎರಡನೇ ಮದುವೆಯ ಬಗ್ಗೆ ಉತ್ತರಿಸಿದ್ದಾರೆ.
ಧ್ರುವ ಸರ್ಜಾ ಕೂಡ ತನ್ನ ಅತ್ತಿಗೆ ಮೇಘನಾ ರಾಜ್ ರವರ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನನ್ನ ಅಣ್ಣ ಚಿರಂಜೀವಿ ಸರ್ಜಾ ಸಾವನ್ನಪ್ಪಿದ ಬಳಿಕ ನನ್ನ ಮಗ ರಾಯನ್ ಆ ಸ್ಥಾನವನ್ನು ತುಂಬಿದ್ದಾನೆ. ಅವನು ನನ್ನ ಸ್ನೇಹಿತನಾಗಿದ್ದಾನೆ. ರಾಯನ್ ಎರಡು ಮನೆಗಳಲ್ಲೂ ಬೆಳೆಯುತ್ತಾನೆ ಸದ್ಯಕ್ಕೆ ತಾಯಿ ಜೊತೆಯಿದ್ದಾನೆ ರಾಯನ್ ಎಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟ ಎಂದು ಹೇಳಿದ್ದಾರೆ ಹಾಗೆ ಎರಡನೇ ಮದುವೆಯ ಬಗ್ಗೆ ಮಾತನಾಡಿ ಎರಡನೇ ಮದುವೆಯ ವಿಚಾರ ನನ್ನ ಅತ್ತಿಗೆಯ ವೈಯಕ್ತಿಕ ವಿಚಾರವಾಗಿದೆ ಈ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ ಸದ್ಯಕ್ಕೆ ರಾಯನ್ ಭವಿಷ್ಯದ ಬಗ್ಗೆ ನನಗೆ ಯೋಚನೆ ಇದೆ ಎಂದು ನಟ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದಾರೆ.