ಈಗ್ಲೆ ದಪ್ಪ ಆಗಿದೀನಿ ಆಂಟಿ, ಮುಂದೆ ತುಂಬಾ ಕಷ್ಟ ಆಗುತ್ತೆ :ನಟಿ ಮೇಘನಾ ರಾಜ್

ನಟಿ ಮೇಘನಾ ರಾಜ್ ರವರು ತಮ್ಮ ಪತಿ ಚಿರಂಜೀವಿ ಸರ್ಜರನ್ನು ಕಳೆದುಕೊಂಡು ವರ್ಷಗಳಿಂದ ಅವರ ನೋವಿನಲ್ಲಿ ಬದುಕುತ್ತಿದ್ದಾರೆ. ತಮ್ಮ ಮಗ ರಾಯನ್ ರಾಜ್ ಸರ್ಜಾ ತಮ್ಮ ಜೀವನದಲ್ಲಿ ಬಂದ ನಂತರ ತುಂಬಾ ಖುಷಿಯಿಂದ ಲವಲವಿಕೆಯಿಂದ ಓಡಾಡಿಕೊಂಡು ಇದ್ದಾರೆ. ನಟ ಚಿರಂಜೀವಿ ಸರ್ಜಾ ಅವರ ಮೇಲಿನ ಪ್ರೀತಿ ಕಿಂಚಿತ್ತು ಕೂಡ ಮೇಘನಾ ರಾಜ್ ರವರಿಗೆ ಕಡಿಮೆಯಾಗಿಲ್ಲ.

 

 

ಅವರು ಬದುಕಿದ್ದಾಗ ಹೇಗೆ ಪ್ರೀತಿಸುತ್ತಿದ್ದರೋ ಅವರ ಮರಣದ ನಂತರವೂ ಹಾಗೆ ಪ್ರೀತಿಸುತ್ತಿದ್ದಾರೆ. ಈ ವಿಷಯದ ಕುರಿತು ನೆಟ್ಟಿಗರು ಕೂಡ ಮೇಘನಾ ರಾಜ್‍ರವರ ಬಗ್ಗೆ ಟ್ರೋಲ್ ಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಘನಾ “ಯಾರಿಗೂ ಕೂಡ ನಾನು ಚಿರಂಜೀವಿ ಸರ್ಜಾ ರವರನ್ನು ತುಂಬಾ ಪ್ರೀತಿಸುತ್ತಿದ್ದೇನೆ ಅವರನ್ನು ಇನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ ನಾನು ಎರಡನೇ ಮದುವೆ ಆಗುವುದಿಲ್ಲ ನನ್ನ ಮಗನ ಜೊತೆಗೆ ಬಾಳುತ್ತೇನೆ ಹೀಗೆ ಖುಷಿ ಖುಷಿಯಿಂದ ಇರುತ್ತೇನೆ ಎಂದು ಯಾರಿಗೂ ಕೂಡ ನಾನು ಪ್ರೂವ್ ಮಾಡಬೇಕಾದ ಅವಶ್ಯಕತೆ ಇಲ್ಲ” ಎಂದು ಉತ್ತರಿಸಿದ್ದಾರೆ.

ನಟಿ ಮೇಘನಾ ರಾಜ್ ರವರು ನಟ ಚಿರಂಜೀವಿ ಸರ್ಜಾ ಅವರ ಮರಣದ ಸಮಯದಲ್ಲಿ ಗರ್ಭಿಣಿಯಾಗಿದ್ದರು ನಂತರ ತಮ್ಮ ಮಗ ರಾಯನ್ ರಾಜ್ ಸರ್ಜನ ಆಗಮನದಿಂದ ಅವರು ತಮ್ಮ ಜೀವನದ ಕಹಿ ನೆನಪುಗಳನ್ನು ಮರೆತು ಖುಷಿಯಿಂದ ಬದುಕುತ್ತಿದ್ದಾರೆ. ಇಷ್ಟು ದಿನ ನಮ್ಮ ಮಗನ ಲಾಲನೆ ಪಾಲನೆಯಲ್ಲಿ ಬಿಜಿಯಾಗಿದ್ದ ನಟಿ ಮೇಘನಾ ರಾಜ್ ರವರು ಈಗ ಮತ್ತೆ ಸಿಹಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಮೇಘನಾ ರಾಜ್ ರವರು ಜಡ್ಜ್ ಆಗಿದ್ದಾರೆ.

 

 

ಸೃಜನ್ ಲೋಕೇಶ್, ಮಯೂರಿ ಹಾಗೂ ಅಕುಲ್ ಬಾಲಾಜಿಯವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವಂತಹ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಮೇಘನಾ ರಾಜ್ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ತಾವು ಡಯಟ್ ವರ್ಕೌಟ್ಗಳನ್ನು ಮಾಡಿ ತಮ್ಮ ತೂಕವನ್ನು ಉಳಿಸಿಕೊಂಡು ಮತ್ತೆ ಸಿನಿಮಾಲೋಕಕ್ಕೆ ಪಾದರ್ಪಣೆಯನ್ನು ಮಾಡುತ್ತೇನೆ. ಎಂದು ಕೂಡ ಒಂದು ಸಂದರ್ಶನದಲ್ಲಿ ಮೇಘನಾ ರಾಜ್ ಸ್ವತಃ ತಾವೇ ಹೇಳಿಕೊಂಡಿದ್ದರು.

ತಮ್ಮ ಹತ್ತಿರದ ಸಂಬಂಧಿಕರ ಮನೆಯ ಫಂಕ್ಷನ್ ಗೆ ಹೋಗಿದ್ದ ಮೇಘನಾ ರಾಜ್ ರವರಿಗೆ ಸಂಬಂಧಿಕರು ತಿನ್ನಲು ಹಲವಾರು ಆಹಾರ ಪದಾರ್ಥಗಳನ್ನು ನೀಡಿದ್ದಾರೆ ಅದಕ್ಕೆ ಮೇಘನಾ “ಆಂಟಿ ನಾನು ಇದ್ಯಾವುದನ್ನು ತಿನ್ನುವುದಿಲ್ಲ ಇದನ್ನು ತಿಂದರೆ ನಾನಿನ್ನು ದಪ್ಪ ಆಗುತ್ತೇನೆ ಮುಂದೆ ತುಂಬಾ ಕಷ್ಟವಾಗುತ್ತದೆ” ಎಂದು ಹೇಳಿದ್ದಾರೆ.

Be the first to comment

Leave a Reply

Your email address will not be published.


*