Megha Shetty Sister Sushma Shetty Marriege: ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯ ಟಾಪ್ ನಟಿ ಮೇಘಾ ಶೆಟ್ಟಿ (Megha Shetty). ಮೇಘಾ ಶೆಟ್ಟಿ ಅನು ಸಿರಿಮನೆ ಪಾತ್ರದಿಂದ ಕರ್ನಾಟಕದ ಮನೆಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಮೇಘಾ ಶೆಟ್ಟಿಯನ್ನು ಎಲ್ಲರೂ ತಮ್ಮ ಸ್ವಂತ ಮಗಳಂತೆ ಪ್ರೀತಿಸುತ್ತಾರೆ. ಜೊತೆ ಜೊತೆಯಲಿ ಮೊದಲ ಧಾರಾವಾಹಿಯಾಗಿದ್ದರೂ ಮೇಘಾ ಶೆಟ್ಟಿ ಅಭಿನಯ ತುಂಬಾ ಪ್ರಬುದ್ಧವಾಗಿದೆ. ಇದೀಗ ಮೇಘಾ ಶೆಟ್ಟಿಗೆ ಹೊಸ ಪ್ಯಾನ್ ಇಂಡಿಯಾ ಅವಕಾಶ ಸಿಕ್ಕಿದೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಆರ್ಯ ಸಂಚಿಕೆಗಳು ಮುಗಿದಿವೆ. ಧಾರಾವಾಹಿಯ ಜೊತೆಗೆ ಮೇಘಾ ಶೆಟ್ಟಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಹೆಚ್ಚುತ್ತಿವೆ. ಮೇಘಾ ಶೆಟ್ಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಟ್ರಿಪಲ್ ರೈಡಿಂಗ್ ಚಿತ್ರದಲ್ಲಿ ನಟಿಸಿದ್ದಾರೆ. ಟ್ರಿಪಲ್ ರೈಡಿಂಗ್ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಿದೆ. ಮೇಘಾ ಶೆಟ್ಟಿ ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲೂ ಫ್ಯಾಶನ್ ಸೆನ್ಸ್‌ಗಾಗಿ ತುಂಬಾ ಫೇಮಸ್ ಆಗಿದ್ದಾರೆ. ಮೇಘಾ ಶೆಟ್ಟಿ ಅವರ ಉತ್ತಮ ನಟನೆಯಿಂದಾಗಿ ಇದೀಗ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ಇದೀಗ ಮೇಘಾ ಶೆಟ್ಟಿ ತಮ್ಮ ಕೌಟುಂಬಿಕ ಜೀವನದಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಮೇಘಾ ಶೆಟ್ಟಿ ಅಕ್ಕ ಸುಷ್ಮಾ ಶೆಟ್ಟಿ ಮದುವೆ ನಿಶ್ಚಯವಾಗಿದ್ದು (Megha Shetty Sister Sushma Shetty Marriege), ಮೆಹೆಂದಿ ಶಾಸ್ತ್ರ ನಡೆದಿದೆ. ಮೆಹೆಂದಿ ಶಾಸ್ತ್ರದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ‘ಜೊತೆ ಜೊತೆಯಲಿ’ ಧಾರಾವಾಹಿಯ ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮೇಘಾ ಶೆಟ್ಟಿಗೆ ಮದುವೆಯಾದ್ರೆ ಆಶ್ಚರ್ಯ ಪಡಬೇಡಿ. ಮೇಘಾ ಶೆಟ್ಟಿ ಸಹೋದರಿ ಸುಷ್ಮಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೇಘಾ ತನ್ನ ಸಹೋದರಿಯ ಮದುವೆಗೆ ಹಾಜರಾಗಿದ್ದಾಳೆ.
ಮೇಘಾ ಶೆಟ್ಟಿ ಕುಟುಂಬದವರು ಮದುವೆ ವಿಧಿವಿಧಾನಗಳನ್ನು ಆಚರಿಸಿದ್ದಾರೆ
ಮೇಘಾ ಶೆಟ್ಟಿ ಅರಿಶಿನ ಮತ್ತು ಮೆಹೆಂದಿ ಶಾಸ್ತ್ರದ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಿನ ನಾಯಿ ಮರಿಯೊಂದಿಗೆ ಮೇಘಾ ಆಟವಾಡುತ್ತಿರುವ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ. ಈ ಮದುವೆ ಸಮಾರಂಭಗಳಲ್ಲಿ ಸ್ನೇಹಿತರು ಮತ್ತು ಸಂಬಂಧಿಕರು ಭಾಗಿಯಾಗಿದ್ದಾರೆ. ಮೇಘಾ ಶೆಟ್ಟಿಗೆ ಇಬ್ಬರು ಅಕ್ಕಂದಿರಿದ್ದಾರೆ.
ವಿನೋದ್ ಕೈ ಹಿಡಿದ ಸುಷ್ಮಾ ಶೆಟ್ಟಿ
ಮೇಘಾ ಶೆಟ್ಟಿ ಅವರ ಸಹೋದರಿ ಸುಷ್ಮಾ ಶೆಟ್ಟಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೇಘಾಗೆ ಸುಷ್ಮಾ ಅವರೇ ಮೇಕಪ್ ಮಾಡುತ್ತಾರೆ. ಸುಷ್ಮಾ ವಿನೋದ್ ಜಿ ಅವರನ್ನು ಮದುವೆಯಾಗಿದ್ದಾರೆ. ಜನವರಿ ತಿಂಗಳಿನಲ್ಲಿ ಇಬ್ಬರೂ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸುಷ್ಮಾ ಮತ್ತು ವಿನೋದ್ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕೂಡ ಮಾಡಿದ್ದಾರೆ.
ಸುಷ್ಮಾ ಶೆಟ್ಟಿ ಪ್ರೀತಿಯ ಬಗ್ಗೆ ಬರೆದಿದ್ದಾರೆ
ಸಾಮಾಜಿಕ ಜಾಲತಾಣಗಳಲ್ಲಿ ಮದುವೆಗೆ ಮುಂಚಿನ ಫೋಟೋಗಳನ್ನು ಹಂಚಿಕೊಂಡಿರುವ ಸುಷ್ಮಾ, “ಪ್ರೀತಿ ಪರಿಪೂರ್ಣವಾಗಿರಬೇಕಿಲ್ಲ, ಅದು ನಿಜವಾಗಿರಬೇಕು. ನಾವು ಎಷ್ಟು ದಿನಗಳು, ತಿಂಗಳುಗಳು, ವರ್ಷಗಳು ಒಟ್ಟಿಗೆ ಇರುತ್ತೇವೆ ಎಂಬುದು ಪ್ರೀತಿ ಅಲ್ಲ. ಪ್ರೀತಿ ಎಂದರೆ ನೀವು ಪ್ರತಿದಿನ ಎಷ್ಟು ಪ್ರೀತಿಸುತ್ತೀರಿ. ನೀವು ನನ್ನ ಸಂತೋಷದ ಮೂಲ, ನೀವು ನನ್ನ ಜಗತ್ತಿನ, ಹೃದಯದ ಕೇಂದ್ರ ಬಿಂದು ನೀನು” ಎಂದಿದ್ದಾರೆ.
1 thought on “Megha Shetty Sister Sushma Shetty Marriege: ಮೇಘಾ ಶೆಟ್ಟಿ ಅಕ್ಕ ಸುಶ್ಮಾ ಶೆಟ್ಟಿ ಮದುವೆಯ ಮೆಹಂದಿ ಶಾಸ್ತ್ರ ವಿಡಿಯೋ”