ಡಾರ್ಲಿಂಗ್ ಕೃಷ್ಣ ಮೇಲೆ ಗರಂ ಆಗಿ ಕಾಲ್ ಮಾಡಿ ಮಿಲನ ನಾಗರಾಜ್ ಗೆ ಕಂಪ್ಲೇಂಟ್ ಮಾಡಿದ ಮೇಘ ಶೆಟ್ಟಿ

ಡಾರ್ಲಿಂಗ್ ಕೃಷ್ಣ, ನಿಶ್ವಿಕ ನಾಯ್ಡು ಹಾಗೂ ಮೇಘ ಶೆಟ್ಟಿ ಅಭಿನಯದ ದಿಲ್ ಪಸಂದ್ ಚಿತ್ರವನ್ನು ಶಿವ ತೇಜಸ್ ರವರು ನಿರ್ದೇಶಿಸಿದ್ದು ಈ ಚಿತ್ರ ಸೋಮವಾರ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಹಿಂದೆ ಇಬ್ಬರೂ ಹುಡುಗಿಯರು ಬೀಳುತ್ತಾರೆ. ದಿಲ್ ಪಸಂದ್ ಚಿತ್ರದಲ್ಲಿ ನಿಶ್ವಿಕ ನಾಯ್ಡು ಮೇಘ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ದಿಲ್ ಪಸಂದ್ ಚಿತ್ರದಲ್ಲಿ ನಾಯಕ ನಟನಾಗಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಂಡಿದ್ದಾರೆ ಹಾಗೂ ಪೋಷಕ ನಟನಾಗಿ ಅಜಯ್ ರಾವ್ ರವರು ಕಾಣಿಸಿಕೊಂಡಿದ್ದಾರೆ.

ದಿಲ್ ಪಸಂದ್ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ರವರ ಪಾತ್ರ ತುಂಬಾ ಗರಂ ಆಗಿದೆ ಹಾಗೂ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ರವರದೇ ಅಬ್ಬರವಾಗಿದೆ ಮೇಘ ಶೆಟ್ಟಿ ಅವರದು ಸಾಂಪ್ರದಾಯಸ್ತ ಹುಡುಗಿಯ ಪಾತ್ರವಾಗಿದ್ದು ಎಲ್ಲದಕ್ಕೂ ಅಡ್ಡಿಪಡಿಸುತ್ತಿರುತ್ತಾರೆ. ಸಂದರ್ಶನದಲ್ಲಿ ಮಾತನಾಡಿದ ಡಾರ್ಲಿಂಗ್ ಕೃಷ್ಣ ದಿಲ್ ಪಸಂದ್ ಸಿನಿಮಾದಲ್ಲಿ ನನ್ನ ಹಿಂದೆ ಇಬ್ಬರೂ ಹುಡುಗಿಯರು ಬೀಳುತ್ತಾರೆ ನಾನು ರಾಮ ಆಗುವುದಿಲ್ಲ ಕೃಷ್ಣ ಆಗುತ್ತೇನೆ ಎಂದು ಎಂದರು.

 

ಇದಕ್ಕೆ ಪ್ರತ್ಯುತ್ತರವಾಗಿ ಮೇಘ ಶೆಟ್ಟಿ ರವರು ನಾನು ಮಿಲನ ನಾಗರಾಜ್ ಗೆ ಕಾಲ್ ಮಾಡಿ ನಿಮ್ಮ ಗಂಡ ಡಾರ್ಲಿಂಗ್ ಕೃಷ್ಣ ರಾಮ ಆಗೂ ಎಂದರೆ ಕೃಷ್ಣ ಆಗುತ್ತೇನೆ ಎನ್ನುತ್ತಿದ್ದಾರೆ ಮನೆಗೆ ಬಂದಾಗ ವಿಚಾರಿಸಿಕೊಳ್ಳಿ ಎಂದು ಕಂಪ್ಲೇಂಟ್ ಹೇಳುತ್ತೇನೆ ಎಂದರು ಇದಕ್ಕೆ ಟಾಂಗ್ ಕೊಟ್ಟ ನಿಶ್ವಿಕ ನಾಯ್ಡು, ನನಗೆ ತುಂಬಾ ಕೆಲಸ ಇದೆ ಹೋಗಮ್ಮ ಅವರೇನಾದರೂ ಮಾಡಿಕೊಳ್ಳಲಿ ಎನ್ನುತ್ತಾರೆ ಮಿಲನ ನಾಗರಾಜ್ ಎಂದು ಎಲ್ಲರೂ ಹರಟೆ ಹೊಡೆಯುತ್ತಿದ್ದರು.

ಈ ಚಿತ್ರದಲ್ಲಿ ಫ್ಯಾಮಿಲಿ ಓರಿಯೆಂಟೆಡ್ ಕಥೆ ಇದ್ದು ಎಂಟರ್ಟೈನ್ಮೆಂಟ್ ಕೂಡ ಇದೆ. ತಂದೆ ತಾಯಿ ಮಕ್ಕಳ ಮೇಲೆ ಎಷ್ಟು ಎಮೋಷನ್ ಇಟ್ಟುಕೊಂಡಿರುತ್ತಾರೆ ತಂದೆ ತಾಯಿಯಾಗಿ ಜೀವನದಲ್ಲಿ ಅವರ ಜರ್ನಿ ಹೇಗಿರುತ್ತದೆ ಎನ್ನುವುದನ್ನು ಈ ಕಥೆ ಹೇಳುತ್ತದೆ. ಈ ಚಿತ್ರದಲ್ಲಿ ಪ್ರತಿಯೊಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ ,ನಿಶ್ವಿಕ ನಾಯ್ಡು, ಮೇಘ ಶೆಟ್ಟಿ , ಡಾರ್ಲಿಂಗ್ ಕೃಷ್ಣ ಎಲ್ಲರ ಅದ್ಭುತವಾಗಿ ಅಭಿನಯಿಸಿದ್ದಾರೆ.

 

 

ದಿಲ್ ಪಸಂದ್ ಚಿತ್ರದ ಪ್ರೀ ರಿಲೀಸ್ ಈವೆಂಟ್ ಗೆ ಅಧಿತಿ ಪ್ರಭುದೇವ ಹಾಗೂ ಅಜಯ್ ರಾವ್ ರವರು ಅತಿಥಿಗಳಾಗಿ ಆಗಮಿಸಿ ದಿಲ್ ಪಸಂದ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಅಧಿತಿ ಪ್ರಭುದೇವ ದಿಲ್ ಪಸಂದ್ ಚಿತ್ರದ ಬಗ್ಗೆ ಮಾತನಾಡಿ ನಾನು ಮೊದಲು ಅಭಿನಯಿಸಿದ ಚಿತ್ರದ ನಿರ್ದೇಶಕರಾದ ಶಿವ ತೇಜಸ್ ಸರ್ ಇದನ್ನು ನಿರ್ದೇಶಿಸಿದ್ದಾರೆ. ಅದಕ್ಕಾಗಿ ನಾನು ಈ ಪ್ರೀ ರಿಲೀಸ್ ಈವೆಂಟ್ ಗೆ ಬಂದಿದ್ದೇನೆ. ಚಿತ್ರತಂಡಕ್ಕೆ ಆಲ್ ದ ಬೆಸ್ಟ್ ಎಂದು ಹೇಳಿದರು. ನಟ ಅಜಯ್ ರಾವ್ ಮಾತನಾಡಿ ಇದೊಂದು ಅದ್ಭುತವಾದ ಸಿನಿಮಾ ಈ ಸಿನಿಮಾವನ್ನು ನಾನು ಮಾಡಬೇಕು ಎಂದುಕೊಂಡಿದ್ದೆ ಆಗಲಿಲ್ಲ ಅದಕ್ಕಾಗಿ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರವನ್ನು ಆದರೂ ಮಾಡಬೇಕು ಎಂದು ಇದರಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದೇನೆ ಎಂದರು.

Be the first to comment

Leave a Reply

Your email address will not be published.


*