ತೆಲುಗಿನ ಗಾಯಕಿ ಮಂಗಲಿ (Telugu playback singer mangli)ಇದೀಗ ಕನ್ನಡಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ನಾಗಾರ್ಜುನ (nagarjun) ನಾಯಕರಾಗಿರುವ “ಪಾದರಾಯ”(padaraya) ಚಿತ್ರದಲ್ಲಿ ಗಾಯಕಿ ಮಂಗಲಿ ನಾಯಕಿಯಾಗಿ(heroine mangli) ನಟಿಸಲಿದ್ದಾರೆ. ಈ ಚಿತ್ರವನ್ನು ಚಕ್ರವರ್ತಿ ಚಂದ್ರಚೂಡು ನಿರ್ದೇಶಿಸುತ್ತಿದ್ದಾರೆ. ತಮ್ಮ ಗಾಯನದ ಮೂಲಕ ಕನ್ನಡಿಗರ ಮನವನ್ನು ಗೆದ್ದಿರುವ ಮಂಗಲಿ ಇದೀಗ ಕನ್ನಡ ಚಿತ್ರದ ಮೂಲಕವೇ ನಾಯಕಿಯಾಗಿ ತೆರೆಯ ಮೇಲೆ ಬರುತ್ತಿದ್ದಾರೆ.
ಮಂಗ್ಲಿ ಭಾರತೀಯ ಪ್ಲೇ ಬ್ಯಾಕ್ ಸಿಂಗರ್(Indian playback singer) ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಮಂಗಲಿ ರವರ ಮೂಲ ಹೆಸರು ಸತ್ಯವತಿ ರಾಥೋಡ್ ಮಂಗ್ಲಿ ರವರಿಗೆ ಇದೀಗ 29 ವರ್ಷ(mangli age 29 years) ವಯಸ್ಸಾಗಿದೆ. ಇವರು ಬಂಜಾರ (Banjara)ಮೂಲಕ್ಕೆ ಸೇರಿದವರಾಗಿದ್ದು ಆಂಧ್ರಪ್ರದೇಶದ ಅನಂತಪುರ ತಾಲೂಕಿನ ಬೂಟಿ ಎನ್ನುವ ಸ್ಥಳದಲ್ಲಿ ಮಂಗ್ಲಿ ಜನಿಸಿದರು
ಮಂಗ್ಲಿ ಮಾತ್ರವಲ್ಲದೆ ಅವರ ತಂಗಿ (mangli sister)ಕೂಡ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಂಗ್ಲಿ ರವರ ತಾಯಿ ಭಾಷೆ ಲಂಬಾಣಿ(lambani language) ಭಾಷೆಯಾಗಿದ್ದು ಮಂಗ್ಲಿ ತೆಲುಗಿನಲ್ಲಿ ಸಣ್ಣಪುಟ್ಟ ರೂಲ್ ಗಳ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು ಅಷ್ಟೇ ಅಲ್ಲದೆ ತೆಲುಗಿನಲ್ಲಿ ಪ್ಲೇ ಬ್ಯಾಕ್ ಸಿಂಗರ್ ಆಗಿ ಕೆಲಸ ಮಾಡುತ್ತಿದ್ದರು ಡಿ ಬಾಸ್ ದರ್ಶನ್(d boss Darshan) ಅಭಿನಯದ ರಾಬರ್ಟ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೂಡ ಹಾಡುಗಳನ್ನು ಹಾಡಲು ಶುರು ಮಾಡಿದರು ಕಣ್ಣು ಹೊಡೆಯಾಕ(kannu hodeyaka) ಎನ್ನುವ ಹಾಡಿನ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡರು ಇಂದು ಕನ್ನಡದ ಪಾದರಾಯ ಚಿತ್ರದ ನಾಯಕ ನಟಿಯಾಗಿ ಮಂಗಲೀ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಪಾದರಾಯ ಚಿತ್ರವು 2013-14ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ 6 ರಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿದ್ದು ಯುನಿವರ್ಸಲ್ ಸಬ್ಜೆಕ್ಟ್(universal subject) ಆಗಿರುವುದರಿಂದ ಪ್ಯಾನ್ ಇಂಡಿಯಾ ಸಿನಿಮಾವಾಗಿ(Pan India cinema) ಇದು ತಯಾರಾಗುತ್ತಿದೆ. ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಆರ್ ಚಂದ್ರು ಪಾದರಾಯ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್ ಸಹ ನಿರ್ಮಾಣವನ್ನು ಮಾಡುತ್ತಿದ್ದಾರೆ. ಪಾದರಾಯ ಚಿತ್ರಕ್ಕೆ ಅಜನೀಶ್ ಲೋಕನಾಥ್ (music director ajanesh lokanath)ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದಾರೆ. ಆಂತೋನಿ ರವರು ಸಂಕಲನ ಹಾಗೂ ಸತ್ಯ ಹೆಗಡೆ ಛಾಯಾಗ್ರಹಣದಲ್ಲಿ ಪಾದರಾಯ ಚಿತ್ರ ಮೂಡಿ ಬರುತ್ತಿದೆ.