Man speaks with Peacock: ಮಾತನಾಡುವ ನವಿಲು, ಅಪರೂಪದಲ್ಲೇ ಅಪರೂಪವಾದ ವಿಡಿಯೋ

ಮಾತನಾಡುವ ನವಿಲನ್ನು ನೀವೆಲ್ಲಾದರೂ ನೋಡಿದ್ದೀರಾ! ಅಪರೂಪದಲ್ಲೇ ಅಪರೂಪವಾದ ವಿಡಿಯೋ ಇದು. ಪ್ರಾಣಿ ಪಕ್ಷಿಗಳು ಸಹ ಮನುಷ್ಯನಿಗೆ ಸ್ಪಂದಿಸುತ್ತವೆ ಎನ್ನುವುದಕ್ಕೆ ಈ ವಿಡಿಯೋ ಉದಾಹರಣೆಯಾಗಿದೆ. ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯನಿಗೆ ಅವಿನಭಾವ ಸಂಬಂಧವಿದೆ ಎಂದು ನಾವು ಕೇಳಿದ್ದೆವು. ಈ ವಿಡಿಯೋ ನೋಡಿದ ಮೇಲೆ ಅದು ನಿಜವೆನಿಸುತ್ತಿದೆ. ನಾವು ಮಾತನಾಡುವ ಗಿಳಿಯ ಬಗ್ಗೆ ಕೇಳಿದ್ದೇವೆ ಆದರೆ, ಇಲ್ಲಿ ಮಾತನಾಡುವ ನವಿಲೊಂದಿದೆ.

ದಕ್ಷಿಣ ಕನ್ನಡದ ಕಾರ್ಕಳದ ಮನೆ ಒಂದರಲ್ಲಿ ನವಿಲು ಕಾಣಿಸಿಕೊಂಡಿದೆ. ಆಗಾಗ ಮನೆಯತ್ತ ಬರುವ ಈ ನವಿಲು ಮನುಷ್ಯನಿಗೆ ಹೊಂದಿಕೊಂಡಿದೆ. ಅಲ್ಲಿರುವ ಯುವಕ ನವಿಲಿನೊಡನೆ ಮಾತನಾಡುವ ಚಿತ್ರವನ್ನು ಚಿತ್ರೀಕರಿಸಿದ್ದಾನೆ.

 

 

ಯುವಕ ನವಿಲಿಗೆ ಗರಿ ಬಿಚ್ಚು ಎಂದು ಹೇಳಿದಾಗ ನವಿಲು ಗರಿ ಬಿಚ್ಚುವುದಿಲ್ಲವೆಂದು ತನ್ನ ತಲೆಯನ್ನು ಅಲ್ಲಾಡಿಸುತ್ತದೆ. ಸಾಕಷ್ಟು ಬಾರಿ ಆ ಯುವಕ ನವಿಲನ್ನು ಗರಿ ಬಿಚ್ಚು ಅಂತ ಕೇಳಿಕೊಂಡಾಗಲೂ ಕೂಡ ಆ ನವಿಲು ಇಲ್ಲವೆನ್ನುವಂತೆ ತಲೆ ಅಲ್ಲಾಡಿಸುತ್ತಾ ಸತಾಯಿಸುತ್ತದೆ. ನಂತರ ಗರಿ ಬಿಚ್ಚುತ್ತದೆ.

 

 

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಪಕ್ಷಿ ಪ್ರಿಯರು ಆ ವಿಡಿಯೋವನ್ನು ನೋಡಿ ತುಂಬಾ ಇಷ್ಟ ಪಟ್ಟಿದ್ದಾರೆ. ನೆಟ್ಟಿಗರು ಕೂಡ ಈ ವಿಡಿಯೋಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Be the first to comment

Leave a Reply

Your email address will not be published.


*