ಯೂಟ್ಯೂಬ್ ವಿಡಿಯೋ ನೋಡಿ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದ ವ್ಯಕ್ತಿ, ಆಗೇಹೋಯ್ತು ದೊಡ್ಡ ಅನಾಹುತ

ಇಂದಿನ ಕಾಲಮಾನಗಳಲ್ಲಿ ಅನೇಕ ಜನರು ತಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಲು ಅಥವಾ ಯಾವುದೇ ವಿಷಯವನ್ನು ನಿರ್ಧರಿಸಲು ಯೂಟ್ಯೂಬ್(youtube) ನ ಮಾಹಿತಿಯನ್ನು ಅವಲಂಬಿಸಿರುತ್ತಾರೆ. ಇಷ್ಟೇ ಅಲ್ಲದೆ ದಿನನಿತ್ಯದ ಅಡುಗೆ ಹಾಗೂ ದಿನನಿತ್ಯದ ಕೆಲಸ ಕಾರ್ಯಗಳು ಯಾವುದಾದರೂ ಔಷಧಿಗಳ ಬಗ್ಗೆ ಅವುಗಳನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಕೂಡ ಹೆಚ್ಚು ಜನರು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ.

 

 

ಆದರೆ ಒಂದು ವಿಷಯ ಮಾತ್ರ ನಮಗೆ ಚೆನ್ನಾಗಿ ನೆನಪಿರಬೇಕು ಅದೇನೆಂದರೆ ಯೂಟ್ಯೂಬ್ ಅಥವಾ ಗೂಗಲ್ (google)ನಲ್ಲಿ ಹೇಳುವ ಮಾಹಿತಿಯೇ ಕೊನೆ ಅಲ್ಲ ಅದೇ ಫೈನಲ್ ಎಂದು ತಿಳಿದುಕೊಂಡರೆ ಕೆಲವೊಮ್ಮೆ ಅನಾಹುತಗಳು ಕೂಡ ಸಂಭವಿಸುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಇಂದೋರ್ ನಲ್ಲಿ ಒಬ್ಬ ವ್ಯಕ್ತಿ ತನ್ನ ಕೈ ನೋವಿಗೆ ಪರಿಹಾರ ಏನು ಅಂತ ತಿಳಿದುಕೊಳ್ಳಲು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದಾನೆ ಯೂಟ್ಯೂಬ್ ನಲ್ಲಿ ಒಂದು ವಿಡಿಯೋವನ್ನು ನೋಡಿ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದು ವ್ಯಕ್ತಿ ಸಾವಿಗೀಡಾಗಿದ್ದಾನೆ ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

 

 

ಮೃತಪಟ್ಟಿರುವ ವ್ಯಕ್ತಿಯನ್ನು ಧರ್ಮೇಂದ್ರ ಕೊರೋಲೆ ಎಂದು ಗುರುತಿಸಲಾಗಿದೆ. ಈತನಿಗೆ 32 ವರ್ಷ ವಯಸ್ಸಾಗಿದ್ದು ಈತ ಕನ್ವರ್ ಜಿಲ್ಲೆಯ ಸ್ವರ್ಣ ಭಾಗ್ ಕಾಲೋನಿಯ ನಿವಾಸಿಯಾಗಿದ್ದನು. ಇವನು ಮೂಲತಃ ಚಾಲಕನಾಗಿದ್ದು ಒಮ್ಮೆ ಅಪಘಾತದಿಂದಾಗಿ ಧರ್ಮೇಂದ್ರ ರವರು ಬಹುದಿನಗಳಿಂದ ಕೈ ನೋವಿನಿಂದ ಬಳಲಿ ಬೆಂಡಾಗಿದ್ದರು ಎಂದು ಅವರ ಸಂಬಂಧಿಕ ಮನೀಶ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಧರ್ಮೇಂದ್ರ ರವರು ತಮ್ಮ ಕೈ ನೋವಿಗೆ ಚಿಕಿತ್ಸೆಯನ್ನು ಪಡೆದಿದ್ದರೂ ಕೂಡ ಅದು ಸಹಕಾರಿಯಾಗಿರಲಿಲ್ಲ. ಹಾಗಾಗಿ ತನ್ನ ನೋವಿಗೆ ಏನಾದರೂ ಔಷಧಿಯನ್ನು ಹುಡುಕಿಕೊಂಡು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದಾಗ ಕಾಡಿನಲ್ಲಿ ಬೆಳೆದ ಬಾಟಲ್ ಸೋರೆಕಾಯಿ ಕೈ ನೋವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಕೊಂಡು ಧರ್ಮೇಂದ್ರ ರವರು ಬಾಟಲ್ ಸೋರೆಕಾಯಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಕಾಡಿಗೆ ಹೋಗಿ ಸ್ವತಹ ತಾವೇ ಸೋರೆಕಾಯಿಯನ್ನು ಹುಡುಕಿ ಮನೆಗೆ ತೆಗೆದುಕೊಂಡು ಬಂದು ಜ್ಯೂಸ್ ಮಾಡಿ ಕುಡಿದಿದ್ದಾರೆ.

 

 

ಕಾಡಿನಿಂದ ತಂದ ಸೋರೆಕಾಯಿಯ ಜ್ಯೂಸ್ ಕುಡಿದ ನಂತರ ವಾಂತಿ ಮತ್ತು ತೀವ್ರ ಸುಸ್ಥಿನಿಂದ ಧರ್ಮೇಂದ್ರರವರು ಬಳಲುತ್ತಿದ್ದರು ಇದಾದ ನಂತರ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಧರ್ಮೇಂದ್ರ ರವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಧರ್ಮೇಂದ್ರರವರ ಸಾವು ಯಾಕಾಯಿತು ಎಂದು ಪೋಸ್ಟ್ಮಾರ್ಟ ಮಾಡಿದಾಗ ಧರ್ಮೇಂದ್ರರವರ ಸಾವಿಗೆ ಕಾರಣವೇನು ಎಂಬುದು ತಿಳಿಯುತ್ತದೆ ಎಂದು ಪೊಲೀಸರು ವರದಿ ಮಾಡಿದ್ದಾರೆ. ಧರ್ಮೇಂದ್ರ ರವರು ಕೆಲವು ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು ಇವರ ಕುಟುಂಬದ ಸದಸ್ಯರು ಹೇಳಿರುವ ಹೇಳಿಕೆಯಿಂದ ಪೊಲೀಸರು ದಾಖಲಿಸಿ ತನಿಖೆಯನ್ನು ಆರಂಭಿಸಿದ್ದಾರೆ.

Be the first to comment

Leave a Reply

Your email address will not be published.


*