ಗಾಯಕಿ ರೆಮೋ ಎನ್ನುವ ಹೆಸರಿನಿಂದ ಫೇಮಸ್ ಆದ ಗಾಯಕಿ ರೇಖಾ ಮೋಹನ್ ಎಂದ ತಕ್ಷಣ ನೆನಪಾಗುವುದು ಮಜಾ ಟಾಕೀಸ್ ಸ್ಟೇಜಿನ ಮೇಲೆ ಸೃಜನ್ ಲೋಕೇಶ್ ಒಂದಾದ ಮೇಲೆ ಒಂದಂತೆ ನಗೆಯ ಬಾಂಬು ಸಿಡಿಸುತ್ತಿದ್ದರೆ ಈ ಹೆಣ್ಣು ಮಗಳು ರೆಮೋ ಹಿಂದಿನಿಂದಲೇ ಸೈಲೆಂಟಾಗಿ ಹಾಡನ್ನು ಹಾಡುತ್ತಾ ನಗಿಸುತ್ತಾರೆ. ಸೃಜನ್ ಲೋಕೇಶ್ ರೆಮೊರವರ ಕಾಲೆಳೆಯುವುದು ಈಕೆ ಟಕ್ಕಂತ ಉತ್ತರ ನೀಡುವುದು ಆ ಕಾಮಿಡಿ ಟೈಮಿಂಗನ್ನು ನೋಡುವುದಕ್ಕೆ ಸಿಕ್ಕಾಪಟ್ಟೆ ಮಜಾ ಇರುತ್ತದೆ. ಇದೀಗಾಗಲೇ ರೆಮೋ ಸಾಕಷ್ಟು ಆರ್ಕೆಸ್ಟ್ರಾಗಳಲ್ಲಿ ಹಾಡಿದ್ದರೂ ಕೂಡ ಇವರ ಪ್ರತಿಭೆ ಮುನ್ನೆಲೆಗೆ ಬಂದಿದ್ದು ಮಜಾ ಟಾಕೀಸ್ ಮೂಲಕ.

 

 

ಇದೀಗ ರೆಮೋ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ “ಸೂಪರ್ ಕ್ವೀನ್” ಎನ್ನುವ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸುತ್ತಿದ್ದಾರೆ. ಬಾಳ ಕಷ್ಟದಿಂದ ಮೇಲೆ ಬಂದು ಬದುಕು ಕಟ್ಟಿಕೊಂಡವರ ರಿಯಾಲಿಟಿ ಶೋ ಈ ಸೂಪರ್ ಕ್ವೀನ್ ಆಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಸಾಧಕೀಯರಿದ್ದು ಅವರ ಸಮೀಪ ದರ್ಶನವು ಕಾರ್ಯಕ್ರಮದ ಮೂಲಕ ಆಗುತ್ತದೆ.

 

 

ರೆಮೋ ರವರ ಕಥೆಯನ್ನು ಕೇಳಿದ ಜನರೆಲ್ಲರೂ ಈಕೆ ತಮ್ಮ ಮನಸ್ಸಿನಲ್ಲಿ ಇಷ್ಟೊಂದು ನೋವನ್ನು ಇಟ್ಟುಕೊಂಡು ನಮ್ಮನೆಲ್ಲ ಹೇಗೆ ನಗಿಸುತ್ತಿದ್ದನು ಎಂದು ಮರುಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕವಯಸ್ಸಿನಿಂದ ರೆಮೋ ಸಿಕ್ಕಾಪಟ್ಟೆ ಸ್ಟ್ರಾಂಗ್ ಅವರು ತೊಡುವ ಬಟ್ಟೆಯನ್ನು ನೋಡಿದಾಗಲೇ ಇವರು ಧೈರ್ಯವಂತ ಮಹಿಳೆ ಎಂಬುದು ಗೊತ್ತಾಗುತ್ತದೆ. ರೆಮೋ ರವರ ಉಡುಪು ಅವರ ವ್ಯಕ್ತಿತ್ವ ಎಂತಹದು ಎಂಬುದನ್ನು ತೋರಿಸುತ್ತದೆ.

 

 

ರೆಮೋ ಚಿಕ್ಕ ವಯಸ್ಸಿನಿಂದಲೂ ಇದೇ ರೀತಿ ಇದ್ದಾರೆ. ಇವರದ್ದು ಚಿಕ್ಕ ಕುಟುಂಬವಾಗಿದ್ದು ತುಂಬಾ ಸಂತೋಷವಾಗಿದ್ದರು ರೆಮೋ ರವರು ತನಗಿಂತ 13 ವರ್ಷ ದೊಡ್ಡವರನ್ನೂ ಮದುವೆಯಾಗಿದ್ದರು ರೆಮೋ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಸಮಯದಲ್ಲಿ ಒಬ್ಬರು ಪರಿಚಿತರಾಗಿ ಪ್ರೀತಿಸಿ ಅವರನ್ನೇ ಮದುವೆಯಾಗ ಬೇಕು ಎಂದು ನಿರ್ಧರಿಸುತ್ತಾರೆ. ಮನೆಯವರಿಗೆ ಈ ನಿರ್ಧಾರ ಇಷ್ಟವಾಗುವುದಿಲ್ಲ ಆದರೆ ರೆಮೊ ಮನೆಯವರ ವಿರೋದ ಕಟ್ಟಿಕೊಂಡು ಮದುವೆಯಾದರೂ.

 

 

ಹಲವು ಕನಸುಗಳನ್ನು ಹೊತ್ತುಕೊಂಡು ಮದುವೆಯಾಗಿದ್ದ ರೆಮೊಗೆ ಮುಂದೆ ಗಂಡನ ಮನೆಗೆ ಹೂವಿನ ಹಾಸಿಗೆಯಾಗಿರದೆ ಹಲವಾರು ಕಷ್ಟಗಳನ್ನು ಎದುರಿಸಬೇಕಾಗಿತ್ತು. ರೆಮೊ ಅವರನ್ನು ಮನೆಯಲ್ಲಿ ಮೂಲೆಗುಂಪು ಮಾಡಿದ್ದರು ಇದನ್ನೆಲ್ಲ ನೋಡಿ ನೋಡಿ ಸಾಕಾಗಿ ಒಂದು ದಿನ ಇದೆಲ್ಲವೂ ಸಾಕು ಎನಿಸಿ ತಮ್ಮ 5 ವರ್ಷದ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಬಂದರು ಅವರ ಬಳಿ ಒಂದು ರೂಪಾಯಿ ಹಣವಿರಲಿಲ್ಲ ಮಗಳನ್ನು ಕೂಡ ಸಾಕಬೇಕಾಗಿತ್ತು.

 

 

ಹಗಲು ರಾತ್ರಿ ಎನ್ನದೆ ಹಾಡು ಹಾಡಿ ಜೀವನವನ್ನು ಕಟ್ಟಿಕೊಂಡರು ಪ್ರತಿ ರಾತ್ರಿ ತನ್ನ ಬದುಕನ್ನು ನೆನೆದು ಕಣ್ಣೀರು ಹಾಕುತ್ತಿದ್ದರು ನಾನೀಗ ಬದುಕಿರುವುದೇ ಮಗಳಿಗಾಗಿ ಮಗಳ ಜೀವನ ಚೆನ್ನಾಗಿರಬೇಕು ಎಂದು ಭಾವುಕರಾದರು ರೆಮೋ ಮಜಾ ಟಾಕೀಸ್ ನಲ್ಲಿ ನಗುವ ನಗುವಿನ ಹಿಂದೆ ಸಾಕಷ್ಟು ನೋವಿದೆ. ಇನ್ನು ಮುಂದಾದರೂ ಇವರ ಜೀವನ ಚೆನ್ನಾಗಿರಲಿ ಎಂದು ಆಶಿಸೋಣ

Leave a comment

Your email address will not be published. Required fields are marked *