Leelavathi vinodraj darshan: ಕನ್ನಡ ಚಿತ್ರರಂಗದ ಮೇರು ನಟಿ, ಅದು ನಮ್ಮ ಲೀಲಾವತಿ ಅಮ್ಮ. ಕನ್ನಡ ಚಿತ್ರರಂಗಕ್ಕೆ ಅವರು ಮಾಡಿದ ಸೇವೆ ವರ್ಣನಾತೀತ. ಇದೀಗ ಲೀಲಾವತಿ ಹಾಗೂ ಅವರ ಪುತ್ರ ವಿನೋದ್ ರಾಜ್ ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದಿದ್ದಾರೆ. ತನ್ನ ಮಗ ವಿನೋದ್‌ನೊಂದಿಗೆ, ಅವರು ತಮ್ಮ ಗ್ರಾಮದಲ್ಲಿ ಕೃಷಿ ಮಾಡುತ್ತಾ ವಾಸಿಸುತ್ತಿದ್ದಾರೆ.
ತಮ್ಮ ಗ್ರಾಮದಲ್ಲಿ ಕೃಷಿ ಮಾಡುತ್ತಿರುವ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲೀಲಾವತಿಯವರು ಕೂಡ ಎಷ್ಟೋ ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಕಳೆದ ತಿಂಗಳು ಅಸ್ವಸ್ಥರಾಗಿದ್ದ ಲೀಲಾವತಿ ಅವರನ್ನು ಚಿತ್ರರಂಗದ ಹಲವು ಕಲಾವಿದರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.
ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಕೂಡ ಲೀಲಾವತಿ ತಾಯಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಬಡವರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ನಟ ದರ್ಶನ್ ನಟಿ ಲೀಲಾವತಿ ಅವರನ್ನು ನೋಡಿ ಆರೋಗ್ಯ ವಿಚಾರಿಸಿದರು. ವಿನೋದ್ ರಾಜ್ ರೊಂದಿಗೆ ಮಾತನಾಡಿ ನಾನಿರುವೆ ನಿನಗಾಗಿ, ಏನಾದ್ರೂ ಕೇಳಿ ಎಂದರು.
ನಟ ದರ್ಶನ್ ಅವರು ನಟಿ ಲೀಲಾವತಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಲೀಲಾವತಿ ವಿನೋದ್ ರಾಜ್ ಅವರೊಂದಿಗೆ ಸ್ವಲ್ಪ ಸಮಯ ಕಳೆದಿದ್ದಾರೆ. ದರ್ಶನ್ ಅವರ ಈ ಪಾತ್ರ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.