“ಕ್ರಿಸ್ಮಿ ನೆಸ್ಟ್” ಹೊಸ ಮನೆ ಗೃಹಪ್ರವೇಶ ಮಾಡಿದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ದಂಪತಿಗಳು

ಸ್ಯಾಂಡಲ್ ವುಡ್ ನಾ ಮುದ್ದಾದ ಕ್ಯೂಟ್ ಜೋಡಿ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನದಂಪತಿಗಳು ಇದೀಗ ತಮ್ಮ ಹೊಸ ಮನೆಯ ಗೃಹಪ್ರವೇಶವನ್ನು ನೆರವೇರಿಸಿದ್ದಾರೆ. ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ದಂಪತಿಗಳು ತಮ್ಮ ಮನೆಯ ಗೃಹಪ್ರವೇಶದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದು “ನಮ್ಮ ಹೊಸ ಗೂಡು” ಎನ್ನುವ ಕ್ಯಾಪ್ಷನನ್ನು ಮಿಲನ ನಾಗರಾಜ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನೀಡಿದ್ದಾರೆ.

 

 

ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣರವರು ಮದುವೆಯ ನಂತರ ನಟಿಸಿದ ಲವ್ ಮೋಕ್ ಟೇಲ್ ಚಾಪ್ಟರ್ ಟು ಚಿತ್ರವು ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಇದೀಗ ಮಿಲನ ನಾಗರಾಜ್ ಹಾಗು ಡಾರ್ಲಿಂಗ್ ಕೃಷ್ಣ ದಂಪತಿಗಳು ಹೊಸ ಮನೆಯನ್ನು ಖರೀದಿಸಿದ್ದಾರೆ. ಈ ಹೊಸ ಮನೆಯ ಗೃಹಪ್ರವೇಶವನ್ನು ಕೂಡ ಮಾಡಿದ್ದು ಈ ಗೃಹಪ್ರವೇಶಕ್ಕೆ ಸಂಯುಕ್ತ ಹೊರನಾಡು, ಸುಧಾ ಬೆಳವಾಡಿ, ನಟಿ ರಚಲ್ ಡೇವಿಡ್, ನಟಿ ಅಮೃತ ಅಯ್ಯಂಗಾರ್, ಹೆಂಗೆ ನಾವು ಖ್ಯಾತಿಯ ಅಮೃತ ಮುಂತಾದವರು ಭಾಗಿಯಾಗಿ ಗೃಹಪ್ರವೇಶವನ್ನು ಯಶಸ್ವಿಗೊಳಿಸಿದ್ದಾರೆ.

 

 

ಅಭಿಮಾನಿಗಳು ಕೂಡ ಹೊಸ ಮನೆಯನ್ನು ನೋಡಿ ಶುಭಾಶಯಗಳನ್ನು ತಿಳಿಸಿದ್ದಾರೆ. 2018ರಲ್ಲಿ ತೆರೆಕಂಡ ಚಾರಿ ಸಿನಿಮಾದಲ್ಲಿ ಮಿಲನ ನಾಗರಾಜ್ ಹಾಗು ಡಾರ್ಲಿಂಗ್ ಕೃಷ್ಣ ಜೊತೆ ಆಲಿ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಈ ಸ್ಟಾರ್ ಜೋಡಿಗಳು ಪ್ರೀತಿಸುವುದಕ್ಕೆ ಶುರು ಮಾಡಿದರು. ಇದಾದ ನಂತರ 2021 ಫೆಬ್ರವರಿ 14ರಂದು ಅಂದರೆ ಪ್ರೇಮಿಗಳ ದಿನದಂದೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಸಪ್ತಪದಿ ಎಂದು ತುಳಿದು ತುಳಿದರು ಇದೀಗ ಈ ಸ್ಟಾರ್ ಜೋಡಿ ಹೊಸ ಮನೆಗೆ ಕಾಲಿಟ್ಟು ಮತ್ತೆ ಹೊಸ ಜೀವನವನ್ನು ಆರಂಭಿಸಲಿದ್ದಾರೆ.

 

 

ಮಿಲನ ನಾಗರಾಜ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವು ಹೊಸ ಮನೆಯಲ್ಲಿ ಹಾಲು ಒಪ್ಪಿಸುವ ಕಾರ್ಯದಲ್ಲಿ ನಿರತರಾಗಿರುವ ಫೋಟೋ ಹಾಗೂ ಗೃಹಪ್ರವೇಶದ ನಿಮಿತ್ತ ನವಗ್ರಹ ಪೂಜೆಯನ್ನು ಸಲ್ಲಿಸುವಾಗ ತೆಗೆದ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಈ ಸ್ಟಾರ್ ಜೋಡಿಗಳು ತಮ್ಮ ಹೊಸ ಮನೆಯ ಗೃಹಪ್ರವೇಶವನ್ನು ಮಾಡಿ ತಮ್ಮ ಹೊಸ ಮನೆಗೆ ಕ್ರಿಸ್ಮಿ ನೆಸ್ಟ್ (krismi nest) ಎಂಬ ಹೆಸರನ್ನು ಇಟ್ಟಿದ್ದಾರೆ.

 

 

ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ರವರ ಗೃಹಪ್ರವೇಶ ಸಮಾರಂಭಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ ನಟಿಯರು ಗಣ್ಯರು ಹಾಗೂ ಸ್ನೇಹಿತರು ಕೂಡ ಆಗಮಿಸಿದ್ದರು. ಇದರ ಜೊತೆಗೆ ಲವ್ ಮ್ಯಾಕ್ಟೇಲ್ ಚಾಪ್ಟರ್ 1 ಹಾಗೂ ಲವ್ ಮಾಡೆಲ್ ಚಾಪ್ಟರ್ ನಟಿಯರು ಕೂಡ ಆಗಮಿಸಿ ನಾಗರಾಜ್ ರವರ ಹೊಸ ಜೀವನಕ್ಕೆ ಶುಭ ಕೋರಿದ್ದಾರೆ.

Be the first to comment

Leave a Reply

Your email address will not be published.


*