ಶಾಲೆಯಲ್ಲಿ ಟೀಚರ್ ಹೇಳಿದ ಮಾತು ಕೇಳಿ ಮಗನನ್ನು ಕನ್ನಡ ಶಾಲೆಗೆ ಕಳಿಸಿದ ಡಿ ಬಾಸ್ ದರ್ಶನ್

ಡಿ ಬಾಸ್ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಟೀಸರ್ ಬಗ್ಗೆ ಮಾತನಾಡಿ ನಾನು ಚಿಕ್ಕ ವಯಸ್ಸಿನಲ್ಲಿ ಓದಿದ್ದೆಲ್ಲವು ಕೂಡ ಸರ್ಕಾರಿ ಶಾಲೆಯಲ್ಲೇ ಹಾಗಾಗಿ ನಾನು ಕ್ರಾಂತಿ ಸಿನಿಮಾದಲ್ಲು ಸರ್ಕಾರಿ ಶಾಲೆ ಬಗ್ಗೆ ಹೇಳಲು ಹೊರಟಿದ್ದೇನೆ.ನಾನು ಶಾಲೆಗೆ ಹೋಗುತ್ತಿದ್ದಾಗ ಐವತ್ತು ರೂಪಾಯಿ ಫೀಸ್ ಇತ್ತು ನನ್ನದು ವೈಶಾಲಿ ಎನ್ನುವ ಸರ್ಕಾರಿ ಶಾಲೆ ನಾನು ಓದುತ್ತಿರುವಾಗಿನಿಂದಲು ಇಲ್ಲಿಯವರೆಗೂ ಆ ಶಾಲೆ ಹಾಗೆ ಇದೆ ಒಂಚೂರು ಬದಲಾಗಿಲ್ಲ ಎಂದರು ತದನಂತರ ಡಿ ಬಾಸ್ ದರ್ಶನ್ ಒಂದು ಶಾಲೆಯಲ್ಲಿ ನನ್ನ ಮಗನನ್ನು ಸೇರಿಸಿದ್ದೆ ಅಲ್ಲಿನ ಟೀಚರ್ ಹೇಳಿದ ಮಾತು ಕೇಳಿ ನನ್ನ ಮಗನನ್ನು ಕನ್ನಡ ಶಾಲೆಗೆ ಸೇರಿಸಿದ್ದೇನೆ ಎಂದರು.

 

 

ಡಿ ಬಾಸ್ ದರ್ಶನ್ ರವರು ತಮ್ಮ ಮಗನನ್ನು ಒಂದು ಕಾನ್ವೆಂಟ್ ಶಾಲೆಗೆ ಸೇರಿಸಿದ್ದು ಆ ಶಾಲೆಯಲ್ಲಿ ಮಕ್ಕಳನ್ನು ಮಾಲ್ ಅಬ್ರಾಡ್ ಗೆಲ್ಲ ಟ್ರಿಪ್ ಕರೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಹೇಳಿದ್ದಾರೆ. ಆದರೆ ಡಿ ಬಾಸ್ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಅವರನ್ನು ಕೂಡ ಪಿಕ್ನಿಕ್ ಎಂದು ಹಲವು ಬಾರಿ ಕರೆದುಕೊಂಡು ಹೋಗುತ್ತಿತ್ತು ಪ್ರಾಣಿ ಸಂಗ್ರಹಾಲಯಕ್ಕೇ ಮಾತ್ರ ಅದು ಬಿಟ್ಟು ಇನ್ನೆಲ್ಲಿಗೂ ಕೂಡ ಕರೆದುಕೊಂಡು ಹೋಗುತ್ತಿರಲಿಲ್ಲ. ತಮ್ಮ ಮಗ ವಿನೀಶ್ ಸ್ಕೂಲಿನ ಬಗ್ಗೆ ಮಾತನಾಡಿದ ಡಿ ಬಾಸ್ ದರ್ಶನ್ ಅವರ ಮಗ ವಿನೀಶ್ ಶಾಲೆಯಲ್ಲಿ ಒಮ್ಮೆ ಪೇರೆಂಟ್ಸ್ ಮೀಟಿಂಗ್ ಇತ್ತು. ಅದಕ್ಕೆ ನಾನು ಕೂಡ ಹೋಗಿದ್ದೆ ನೀವು ನಿಮ್ಮ ಮಗನಿಗೆ ಎಷ್ಟು ಸಮಯವನ್ನು ನೀಡುತ್ತಿರಿ ಎಂದು ಕೇಳಿದರು

ನಾನು ಸಂಜೆ ಆರು ಗಂಟೆಗೆ ಮನೆಗೆ ಬರುತ್ತೇನೆ ತದನಂತರ ವಿನಿಶ್ ಜೊತೆ ಒಂದೆರಡು ಗಂಟೆ ಮಾತ್ರ ಮಾತನಾಡುತ್ತೇನೆ ಎಂದರು ಅದಕ್ಕೆ ಟೀಚರ್ ನೀವು ಇನ್ನು ಹೆಚ್ಚು ಸಮಯವನ್ನು ನಿಮ್ಮ ಮಗನಿಗೆ ನೀಡಬೇಕು ಅವನಿಗೆ ಓದುವುದನ್ನು ಹೇಳಿ ಕೊಡಬೇಕು ಎಂದರು ಇದನ್ನು ಕೇಳಿ ನಾನು ಬೆಳಗ್ಗಿಂದ ಸಂಜೆವರೆಗೂ ಶೂಟಿಂಗ್ನಲ್ಲಿ ಕೂಲಿ ಹೋದರೆ ಮಾತ್ರ ನನಗೆ ಹಣ ಬರುತ್ತದೆ ನಾನೇ ಅವನಿಗೆ ಹೇಳಿ ಕೊಡಬೇಕು ಎಂಬುದಾದಲ್ಲಿ ಶಾಲೆಗೆ ಏಕೆ ಕಳಿಸಬೇಕು ಎಂದು ಅವರನ್ನು ಕೇಳಿದೆ ತದನಂತರ ನನ್ನ ಮಗ ವಿನೀಶ್ ನನ್ನು ಸರ್ಕಾರಿ ಶಾಲೆಗೆ ಕಳಿಸುತ್ತಿದ್ದೇವೆ. ಇದೀಗ ನನ್ನ ಮಗ ಸರ್ಕಾರಿ ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದು ಅದರ ಬಗ್ಗೆ ಅವನು ಇಲ್ಲಿಯವರೆಗೂ ಏನೂ ಆಕ್ಷೇಪಣೆ ಮಾಡಿಲ್ಲ ಎಂದರು.

 

 

ಕ್ರಾಂತಿ ಸಿನಿಮಾದಲ್ಲಿ ನಾನು ಕನ್ನಡ ಶಾಲೆ ಬಗ್ಗೆ ಮಾತನಾಡಿದ್ದು ನನ್ನ ಶಾಲೆ ಎಂದರೆ ನನಗೆ ಹೆಮ್ಮೆ ಇದೆ. ಹಾಗಾಗಿ ಶಾಲೆ ಥೀಮ್ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ನನ್ನ ಶಾಲೆಯಲ್ಲಿ ಆಟವಾಡಲು ಗ್ರೌಂಡ್ ಕೂಡ ಇರಲಿಲ್ಲ ಆಗಿನ ಕಾಲ ಹಾಗಿತ್ತು ಆದರೆ, ಈಗಿನ ಶಾಲೆಗಳು ತುಂಬಾ ಬದಲಾಗಿವೆ ಈಗಿನ ಪ್ರೈವೇಟ್ ಶಾಲೆಗಳು ಮಾಲ್ ರೀತಿ ಸುಸಜ್ಜಿತ ವಾಗಿರುತ್ತವೆ. ಮಕ್ಕಳು ಕೂಡ ಶಾಲೆಯಲ್ಲಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇರುವ ಹಾಗೆ ಲಕ್ಸುರಿ ಆಗಿ ಇರುತ್ತಾರೆ.ಈಗಿನ ಶಾಲೆಗಳು ಶಾಲೆ ಎನಿಸುವುದೇ ಇಲ್ಲ.

ನನ್ನ ಕ್ರಾಂತಿ ಸಿನಿಮಾ ಎಲ್ಲರಿಗೂ ರೀಚ್ ಆಗಿದೆ.ಆದರೆ ನನ್ನ ಪ್ರೀತಿಯ ರಾಮು ಸಿನಿಮಾ ಎಲ್ಲರಿಗೂ ರೀಚ್ ಆಗಿರಲಿಲ್ಲ ಹಾಗೆ ಆ ಚಿತ್ರ ಚಲನ ಚಿತ್ರ ಮಂದಿರಗಳಲ್ಲಿ ಕೂಡ ಹೆಚ್ಚು ಜನರು ನೋಡಲಿಲ್ಲ ಅದಕ್ಕಾಗಿಯೇ ನಾನು ನನ್ನ ಕ್ರಾಂತಿ ಸಿನಿಮಾದ ರಿಲೀಸ್ ಡೇಟ್ ಕೂಡ ಬೇಗ ಬಿಡುಗಡೆ ಮಾಡಿದ್ದೇನೆ. ಎಲ್ಲ ನಿರ್ದೇಶಕರಿಗೂ ನಾನು ಬೇಗ ಡೇಟ್ ಅನೌನ್ಸ್ ಮಾಡಿ ಎಂದು ಕೇಳುತ್ತಿರುತ್ತೇನೆ ಯಾಕೆಂದರೆ ಹಲವಾರು ಹೊಸಬರು ಸಿನಿಮಾ ಮಾಡುತ್ತಿರುತ್ತಾರೆ. ಅವರೆಲ್ಲರಿಗೂ ಕೂಡ ತಿಯೇಟರ್ ಸಿಗಬೇಕು ಹಾಗಾಗಿ ನಾವು ಬೇಗ ಡೇಟ್ ಅನೌನ್ಸ್ ಮಾಡಬೇಕು ಇದೀಗ ಜನವರಿ 26 ಕ್ಕೆ ಕ್ರಾಂತಿ ಸಿನಿಮಾ ರಿಲೀಸ್ ಆಗುತ್ತಿದೆ . ಇದರ ಡೇಟ್ ಕೂಡ ನಾನು ಅನೌನ್ಸ್ ಮಾಡಿದ್ದೇನೆ ಬೇಗ ಡೇಟ್ ಅನೌನ್ಸ್ ಮಾಡಿದರೆ ಅಭಿಮಾನಿಗಳು ನಮ್ಮ ಸಿನಿಮಾ ನೋಡಲು ಫ್ರಿ ಮಾಡಿಕೊಂಡು ಕಾಯುತ್ತಿರುತ್ತಾರೆ. ಅವರಿಗೂ ಸಿನಿಮಾ ನೋಡಲು ಅವಕಾಶ ಸಿಗುತ್ತದೆ.

 

ನನ್ನ ಪ್ರೀತಿಯ ರಾಮು,ಅಣ್ಣಾವ್ರ,ದಾಸ ಈ ಮೂರು ಚಿತ್ರಗಳು ಒಂದೇ ಬಾರಿಗೆ ರೆಡಿ ಇದ್ದವು ಅವನ್ನು ವಾರ ವಾರ ಗ್ಯಾಪ್ ನಲ್ಲಿ ಬಿಡುಗಡೆ ಮಾಡಿದೆವು ರಿಲೀಸ್ ಪ್ಲಾನಿಂಗ್ ಸರಿ ಇರಲಿಲ್ಲ ಹಾಗಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಬೇಕು.ನಾನು ಹೊಸ ಸಿನಿಮಾ ಗಳಿಗೆ ಪ್ರತಿಭೆಗಳಿಗೆ ಸಪೋರ್ಟ್ ಮಾಡ್ತೇನೆ ಎಲ್ಲರೂ ಹೀಗೆ ಮಾಡಿದರೆ ನಿಮಗೆ ಥಿಯೇಟರ್ ಸಿಗುವುದಿಲ್ಲ ಎನ್ನುತ್ತಾರೆ. ಇದೀಗ ಎಲ್ಲರೂ ಯೋಚಿಸಿ ಸಿನಿಮಾ ನೋಡಲು ಬರುತ್ತಾರೆ .ಯಾಕೆಂದರೆ ಎರಡು ವರ್ಷ ಲಾಕ್ ಡೌನ್ ಎಲ್ಲರಿಗೂ ಕಷ್ಟ ತಂದು ಒದಗಿಸಿದೆ ಹಾಗಾಗಿ ದುಡ್ಡು ಕೊಡುವವನು ಕೂಡ ಸಿನಿಮಾ ಹೇಗಿದೆ ಎಂದು ಯೋಚಿಸಿ ಹೋಗುತ್ತಾನೆ

ಒಂದೊಳ್ಳೆ ಕಲೆಕ್ಷನ್ ಆದಲ್ಲಿ ಸಿನಿಮಾ ಹಿಟ್ ಎಂದೇ ಅರ್ಥ ಅದು ಒಂದು ದಿನ ಓಡಲಿ ಒಂದು ಗಂಟೆ ಓಡಲಿ ನಿರ್ದೇಶಕರು ಹಾಕಿದ ಹಣ ವಾಪಸ್ ಬಂದರೆ ಗೆದ್ದ ಹಾಗೇನೇ ಒಟಿಟಿ ಪ್ಲಾಟ್ ಫಾರ್ಮ್ ಬಗ್ಗೆ ಮಾತನಾಡಿದ ಡಿ ಬಾಸ್ ದರ್ಶನ್ ನಮ್ಮ ಕಾಲದಲ್ಲಿ ಡಿಡಿ ಚಂದನ ಚಾನೆಲ್ ಒಂದೇ ಇದ್ದಿದ್ದು ಈಗಲೂ ಆ ಚಾನೆಲ್ ಇದೆ ಹಾಗಾದರೆ ಅದರ ವ್ಯಾಲ್ಯೂ ಕಮ್ಮಿ ಆಯ್ತಾ ಇಲ್ಲ ತಾನೆ ಹಾಗೆ ಸಿನಿಮಾ ಎಂದರೆ ತಿಯೇಟರ್ ನಲ್ಲಿ ಹೋಗಿ ನೋಡಬೇಕು ಸ್ಕ್ರೀನ್ ಮೇಲೆ ನೋಡೋ ಮಜಾನೇ ಬೇರೆ ಫೋನ್ ಟಿವಿಯಲ್ಲಿ ನೋಡಿದರೂ ಏನು ಮಜಾ ಇರಲ್ಲ.

 

 

ನಮ್ಮ ಯಜಮಾನ ಸಿನಿಮಾ ವನ್ನು ನೆಟ್ ಫ್ಲಿಕ್ಸ್ ನಲ್ಲಿ ಅಮೇಜಾನ್ ನಲ್ಲಿ ಬಿಟ್ಟೆವು ಅಲ್ಲೆಲ್ಲ ಅವು ಓಡಿದವು ತದ ನಂತರ ತಿಯೇಟರ್ ನಲ್ಲಿ ಕೂಡ ನೂರು ದಿನ ಓಡಿತ್ತು ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇರಬೇಕು ಅಷ್ಟೇ ಆಗ ಜನರು ಕೂಡ ನೋಡೇ ನೋಡುತ್ತಾರೆ.ಸಿನಿಮಾವನ್ನು ಚಲನ ಚಿತ್ರ ಮಂದಿರಕ್ಕೆ ಹೋಗಿ ನೋಡಬೇಕು ಆಗಲೇ ಅದರ ವ್ಯಾಲ್ಯೂ ಗೊತ್ತಾಗೋದು ನೋಡದೆಯೇ ದ್ರಾಕ್ಷಿ ತುಂಬಾ ಹುಳಿ ಎಂದು ಹೇಳಲು ಸಾಧ್ಯವಿಲ್ಲ. ಕುರುಕ್ಷೇತ್ರ ಸಿನಿಮಾವನ್ನು ಅಷ್ಟು ಮಳೆಯಲ್ಲೂ ಜನ ಬಂದು ನೋಡಿದ್ದರು ತಿಯೇಟರ್ ವ್ಯಾಲ್ಯೂ ಎಂದಿಗೂ ಕಮ್ಮಿ ಆಗಲ್ಲ ಮನೆಯಲ್ಲಿ ಕುಳಿತು ಸಿನಿಮಾ ನೋಡಿದರೆ ಮಜಾ ಇರಲ್ಲ ಎಂದು ಡಿ ಬಾಸ್ ದರ್ಶನ್ ತಿಯೇಟರ್ ವಾಲ್ಯು ಬಗ್ಗೆ ಮಾತನಾಡಿದರು.

1 Trackback / Pingback

  1. ದರ್ಶನ್ ಅವರ ತಲೆಗೆ ಹತ್ತಿರ ಅಹಂಕಾರದಿಂದ ಮಗನ ಭವಿಷ್ಯ ನಾಶವಾಗುತ್ತಿದೆ:ವಿನೀಶ್ ಟೀಚರ್ ದರ್ಶನ್ ಗೆ ಹೇಳಿದ್ದೇನು

Leave a Reply

Your email address will not be published.


*