ನಿಜ ಜೀವನದಲ್ಲೂ ಒಂದಾದ ಕನ್ನಡತಿ ಧಾರವಾಹಿಯ ಹರ್ಷ ಭುವಿ.?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ಕಿರುತೆರೆಯಲ್ಲಿ ಅನೇಕ ಪ್ರೇಕ್ಷಕರನ್ನು ಹೊಂದಿದ್ದು ಈ ಧಾರಾವಾಹಿಯಲ್ಲಿರುವ ನಟರು ತಮ್ಮ ಸಹಜ ನಟನೆಯಿಂದ ಕನ್ನಡಿಗರ ಮನಸನ್ನು ಗೆದ್ದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಂಬರ್ ಒನ್ ಧಾರವಾಹಿಗಳಲ್ಲಿ ಕನ್ನಡತಿ ಧಾರವಾಹಿ ಕೂಡ ಒಂದಾಗಿದೆ. ಇದೀಗ ಕನ್ನಡತಿ ಧಾರವಾಹಿ ಕಿರಣ್ ರಾಜ್ ಹಾಗೂ ರಂಜಿನಿ ರಾಘವನ್ ರವರು ವಿವಾಹವಾಗುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲ ಕಡೆ ಹರಡಿದೆ.

 

 

ಕನ್ನಡತಿ ಧಾರವಾಹಿಯಲ್ಲಿ ರಂಜಿನಿ ರಾಘವನ್ ರವರು ಭುವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕಿರಣ್ ರಾಜ್ ಅವರು ಹರ್ಷ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಸಾರ ಅನ್ನಯ್ಯರವರು ವರುದಿನಿ ಪಾತ್ರದಲ್ಲಿ ಹಾಗೂ ಚಿತ್ಕಲಾ ಬಿರಾದರವರು ರತ್ನಮಾಲಾ ಅಮ್ಮಮ್ಮನ ಪಾತ್ರದಲ್ಲಿ ಇನ್ನು ಅನೇಕ ಕಲಾವಿದರು ಈ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ.

ಕನ್ನಡತಿ ದಾರವಾಹಿ ಕಿರುತೆರೆಯಲ್ಲಿ ಹೆಚ್ಚು ಪ್ರೇಕ್ಷಕಾ ಮಹಾಪ್ರಭುಗಳನ್ನು ಹೊಂದಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದಾರವಾಹಿಗಳ ಪೈಕಿ ಕನ್ನಡತಿ ಧಾರಾವಾಹಿಯ ಟಿ ಆರ್ ಪಿ ಹೆಚ್ಚಾಗುತ್ತಲೆ ಇದೆ. ಕನ್ನಡತಿ ಧಾರವಾಹಿಯಲ್ಲಿ ಇದೀಗ ಹರ್ಷ ಹಾಗೂ ಭುವಿಯ ಎಂಗೇಜ್ಮೆಂಟ್ ಆಗಿತ್ತು, ಈ ವಿಷಯ ವರುದಿನಿಗೇ ಕೂಡ ತಿಳಿದಿದೆ ವರುದಿನಿ ಕೂಡ ಇವರಿಬ್ಬರ ಎಂಗೇಜ್ಮೆಂಟ್ ಗೆ ಒಪ್ಪಿಕೊಂಡಿದ್ದಾರೆ.

 

 

ಕನ್ನಡತಿ ಧಾರವಾಹಿಯಲ್ಲಿ ಭುವಿರವರು ತಮ್ಮ ಸ್ನೇಹಿತೆ ವರುದಿನಿಗೆ ತಾವು ಹರ್ಷನನ್ನ ವಿವಾಹವಾಗುವ ವಿಷಯ ತಿಳಿದರೆ ಮುಂದೇನಾಗುತ್ತದೆ ಎನ್ನುವ ಭಯದಿಂದ ತಮ್ಮ ಮದುವೆಯನ್ನು ಮುಂದಕ್ಕೆ ದೂಡುತ್ತಲೆ ಇದ್ದರು ಆದರೆ,ಇದೀಗ ಅಮ್ಮಮ್ಮನ ಆಶೀರ್ವಾದ ಪಡೆದು ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ.

ಹರ್ಷ ಹಾಗೂ ಭೂಮಿಯವರ ಪ್ರೀತಿಯ ವಿಚಾರ ವರುದಿನಿಗೆ ತಿಳಿಯದೆ ಹೋಗಿದ್ದರೆ ಇವರಿಬ್ಬರ ಎಂಗೇಜ್ಮೆಂಟ್ ಎಷ್ಟು ಬೇಗ ಆಗುತ್ತಾ ಇರಲಿಲ್ಲ. ವರುದಿನಿ ಕೂಡ ಇವರಿಬ್ಬರ ಎಂಗೇಜ್ಮೆಂಟ್ಗೆ ಒಪ್ಪಿಕೊಂಡಿದ್ದು ಈಗಾಗಲೇ ಇವರಿಬ್ಬರ ಎಂಗೇಜ್ಮೆಂಟ್ ಮುಗಿದಿದೆ. ಇದೀಗಾಗಲೇ ಎಂಗೇಜ್ಮೆಂಟ್ ಮುಗಿದಿದ್ದು ತದನಂತರ ವಿವಾಹವಾಗುತ್ತಾರೆ ಎಂದು ಖಚಿತವಾಗಿದೆ. ಕನ್ನಡತಿ ದಾರವಾಹಿ ತನ್ನ ಕಥೆಯಲ್ಲಿ ಹಲವಾರು ಟ್ವಿಸ್ಟ್ ಗಳನ್ನು ನೀಡುತ್ತಿದ್ದು ಇದೀಗ ಹರ್ಷ ಹಾಗೂ ಭೂಮಿಯವರ ಮದುವೆಯ ಸಂದರ್ಭದಲ್ಲು ಕೂಡ ಹಲವಾರು ಟ್ವಿಸ್ಟ್ ಗಳು ಪ್ರೇಕ್ಷಕ ಮಹಾಪ್ರಭುಗಳಿಗಾಗಿ ಕಾದಿರುತ್ತವೆ. ಧಾರವಾಹಿಯಲ್ಲಿ ಇನ್ನು ಯಾವ ಯಾವ ಟ್ವಿಸ್ಟ್ ಗಳಿವೆ ಎಂದು ಕಾದು ನೋಡಬೇಕಾಗಿದೆ.

 

 

ಕನ್ನಡತಿ ಧಾರಾವಾಹಿಯಲ್ಲಿ ಹರ್ಷರವರ ಪಾತ್ರವನ್ನು ಮಾಡುತ್ತಿರುವ ಕಿರಣ್ ರಾಜ್ ರವರು ಈಗಾಗಲೇ ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟು ಹಲವಾರು ಚಿತ್ರಗಳಲ್ಲೂ ಕೂಡ ನಟಿಸಿದ್ದಾರೆ. ಇವರ ಆಲ್ಬಮ್ ಸಾಂಗ್ ಕೂಡ ರಿಲೀಸ್ ಆಗಿ ಪ್ರೇಕ್ಷಕರಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಇದೀಗ ಅಸತೋಮ ಸದ್ಗಮಯ ಎಂಬ ಚಿತ್ರದಲ್ಲೂ ಕೂಡ ಕಿರಣ್ ರಾಜ್ ರವರು ನಟಿಸುತ್ತಿದ್ದಾರೆ.

ಕನ್ನಡತಿ ಧಾರವಾಹಿಯಲ್ಲಿ ರಂಜನಿ ರಾಘವನ್ ಅವರು ಭುವಿ ಎಂಬ ಪಾತ್ರದಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಇವರು ಕನ್ನಡವನ್ನೇ ಮಾತನಾಡುತ್ತಿರುತ್ತಾರೆ. ಇವರು ಧಾರಾವಾಹಿಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಕೂಡ ಅಚ್ಚ ಕನ್ನಡದಲ್ಲಿ ಮಾತನಾಡುತ್ತಾ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ರಂಜನಿ ರಾಘವೇಂದ್ರ ಅವರು ಇದೀಗಾಗಲೇ ಹಿರಿತೆರೆಯಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದು ದಿಗಂತ್ ಹಾಗೂ ಐಂದ್ರಿತಾರೆ ರವರ ಜೊತೆ “ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ” ಎನ್ನುವ ಚಿತ್ರದಲ್ಲಿ ನಟಿಸಿದ್ದು ಇವರು ಮೊದಲಿಗೆ “ಮಂಗಳ ಗೌರಿಯ ಮದುವೆ ” ಎನ್ನುವ ದಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು.

 

 

ತದನಂತರ “ರಾಜಹಂಸ” ಎನ್ನುವ ಚಿತ್ರದಲ್ಲೂ ಕೂಡ ನಟಿಸಿದ್ದರು. ಇವರು ಕಥೆಡಬ್ಬಿ ಎಂಬ ಪುಸ್ತಕ ಸರಣಿಯನ್ನು ಬಿಡುಗಡೆ ಮಾಡಿ ಯಶಸ್ಸು ಕಂಡಿದ್ದಾರೆ. ರಂಜಿನಿ ರಾಘವನ್ ಹಾಗೂ ಕಿರಣ್ ರಾಜ್ ರವರು ಕನ್ನಡತಿ ಧಾರವಾಹಿಯಲ್ಲಿ ಜೋಡಿಗಳಾಗಿ ಕಾಣಿಸಿಕೊಂಡಿದ್ದು ಈ ಜೋಡಿಯ ಬಗ್ಗೆ ಅಭಿಮಾನಿಗಳೆಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇವರಿಬ್ಬರು ನಿಜ ಜೀವನದಲ್ಲೂ ವಿವಾಹವಾದರೆ, ತುಂಬಾ ಚೆನ್ನಾಗಿರುತ್ತೆ ಎಂದು ಕೂಡ ಎಲ್ಲರೂ ಹೇಳುತ್ತಿದ್ದಾರೆ. ಸದ್ಯಕ್ಕೆ ಇವರಿಬ್ಬರು ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ

Be the first to comment

Leave a Reply

Your email address will not be published.


*