ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು ಕಿಚ್ಚ ಸುದೀಪ್ ರವರಿಗೆ ಇಬ್ಬರು ಅಕ್ಕಂದಿರು ಇದ್ದು ಸುದೀಪ್ ಅವರು ತಮ್ಮ ಶಾಲೆಯ ವಿದ್ಯಾಭ್ಯಾಸವನ್ನು ಶಿವಮೊಗ್ಗದಲ್ಲಿ ಮುಗಿಸಿದರು ತದನಂತರ ಸುದೀಪ್ ಅವರ ಕುಟುಂಬದವರ ಜೊತೆ ಬೆಂಗಳೂರಿಗೆ ಶಿಫ್ಟ್ ಆದರೂ ಬೆಂಗಳೂರಿಗೆ ಶಿಫ್ಟ್ ಆದ ನಂತರ ಸುದೀಪ್ ಬೆಂಗಳೂರಿನ ನೇ ಕಾಲೇಜಿಗೂ ಕೂಡ ಪ್ರವೇಶವನ್ನು ಪಡೆದುಕೊಂಡರು.
ಸುದೀಪ್ ಅವರ ತಂದೆ ಸಂಜೀವ್ ರವರು ದೊಡ್ಡ ಬಿಸಿನೆಸ್ ಮ್ಯಾನ್ ಆಗಿ ಕೆಲಸವನ್ನು ಮಾಡುತ್ತಿದ್ದರು ಅವರ ಹಲವಾರು ಹೋಟೆಲ್ ಗಳು ಬೆಂಗಳೂರಿನಲ್ಲಿ ಇದ್ದವು ಕಿಚ್ಚ ಸುದೀಪ್ ರವರ ಪತ್ನಿ ಪ್ರಿಯ ರಾಧಾಕೃಷ್ಣ ಅವರ ಮೂಲ ಸ್ಥಳ ಕೇರಳವಾಗಿದ್ದು ಅವರ ಮಾತೃಭಾಷೆ ಮಲಯಾಳಂ ಪ್ರಿಯ ರವರು ಸುದೀಪ್ ರವರಿಗೆ ಒಂದು ಸಿನಿಮಾ ಥಿಯೇಟರ್ ನಲ್ಲಿ ಕಾಮನ್ ಫ್ರೆಂಡ್ ಮೂಲಕ ಮೊದಲು ಪರಿಚಯವಾಗುತ್ತಾರೆ. ತದನಂತರ ಇವರಿಬ್ಬರೂ ಬೆಸ್ಟ್ ಫ್ರೆಂಡ್ ಗಳಾಗಿ ಬದಲಾಗುತ್ತಾರೆ.
ಇವರಿಬ್ಬರೂ ಸ್ನೇಹಿತರಾದ ನಂತರವೂ ಕೂಡ ಪ್ರಿಯಾರವರಿಗೆ ಸುದೀಪ್ ನನ್ನ ಗಂಡ ಆಗುತ್ತಾರೆ ಎನ್ನುವ ವಿಚಾರ ಎಂದಿಗೂ ಕೂಡ ತಿಳಿದಿರಲಿಲ್ಲ ಹಾಗೆ ಅವರು ಕೂಡ ಅದನ್ನು ಊಹಿಸಿರಲಿಲ್ಲ ಪ್ರಿಯಾ ತನ್ನ ಕಾಲೇಜ್ ಮುಗಿಸಿ ತಮ್ಮ ಜೀವನದಲ್ಲಿ ಸಿಕ್ಕಾಪಟ್ಟೆ ಬಿಸಿಯಾಗುತ್ತಾರೆ ಹಲವಾರು ಕೆಲಸಗಳನ್ನು ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ. ಮೊದಲು ಗಗನಸಖಿಯಾಗಿ ಕೆಲಸ ಮಾಡುತ್ತಾರೆ.
ಗಗನಸಖಿಯಾಗಿ ಕೆಲಸ ಮಾಡಿದ ನಂತರ ಬ್ಯಾಂಕಿನಲ್ಲಿ ಕೂಡ ಕೆಲಸ ಮಾಡುತ್ತಾರೆ. ಅದೇ ರೀತಿ ಸುದೀಪ್ ಕೂಡ ಹಲವಾರು ಕಡೆ ತಾನು ನಟನೆಯಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಅದರ ಬಗ್ಗೆ ತಯಾರಿ ನಡೆಸುತ್ತಾರೆ ತದನಂತರ ಇವರಿಬ್ಬರು ಲವ್ ಮಾಡಲು ಶುರು ಮಾಡುತ್ತಾರೆ. ಸ್ಪರ್ಶ ಎನ್ನುವ ಸಿನಿಮಾದ ಮೂಲಕ ಸುದೀಪ್ ರವರಿಗೆ ಸಿನಿಮಾದಲ್ಲಿ ದೊಡ್ಡ ಬ್ರೇಕ್ ಸಿಗುತ್ತದೆ ಎಂದು ಸುದೀಪ್ ಊಹಿಸಿರುತ್ತಾರೆ.
ಆದರೆ ಸಿನಿಮಾ ಚೆನ್ನಾಗಿದ್ದರು ಕೂಡ ಇದು ಹೆಚ್ಚು ದಿನಗಳ ಕಾಲ ವೀಕ್ಷಣೆಯನ್ನು ಕಾಣುವುದಿಲ್ಲ ಅದೇ ಸಮಯದಲ್ಲಿ ವೀರಪ್ಪನ್ ಡಾಕ್ಟರ್ ರಾಜಕುಮಾರ್ ರವರನ್ನು ಕಿಡ್ನಾಪ್ ಮಾಡಿರುತ್ತಾರೆ ಆದ ಕಾರಣ ಸುದ್ದಿಗಳಲ್ಲಿ ಕಿಡ್ನಾಪ್ ವಿಚಾರವೇ ಬಿತ್ತರವಾಗುತ್ತಿದ್ದ ಕಾರಣ ಸುದೀಪ್ ರವರ ಸ್ಪರ್ಶ ಸಿನಿಮಾ ಪ್ಲಾಪ್ ಆಗುತ್ತದೆ. ಆದರೆ ಕಿಚ್ಚ ಸುದೀಪ್ ಮತ್ತು ಪ್ರಿಯ ತಾವಿಬ್ಬರು ಪ್ರೀತಿಸಿ ಮದುವೆಯಾಗಿ ಸುಖವಾಗಿದ್ದಾರೆ. ಕಿಚ್ಚ ಸುದೀಪ್ ಹಾಗೂ ಪ್ರಿಯಾದಂಪತಿಗಳಿಗೆ ನಿವೇದಿತಾ ಎನ್ನುವ ಮಗಳು ಕೂಡ ಇದ್ದಾರೆ.