ರಾಕಿಂಗ್ ಸ್ಟಾರ್ ಯಶ್ ನಮ್ಮ ಕೆಜಿಎಫ್ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಜನರಿಂದ ಹೆಚ್ಚು ಮನ್ನಣೆಗೆ ಒಳಗಾಗಿವೆ ಕೆಜಿಎಫ್ 3 ಯಾವಾಗ ರಿಲೀಸ್ ಆಗುತ್ತದೆ ಒಂದು ಜನರಲ್ಲಿ ಕುತೂಹಲ ಕೂಡ ಮಾಡುತ್ತಿದೆ. ಕೆಜಿಎಫ್ ಚಿತ್ರ ಜೇಮ್ಸ್ ಬಾಂಡ್ ಸಿನೆಮಾ ರೀತಿ ಹಲವಾರು ಸರಣಿಯಲ್ಲಿ ಮೂಡಿ ಬರುತ್ತದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದಾರೆ.
ವಿಜಯ್ ಕಿರಗಂದೂರು ಕೆಜಿಫ್ 3 ಚಿತ್ರದ ಬಗ್ಗೆ ಮಾತನಾಡಿ ಕೆಜಿಎಫ್ ಚಿತ್ರವು 5 ಸರಣಿಯ ರೂಪದಲ್ಲಿ ಬರುತ್ತದೆ. ಕೆಜಿಎಫ್ ಭಾಗ 5 ಮುಗಿದ ನಂತರ ಹೀರೋ ಕೂಡ ಬದಲಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ ಚಾಪ್ಟರ್ 3 ಚಿತ್ರದ ಬಗ್ಗೆ ಜನರ ಕುತೂಹಲ ಹೆಚ್ಚಾಗುತ್ತಿದೆ. ಕೆಜಿಎಫ್ 3 ಚಿತ್ರ ರಿಲೀಸ್ ಆಗುವುದರ ಬಗ್ಗೆ ಕೂಡ ವಿಜಯ್ ಕಿರಗಂದೂರು ಮಾತನಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಎಂದರೆ ಸಾಕು ಜನರಲ್ಲಿ ಸಾಕಷ್ಟು ಕುತೂಹಲ ಮೂಡುತ್ತದೆ. ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸರಣಿ ಚಿತ್ರಗಳಿಗಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ವರ್ಷಕ್ಕೆ ಒಂದೇ ಸಿನಿಮಾ ಎಂದು ಡೆಡಿಕೇಶನ್ ಕೊಟ್ಟು ಒಂದೊಂದೇ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.
ಕೆಜಿಎಫ್ 1 ಹಾಗೂ ಕೆಜಿಎಫ್ 2 ಚಿತ್ರಗಳು ರಿಲೀಸ್ ಆದ ನಂತರ ಕೆಜಿಎಫ್ 3 ಚಿತ್ರ ಕೂಡ ಬರುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರ ಮುಗಿಯುವ ಕೊನೆ ಹಂತದಲ್ಲಿ ಕೆಜಿಎಫ್ ಚಾಪ್ಟರ್ 3 ಬರುತ್ತದೆ ಎಂದು ಸುಳಿವು ಕೂಡ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್ 3 ಯಾವಾಗ ರಿಲೀಸ್ ಆಗುತ್ತದೆ ಎನ್ನುವುದರ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿ ಕೆಜಿಎಫ್ 3 ರಿಲೀಸ್ ಡೇಟ್ ತಿಳಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ರವರ ಬಹುಬೇಡಿಕೆಯ ಚಿತ್ರವಾದ ಕೆಜಿಎಫ್ ಚಿತ್ರದ ಮೂರನೇ ಸರಣಿ 2025 ಕ್ಕೆ ರಿಲೀಸ್ ಆಗುತ್ತದೆ. ಯಶ್ ರವರ ಬಹು ಬೇಡಿಕೆಯ ಕೆಜಿಎಫ್ ಚಾಪ್ಟರ್ 3 ಚಿತ್ರದ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಸೈನಿಕ ಭಾಸ್ಕರ್ ಎನ್ನುವ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಜೇಮ್ಸ್ ಬಾಂಡ್ ಚಿತ್ರ ಹೇಗೆ ಸರಣಿಗಳ ರೂಪದಲ್ಲಿ ಮೂಡಿಬಂದಿತ್ತೋ ಅದೇ ರೀತಿ ಕೆಜಿಎಫ್ ಚಿತ್ರ ಕೂಡ ಐದು ಸರಣಿಗಳಲ್ಲಿ ಮೂಡಿಬರುತ್ತದೆ. ಐದು ಸರಣಿಗಳು ಮುಗಿದ ನಂತರ ನಾಯಕನಟನನ್ನು ಬದಲಾಯಿಸಲಾಗುತ್ತದೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ. ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯಕ್ಕೆ ಸಲಾರ್ ಎನ್ನುವ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ತದನಂತರ ಜೂನಿಯರ್ ಎನ್ಟಿಆರ್ ರವರಿಗೆ ಒಂದು ಚಿತ್ರವನ್ನು ಪ್ರಶಾಂತ ನಿರ್ದೇಶಿಸುತ್ತೇನೆ ಎಂದು ತಿಳಿಸಿದ್ದಾರೆ. ಪ್ರಶಾಂತ್ ನೀಲ್ ಹಲವಾರು ಚಿತ್ರಗಳು ಒಪ್ಪಿಕೊಂಡಿರುವುದರಿಂದ ಅವುಗಳನ್ನು ಮುಗಿಸುವ ವೇಳೆ 2025 ಆಗುತ್ತದೆ. ಕೆಜಿಎಫ್ ಚಾಪ್ಟರ್ 3 ಸಿನಿಮಾ ಕೂಡ 2025ಕ್ಕೆ ಬಿಡುಗಡೆಯಾಗುತ್ತದೆ ಅಥವಾ 2026 ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದಾರೆ.