ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿಯ ಮೂಲಕ ಕವಿತಾ ಗೌಡ(Kavita Gowda) ಹಾಗೂ ಚಂದನ್ ಕುಮಾರ್(Chandan Kumar) ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು ಕವಿತಾ ಗೌಡ ಹಾಗೂ ಚಂದನ್ ದಂಪತಿಗಳು ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ರವರು ಹೊಸ ಹೊಸ ಹೋಟೆಲ್ ಗಳನ್ನೂ ಶುರು ಮಾಡಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಇವರಿಬ್ಬರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೋಟೆಲ್ ಮಾತ್ರವಲ್ಲದೆ ಹಲವಾರು ರೆಸಾರ್ಟ್ ಗಳನ್ನು ಕೂಡ ಮಾಡುತ್ತಿದ್ದಾರೆ. ಇಂದು ಕವಿತಾ ಗೌಡ ರವರ ಹೋಟೆಲ್ ಗೆ ನಾಗಿಣಿ ಟು ಧಾರವಾಹಿ ಖ್ಯಾತಿಯ ನಮ್ರತಾ ಗೌಡ (Namrata gowda) ಭೇಟಿ ಕೊಟ್ಟಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಪರಿಚಯವಾಗಿ ಆ ಧಾರವಾಹಿಯ ಮೂಲಕವೇ ಇವರು ಪ್ರೀತಿಸಿ ಮದುವೆಯನ್ನು ಕೂಡ ಆಗಿದ್ದರು ಇದೀಗ ಖುಷಿ ಖುಷಿಯಿಂದ ಜೀವನವನ್ನು ನಡೆಸುತ್ತಿದ್ದಾರೆ. ಈ ಹಿಂದೆ ಕವಿತಾ ಗೌಡ ಹಾಗೂ ಚಂದನ್ ದಂಪತಿಗಳು ರೆಸಾರ್ಟ್ ಒಂದನ್ನು ಶುರು ಮಾಡಿದ್ದರು ಇದೀಗ ಅವರು ಹೊಸ ಉದ್ಯಮವನ್ನು ಶುರು ಮಾಡಿದ್ದು ಮೈಸೂರಿನಲ್ಲಿ ಇವರಿಬ್ಬರು ಇದೀಗ ಮಂಡಿಪೇಟೆ ಹೋಟೆಲ್ ಎನ್ನುವ ಹೋಟೆಲ್ ಪ್ರಾರಂಭ ಮಾಡಿದ್ದಾರೆ.
ಚಂದನ್ ಕುಮಾರ್ ಅವರು ಲಕ್ಷ್ಮಿ ಬಾರಮ್ಮ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ಹಲವಾರು ಧಾರವಾಹಿಗಳಲ್ಲಿ ನಟಿಸಿ ಹಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅರ್ಜುನ್ ಸರ್ಜಾ ರವರ ಪುತ್ರಿ ಐಶ್ವರ್ಯ ಸರ್ಜಾ ರವರ ಜೊತೆಗೆ “ಪ್ರೇಮ ಬರಹ” ಎನ್ನುವ ಸಿನಿಮಾದಲ್ಲಿ ನಟಿಸಿ ಹಿರಿತೆರೆಗೂ ಕೂಡ ಕಾಲಿಟ್ಟಿದ್ದರು ಇಷ್ಟೇ ಅಲ್ಲದೆ ಸೂಪರ್ ಸ್ಟಾರ್ ಜೆಕೆ ಹಾಗೂ ಚಿಕ್ಕಣ್ಣರವರ ಜೊತೆ ಬೆಂಗಳೂರು ಎನ್ನುವ ಚಿತ್ರದಲ್ಲೂ ಕೂಡ ನಟಿಸಿ ಪ್ರಕ್ಯಾತಿಯನ್ನು ಪಡೆದುಕೊಂಡಿದ್ದರು ಚಂದನ್ ಕುಮಾರ್ ರವರ ಪತ್ನಿ ಕವಿತಾ ಗೌಡ ಕೂಡ ಲಕ್ಷ್ಮೀ ಬಾರಮ್ಮ ಧಾರವಾಹಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಂತರ ಇವರು ಕೂಡ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕವಿತಾ ಗೌಡ ಹಾಗೂ ಚಂದನ್ ಕುಮಾರ್ ರವರ ಹೋಟೆಲಿಗೆ ನಾಗಿಣಿ2 ಧಾರಾವಾಹಿ ಖ್ಯಾತಿಯ ನಮೃತ ಕೂಡ ಆಗಮಿಸಿ ಬಿರಿಯಾನಿಯನ್ನು ಸವಿದಿದ್ದಾರೆ. ನಾಗಿಣಿ ಭಾಗ ಒಂದರಲ್ಲಿ ದೀಪಿಕಾ ದಾಸ್ ಹಾಗೂ ದೀಕ್ಷಿತ್ ಶೆಟ್ಟಿ ನಟಿಸಿದ್ದು ನಾಗಿಣಿ ಭಾಗ ಎರಡರಲ್ಲಿ ನಮ್ರತಾ ಹಾಗೂ ಕಾರ್ತಿಕ್ ನಿನಾದ ನಟಿಸುತ್ತಿದ್ದಾರೆ.
ನಾಗಿಣಿ ಭಾಗ 2 ಧಾರವಾಹಿಯನ್ನು ನಿರ್ದೇಶಕ ಮಗೇಶ್ ರಾವ್ ನಿರ್ದೇಶಿಸಿದ್ದು ರಾಮ್ ಜಿ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಮಾಡಲಾಗಿದೆ ನಾಗಿಣಿ ಭಾಗ 2 ಧಾರವಾಹಿ ಫೆಬ್ರವರಿ 17 2020 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ. ನಮ್ರತಾ ಗೌಡ ಈ ಮೊದಲೇ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷಿತ್ ರವರ ಜೊತೆಗೆ ಪುಟ್ಟಗೌರಿ ಮದುವೆಯಲ್ಲಿ ನಟಿಸಿದ್ದರು
ನಮ್ರತಾ ಗೌಡ ಬೆಂಗಳೂರಿನಲ್ಲಿರುವ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ದಂಪತಿಗಳ ಮಂಡಿಪೇಟೆ ಬಿರಿಯಾನಿ ಹೋಟೆಲ್ ಗೆ ಭೇಟಿ ಕೊಟ್ಟು ಅಲ್ಲಿನ ಬಿರಿಯಾನಿಯನ್ನು ಕೂಡ ಸವಿದು ಕವಿತಾ ಗೌಡ ಹಾಗೂ ಚಂದನ್ ದಂಪತಿಗಳ ಜೊತೆ ಕೆಲ ಸಮಯ ಮಾತನಾಡಿದ್ದಾರೆ. ಈ ವೇಳೆ ಕವಿತಾ ಗೌಡ ನಮ್ರತಾ ರವರ ಉದ್ದವಾದ ರೇಷ್ಮೆ ಅಂತ ಕೂದಲನ್ನು ನೋಡಿ ಶಾಕ್ ಆಗಿದ್ದಾರೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ