ರಾಜ್ಕುಮಾರ್ ಕುಟುಂಬದ ಹೊಸ ಪ್ರತಿಭೆ ಯುವ ರಾಜ್ಕುಮಾರ್ ಅಭಿನಯದ ಇತ್ತೀಚೆಗಷ್ಟೇ ಅನೌನ್ಸ್ ಆಗಿರುವ ಸಿನಿಮಾ ‘ಯುವ’ ಶೀರ್ಷಿಕೆ ಅನಾವರಣಗೊಂಡ ನಂತರ, ಪಾತ್ರವರ್ಗದ ಬಗ್ಗೆ ದೊಡ್ಡ ಅಪ್ಡೇಟ್ ಇತ್ತು. ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಲಿದ್ದಾರೆ. ಈ ಬ್ರೇಕಿಂಗ್ ನ್ಯೂಸ್ ಚಿತ್ರತಂಡದಿಂದಲೇ ಹೊರಬಿದ್ದಿದೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಸಾರಥ್ಯದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ‘ಹೊಂಬಾಳೆ ಫಿಲಂಸ್’ ಬಂಡವಾಳ ಹೂಡುತ್ತಿದೆ. ‘ಯುವ’ ಚಿತ್ರಕ್ಕೆ ಆಯ್ಕೆಯಾಗುತ್ತಿರುವುದಕ್ಕೆ ಸಪ್ತಮಿ ಗೌಡ ಖುಷಿಯಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಹೊಂಬಾಳೆ ಫಿಲಂಸ್ ನಲ್ಲಿ ನಟಿ ಸಪ್ತಮಿ ಗೌಡ ಅವರ 2ನೇ ಚಿತ್ರ ಇದಾಗಿದೆ. ಈ ಹಿಂದೆ ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ರಿಷಬ್ ಶೆಟ್ಟಿ ನಿರ್ದೇಶಿಸಿದ ಮತ್ತು ನಟಿಸಿದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ಗಳಿಸಿತು. ಜೊತೆಗೆ ಸಪ್ತಮಿ ಗೌಡ ಅವರಿಗೂ ಈ ಸಿನಿಮಾದಿಂದ ದೊಡ್ಡ ಬ್ರೇಕ್ ಸಿಕ್ಕಿದೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸಪ್ತಮಿ ಗೌಡ ‘ಕಾಂತಾರ’ ಚಿತ್ರದ ಮೂಲಕ ದೊಡ್ಡ ಹೆಸರು ಪಡೆದರು. ‘ಕಾಂತಾರ’ ಚಿತ್ರ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ನ ಮತ್ತೊಂದು ‘ಯುವ’ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿರುವುದು ವಿಶೇಷ.
View this post on Instagram
ಈಗ ಯುವ ರಾಜ್ಕುಮಾರ್ಗೆ ಜೋಡಿಯಾಗಲು ಅವರು ಒಪ್ಪಿಕೊಂಡಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಮಾರ್ಚ್ 17ರಿಂದ ಯುವ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಇದೇ ವರ್ಷ ಡಿಸೆಂಬರ್ 22ಕ್ಕೆ ಯುವ ಸಿನಿಮಾದ ಬಿಡುಗಡೆ ದಿನಾಂಕ ಕೂಡ ನಿರ್ಧಾರವಾಗಿದೆ.