Shilpa Shetty Puttur: ಬೋಲ್ಡ್ ಲುಕ್‌ ಇರುವ ಮಾಡರ್ನ್ ಫೋಟೋ ಹಂಚಿಕೊಂಡ ರಾಜಾ ರಾಣಿ ಧಾರಾವಾಹಿ ನಟಿ ಶಿಲ್ಪಾ ಶೆಟ್ಟಿ

Shilpa Shetty Puttur: ಪುತ್ತೂರು ಮೂಲದ ನಟಿ ಶಿಲ್ಪಾ ಶೆಟ್ಟಿ (Shilpa Shetty Puttur) ಈಗ ಬೋಲ್ಡ್ ಲುಕ್ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಲ್ಪಾ ಶೆಟ್ಟಿ ಬರೀ ಬಾಲಿವುಡ್ ನಟಿ, ಕನ್ನಡದ ಹುಡುಗಿ ಎಂದು ಭಾವಿಸಬೇಡಿ.

 

Shilpa Shetty Puttur

 

ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಎರಡು ಕನಸು’, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ‘ನಾಗಕನ್ನಿಕೆ’ ಮತ್ತು ‘ರಾಜಾ ರಾಣಿ’ ಧಾರಾವಾಹಿಗಳಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯ ‘ಮರಳಿ ಮನಸಾಗಿದೆ’ ಧಾರಾವಾಹಿಯಲ್ಲೂ ಶಿಲ್ಪಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಧಾರಾವಾಹಿಗಳ ಜೊತೆ ಸಿನಿಮಾದ ಕಡೆಗೂ ಮುಖ ಮಾಡಿದರು.

 

Shilpa Shetty Puttur

 

ತುಳುವಿನಲ್ಲಿ ‘ಗಿರ್ಗಿಟ್’ ಹಿಟ್ ಆಗಿತ್ತು

‘ಗಿರ್ಗಿಟ್’ ತುಳು ಸಿನಿಮಾದಲ್ಲಿ ನಟಿಸಿದ್ದ ಶಿಲ್ಪಾಗೆ ದೊಡ್ಡ ಯಶಸ್ಸು ಸಿಕ್ಕಿದೆ. ಆ ನಂತರ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾದರು. ಧಾರಾವಾಹಿಯ ಜೊತೆಗೆ ಶಿಲ್ಪಾ ಸಿನಿಮಾಗಳಿಗೂ ಕಾಲಿಟ್ಟರು. ಕನ್ನಡದ ಒಂದೆರಡು ಸಿನಿಮಾಗಳಲ್ಲಿ ನಟಿಸಿರುವ ಶಿಲ್ಪಾ ಶೆಟ್ಟಿ ಈಗ ‘ಶುಗರ್ ಫ್ಯಾಕ್ಟರಿ’ ಸಿನಿಮಾದಲ್ಲಿ ಯಶಸ್ಸು ಪಡೆಯುತ್ತಾರಾ ಕಾದು ನೋಡಬೇಕಿದೆ.

 

 

ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ

ರಮೇಶ್ ಅರವಿಂದ್ ಅವರ ‘100’ ಚಿತ್ರದಲ್ಲಿ ಶಿಲ್ಪಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಪಾತ್ರ ಸಿಗುವ ಸಿನಿಮಾ ಮಾಡಲು ಕಾಯುತ್ತಿದ್ದಾರೆ.

 

 

ನಟಿ ತಮ್ಮ ಗೆಟಪ್ ಬದಲಾಯಿಸಿದ್ದಾರೆ

ಇತ್ತೀಚೆಗೆ ಹೇರ್ ಸ್ಟೈಲ್ ಕೂಡ ಬದಲಿಸಿಕೊಂಡಿರುವ ಶಿಲ್ಪಾ ಮಾಡರ್ನ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದರ ಹಿಂದೆ ಒಂದರಂತೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

 

 

ಹುಟ್ಟುಹಬ್ಬದ ಆಚರಣೆ

ಶಿಲ್ಪಾ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ. ಅವರು ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ.

 

 

ಈಗಾಗಲೇ ಹಲವಾರು ಕಿರುತೆರೆ ನಟಿಯರು ಕನ್ನಡ ಚಿತ್ರರಂಗಕ್ಕೆ ಸಿನಿಮಾ ನಾಯಕಿಯರಾಗಿ ಎಂಟ್ರಿಕೊಟ್ಟು ಭರ್ಜರಿ ಯಶಸ್ಸು ಕಂಡಿದ್ದಾರೆ. ಅದೇ ರೀತಿ ಶಿಲ್ಪಾ ಕೂಡ ಸಿನಿಮಾಗಳಲ್ಲಿ ಮುಂದುವರಿಯುವ ಭರವಸೆಯಲ್ಲಿದ್ದಾರೆ.

Leave a Comment