ಈ ಯುಗದಲ್ಲಿ ಸಿನಿಮಾಗಳು ಎಂತಹ ಅಂತಕ್ಕೆ ತಲುಪುತ್ತಿದೆ ಎಂದರೆ, ಸಿನಿಮಾಗಳಲ್ಲಿ ಮಧ್ಯಪಾನ ಮಾಡುವ ಸಿಗರೇಟ್ ಸೇದುವ ದೃಶ್ಯಗಳಿಲ್ಲದೆ ಸಿನಿಮಾಗಳನ್ನು ಮಾಡುವುದೇ ಕಷ್ಟವಾಗಿದೆ. ಅಷ್ಟೇ ಅಲ್ಲದೆ ಮಧ್ಯಪಾನ ಧೂಮಪಾನವಿಲ್ಲದ ಸಿನಿಮಾಗಳನ್ನು ಹುಡುಕಲು ಹೋದರೆ ಸಿಗುವುದು ಕಷ್ಟ. ಹಾಗಾಗಿಯೇ ಸಾಕಷ್ಟು ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಉಪದೇಶವನ್ನು ಕೇಳುವುದನ್ನು ಬಿಟ್ಟುಬಿಟ್ಟಿದ್ದಾರೆ. ಕೆಲವರು ಉತ್ತಮ ರೀತಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದು ತಮ್ಮ ಅಭಿಮಾನಿಗಳಿಗೆ ಆದರ್ಶವಾಗಿದ್ದಾರೆ. ಕನ್ನಡದಲ್ಲಿಯೂ ಕೂಡ ಧೂಮಪಾನ ಮಧ್ಯಪಾನ ಮಾಡದಂತಹ ಕನ್ನಡದ ಕೆಲವು ನಟರು ನಮಗೆ ಸಿಗುತ್ತಾರೆ. ಹೌದು ಗೆಳೆಯರೇ ತಮ್ಮ ಸಿನಿಮಾಗಳಲ್ಲಿ ಮಧ್ಯಪಾನ ಹಾಗೂ ಧೂಮಪಾನದ ಯಾವುದೇ ದೃಶ್ಯಗಳನ್ನು ತೋರಿಸಲು ಇಷ್ಟಪಡದ ಕೆಲವು ನಟರು ಕೂಡ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇಂದು ಈ ಲೇಖನದ ಮೂಲಕ ಅವರುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮೊದಲನೆಯದಾಗಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹಾಗೂ ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮ ಜೀವನದಲ್ಲಿ ಯಾರನ್ನು ಬೇಕಾದರೂ ಮರೆತರೂ ಕೂಡ ಪುನೀತ್ ರಾಜಕುಮಾರ್ ರವರನ್ನು ಮರೆಯಲು ಸಾಧ್ಯವೇ ಇಲ್ಲ ಯಾಕೆಂದರೆ ಪುನೀತ್ ರಾಜಕುಮಾರ್ ಒಬ್ಬರು ಜೆಂಟಲ್ ಮ್ಯಾನ್ ಆಗಿದ್ದಾರೆ ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಮಿತ್ರರಂತೆ ಮಾತನಾಡಿಸುತ್ತಾರೆ. ಅವರನ್ನು ಒಮ್ಮೆ ಭೇಟಿಯಾಗಬೇಕು ಎನ್ನುವುದು ಹಲವರ ಕನಸಾಗಿತ್ತು ಆದರೆ ಅವರು ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಪುನೀತ್ ರಾಜಕುಮಾರ್ ಬದುಕಿರುವ ಅಷ್ಟು ದಿನಗಳಿಂದ ತಮ್ಮ ಜೀವನದಲ್ಲಿ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವಿಸುತ್ತಿದ್ದರು ಒಳ್ಳೆಯ ಕಥೆಗಳಿರುವ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡುತ್ತಿದ್ದರು ತನ್ನ ಸಿನಿಮಾದಿಂದ ಅಭಿಮಾನಿಗಳಿಗೆ ಯಾವುದಾದರೂ ಸಂದೇಶ ನಿಮ್ಮಬೇಕು ಎನ್ನುವರು ಹೃದಯವಂತಿಕೆ ಅವರಲ್ಲಿ ಇತ್ತು.
ಪುನೀತ್ ರಾಜಕುಮಾರ್ ಮಾತ್ರವಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಮಧ್ಯಪಾನ ಧೂಮಪಾನವನ್ನು ಹತ್ತಿರಕ್ಕೆ ಕೂಡ ಸೇರಿಸದ ಸಾಕಷ್ಟು ಅಪ್ಪಟ ಕನ್ನಡ ಅಭಿಮಾನಿಗಳು ಇದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ನಿಜ ಜೀವನದಲ್ಲಿ ಸಿಗರೇಟ್ ಕೂಡ ಸೇದುವುದಿಲ್ಲ ತಮ್ಮ ಜೀವನ ಹಾಗೂ ಅದರ ಕಥೆಗಳು ಮಾತ್ರ ನನಗೆ ಮತ್ತು ತರಿಸುತ್ತದೆ. ಅದನ್ನು ಬಿಟ್ಟು ಇನ್ಯಾವುದು ನನಗೆ ಕಿಕ್ ಕೊಡುವುದಿಲ್ಲ ಎಂದಿದ್ದಾರೆ.
ನೆಟ್ ಕಿಚ್ಚ ಸುದೀಪ್ ಪ್ರಾರಂಭದ ದಿನದಲ್ಲಿ ಸಿಗರೇಟ್ ಗಳನ್ನು ಸೇದುತ್ತಿದ್ದರು ತಯನಂತರ ಮೈಗ್ರೇನ್ ತಲೆ ನೋವಿಗೆ ತುತ್ತಾಗಿ ಸುದೀಪ್ ಸಿಗರೇಟ್ ಸೇದುವುದನ್ನು ಬಿಟ್ಟರು ಇವರು ಎಣ್ಣೆಯನ್ನು ಕೂಡ ಸೇವಿಸುವುದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಕನ್ನಡದ ಸ್ಟಾರ್ ನಟರು ಕೇವಲ ನಟರಾಗಿರದೆ ಕನ್ನಡ ಜನತೆಗೆ ಸ್ಪೂರ್ತಿಯ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿಯೇ ಅವರು ಉತ್ತಮ ರೀತಿಯಲ್ಲಿ ನಡೆದರೆ ಅವರ ಅಭಿಮಾನಿಗಳು ಕೂಡ ಅದೇ ದಾರಿಯಲ್ಲಿ ನಡೆಯುತ್ತಾರೆ ಆದ್ದರಿಂದ ನಟ ಹಾಗೂ ನಟಿಯರು ಒಳ್ಳೆಯ ರೀತಿಯಲ್ಲಿ ತಮ್ಮ ಜೀವನವನ್ನು ನಡೆಸಬೇಕು