ಎ ಗುಬಾಲ್ ಏನು ಹೀಗೆ ಬಂದಿದ್ದೀಯ, ನಾನು ಗುಂಡಾಕಿ ಅಪ್ಪು ಬಾಸ್ ಗೆ ನೈಟ್ ಕಾಲ್ ಮಾಡಿದ್ದೆ: ಕಡ್ಡಿಪುಡಿ ಚಂದ್ರು

ನಟಸಾರ್ವಭೌಮ ಪುನೀತ್ ರಾಜಕುಮಾರ್ ರವರ ಒಳ್ಳೆತನದ ಬಗ್ಗೆ ಮಾತನಾಡದ ವ್ಯಕ್ತಿಗಳೇ ಇಲ್ಲ ಅಪ್ಪೂರವರ ಮ್ಯಾನೇಜರ್ ಚಂದ್ರು, ಅಪ್ಪೂರವರ ಬಾಡಿ ಗಾರ್ಡ್ ಚಲಪತಿ ಅವರ ಜೊತೆ ನಟಿಸಿದ ನಟ ನಟಿಯರು ಹೀಗೆ ಹತ್ತು ಹಲವಾರು ಜನ ಅಪ್ಪುವಿನ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.

 

 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಕುಲ ಕೋಟಿ ಅಭಿಮಾನಿಗಳನ್ನಗಲಿ ಇಂದಿಗೆ ವರ್ಷವೇ ಕಳೆದಿದೆ. ನಿನ್ನೆಯಷ್ಟೇ ಅಪ್ಪು ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದೆ ಅಪ್ಪುರವರ ಜೊತೆ ನಟಿಸಿದ ನಟ ಹಾಗೂ ನಿರ್ಮಾಪಕ ಕಡ್ಡಿಪುಡಿ ಚಂದ್ರು ಅವರು ಅಪ್ಪು ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದರು.

 

 

ಅಪ್ಪು ಎಂದರೆ ಮಗುವಿನಂತ ಮನಸ್ಸಿರುವ ಮನುಷ್ಯ ಎಂದಿಗೂ ಯಾವುದೇ ವಿಷಯಕ್ಕೂ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ ಎಷ್ಟೋ ಸಾರಿ ನಾನು ಅವರನ್ನು ಕಾಯಿಸಿದ್ದೇನೆ ಆದರೂ ಒಂದು ಬಾರಿಯೂ ಬೇಸರ ಮಾಡಿಕೊಂಡಿಲ್ಲ ಎಂದರು. ಅಪ್ಪುಗೆ ಹಿರಿಯರು ಎಂದರೆ ತುಂಬಾ ಗೌರವ ಯಾರಾದರೂ ಹಿರಿಯರನ್ನು ಕಂಡರೆ ಎದ್ದು ನಿಂತು ನಮಸ್ಕರಿಸುತ್ತಿದ್ದರು. ಹಿರಿಯರು ಕುಳಿತುಕೊಳ್ಳುವವರೆಗೂ ತಾವು ನಿಂತೇ ಇರುತ್ತಿದ್ದರು.

 

 

ನನಗೂ ಕೂಡ ಹಿರಿಯರಿಗೆ ನಮಸ್ಕರಿಸುವಂತೆ ಬುದ್ಧಿವಾದ ಹೇಳುತ್ತಿದ್ದರು ಅವರ ಈ ಒಳ್ಳೆಯತನ ಅವರ ತಂದೆಯ ಕಾಲದಿಂದಲೂ ಬಂದಿದೆ.ನಾನು ಎಷ್ಟೋ ಬಾರಿ ರಾತ್ರಿ ಗುಂಡು ಹಾಕಿ ಅಪ್ಪುಗೆ ಕಾಲ್ ಮಾಡಿದ್ದೇನೆ ಅವರು ಎಂದಿಗೂ ನನಗೆ ಬಯ್ಯದೆ ಸಮಾಧಾನವಾಗಿ ಯಾಕೆ ಚಂದ್ರು, ಗುಂಡು ಹಾಕಿದ್ದೀಯಾ? ಮಲಗು ಬೆಳಗ್ಗೆ ಮಾತಾಡೋಣ ಶೂಟಿಂಗ್ ಇದೆ ಎಂದು ಹೇಳುತ್ತಿದ್ದರು.

 

 

ಅಪ್ಪುವಿಗೆ ಬಿರಿಯಾನಿ ಎಂದರೆ ತುಂಬಾ ಇಷ್ಟ ನಮ್ಮ ಮನೆಯ ಹತ್ತಿರ ಶಿವಾಜಿ ಬಿರಿಯಾನಿ ಸೆಂಟರ್ ಇದೆ. ಅಲ್ಲಿನ ಬಿರಿಯಾನಿ ಎಂದರೆ ಅಪ್ಪುಗೆ ತುಂಬಾ ಇಷ್ಟ ಯಾವಾಗಲೂ ಚಂದ್ರು ಬಿರಿಯಾನಿ ತೆಗೆದುಕೊಂಡು ಬಾ ಎಂದು ಹೇಳುತ್ತಿದ್ದರು. ನಮ್ಮ ಏರಿಯಾ ಕಡೆ ಬಂದಾಗೆಲ್ಲ ಕಾಲ್ ಮಾಡಿ ಚಂದ್ರು ಒಳ್ಳೆಯ ಊಟ, ಕಾಫಿ ಎಲ್ಲಿ ಸಿಗುತ್ತದೆ ಎಂದು ಕೇಳುತ್ತಿದ್ದರು.

 

 

ಒಮ್ಮೆ ಅಪ್ಪು ನನಗೆ ಕಾಲ್ ಮಾಡಿ ನಿಮ್ಮ ಏರಿಯಾದಲ್ಲಿ ಇದ್ದೇನೆ ಎಂದು ಹೇಳಿದರು ನಾನು ಶೇವ್ ಮಾಡಿಕೊಳ್ಳುತ್ತಿದ್ದೆ ನಾನು ಅರ್ಧ ಮುಖಕ್ಕೆ ಮಾತ್ರ ಶೇವ್ ಮಾಡಿಕೊಂಡಿದ್ದೆ ಅಪ್ಪೂರವರು ಬಂದಿದ್ದಾರೆ ಎಂದು ಕೇಳಿದ ತಕ್ಷಣ ಮುಖ ತೊಳೆದುಕೊಂಡು ಓಡಿ ಹೋದೆ. ಅಪ್ಪು ಅವಾಗ “ಎ ಗುಬಾಲ್ ಏನು ಹೀಗೆ ಬಂದಿದ್ದೀಯ…?” ಎಂದು ಬೈಯುತ್ತಿದ್ದರು. ನಾನು ಮತ್ತು ಅಪ್ಪು ಅಷ್ಟೊಂದು ಕ್ಲೋಸ್ ಆಗಿದ್ದೆವು ಅವರು ಸಿನಿಮಾವನ್ನೂ ಬಿಟ್ಟು ಬೇರೆ ಏನನ್ನೂ ಮಾತನಾಡುತ್ತಿರಲಿಲ್ಲ ಫ್ಯಾಮಿಲಿ ಬಗ್ಗೆ ಸಿನಿಮಾ ಮಾಡಬೇಕು ಕರ್ನಾಟಕದವರೆಲ್ಲ ನೋಡಬೇಕು ಎಂದು ಹೇಳುತ್ತಿದ್ದರು ಯಾವಾಗಲೂ ನಗುನಗುತ್ತ ಇರುತ್ತಿದ್ದರು.

 

 

ಅಪ್ಪೂರವರ ಅರಸು, ಅಭಿ ಚಿತ್ರದ ಶೂಟಿಂಗ್ ಸಮಯದಲ್ಲಿ ಶೂಟಿಂಗ್ ಸ್ಪಾಟ್ ಗೆ 20 ರಿಂದ 30 ಜನಕ್ಕೆ ಮನೆಯಿಂದಲೇ ಊಟ ಬರುತ್ತಿತ್ತು.ಇಂದು ಎಲ್ಲಾ ಮನೆಯ ದೇವರ ಫೋಟೋಗಳ ಜೊತೆ ಅಪ್ಪು ಫೋಟೋ ಕೂಡ ಸೇರಿಕೊಂಡಿದೆ ನಾನು ದೇವರ ಜೊತೆ ಇದ್ದೇ ಎನ್ನುವುದೇ ನನ್ನ ಭಾಗ್ಯ ಎಂದರು ಅಪ್ಪುಗೆ ಕನ್ನಡದ ಬಗ್ಗೆ ಅಪಾರ ಅಭಿಮಾನವಿತ್ತು ಕನ್ನಡ ಸಿನಿಮಾಗಳ ಬಗ್ಗೆ ತುಂಬಾ ಮಾತನಾಡುತ್ತಿದ್ದರು ಕೆಜಿಎಫ್ ಸಿನಿಮಾ ಎಲ್ಲಾ ಕಡೆ ಫೇಮಸ್ ಆದಾಗ ಯಶ್ ರನ್ನು ಕೂಡ ತುಂಬಾ ಹೊಗಳುತ್ತಿದ್ದರು.

 

ಇಂದಿಗೂ ನನಗೆ ಅಪ್ಪು ನೆನಪಾದಾಗ ಅವರು ನನಗೆ ಕಳಿಸಿರುವ ವಾಯ್ಸ್ ಮೆಸೇಜ್ ಗಳನ್ನು ಕೇಳುತ್ತಿರುತ್ತೇನೆ ಎಂದು ನಿರ್ದೇಶಕ ಚಂದ್ರು ಮಾತನಾಡಿದರು.

Be the first to comment

Leave a Reply

Your email address will not be published.


*