ಕೆಜಿಎಫ್೨ ಚಿತ್ರದ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಅವರ ರೇಂಜ್ ಬದಲಾಗಿದೆ. ಈಗ ದೇಶದ ಟಾಪ್ ನಿರ್ದೇಶಕರ ಲಿಸ್ಟ್ ನಲ್ಲಿ ಪ್ರಶಾಂತ್ ನೀಲ್ ಅವರ ಹೆಸರು ಆಗ್ರಾ ಸ್ಥಾನದಲ್ಲಿ ಇದೆ. ಇದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವಂತಹ ವಿಚಾರ. ಕೆಜಿಎಫ್೨ ಚಿತ್ರ ಈಗಾಗಲೇ ೧೦೦೦ ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಭಾರತದ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸ ಬರೆದಿದೆ.
ಇನ್ನೂ ಪ್ರಶಾಂತ್ ನೀಲ್ ಅವರು ಈ ತಿಂಗಳ ೨೦ ರಿಂದ ಪ್ರಭಾಸ್ ಅವರ ಜೊತೆ ಸಾಲಾರ್ ಚಿತ್ರದ ಚಿತ್ರೀಕರಣವನ್ನು ಶುರು ಮಾಡಲಿದ್ದು, ಪ್ರಭಾಸ್ ಅವರ ಸಾಲಾರ್ ಚಿತ್ರದ ನಂತರ ಪ್ರಶಾಂತ್ ನೀಲ್ ಅವರು ಜೂನಿಯರ್ ಏನ್ ಟಿ ಆರ್ ಅವರ ಜೊತೆ ಸಿನಿಮಾ ಮಾಡುವುದು ಖಚಿತವಾಗಿದೆ. ಪ್ರಶಾಂತ್ ನೀಲ್ ಹಾಗು ಜೂನಿಯರ್ ಏನ್ ಟಿ ಆರ್ ಅವರು ಬಹಳ ಆಪ್ತರು.ನೆನ್ನೆ ಪ್ರಶಾಂತ್ ನೀಲ್ ದಂಪತಿಗಳ ಮದುವೆಯ ವಾರ್ಷಿಕೋತ್ಸವ. ಇದಕ್ಕೋಸ್ಕರ ಜೂನಿಯರ್ ಏನ್ ಟಿ ಆರ್ ದಂಪತಿಗಳು ಪ್ರಶಾಂತ್ ನೀಲ್ ದಂಪತಿಗಳನ್ನು ಹೈದೆರಾಬಾದ್ ನಲ್ಲಿರುವ ತಮ್ಮ ಮನೆಗೆ ಆಹ್ವಾನ ಮಾಡಿದ್ದಾರೆ. ವಿಶೇಷ ಏನಪ್ಪಾ ಅಂದರೆ ನೆನ್ನೆ ಜೂನಿಯರ್ ಏನ್ ಟಿ ಆರ್ ದಂಪತಿಗಳ ವಿವಾದ ವಾರ್ಷಿಕೋತ್ಸವ ಕೂಡ.
ಆದ ಕಾರಣ ಪ್ರಶಾಂತ್ ನೀಲ್ ಹಾಗು ಜೂನಿಯರ್ ಏನ್ ಟಿ ಆರ್ ಅವರು ತಮ್ಮ ಮದುವೆಯ ಅನಿವರ್ಸರಿಯನ್ನು ಬಹಳ ಸುಂದರವಾಗಿ ಏನ್ ಟಿ ಆರ್ ಅವರ ಮನೆಯಲ್ಲಿ ಆಚರಣೆ ಮಾಡಿದ್ದಾರೆ. ಇನ್ನೂ ಪ್ರಶಾಂತ್ ನೀಲ್ ದಂಪತಿಗಳಿಗೆ ಜೂನಿಯರ್ ಏನ್ ಟಿ ಆರ್ ದಂಪತಿಗಳು ಒಂದು ವಿಶೇಷವಾದ ದುಬಾರಿ ಉಡುಗೊರೆಯನ್ನು ಕೊಟ್ಟಿದ್ದಾರೆ. ಅದೇನು ಗೊತ್ತಾ?
ಜೂನಿಯರ್ ಏನ್ ಟಿ ಆರ್ ದಂಪತಿಗಳು ಪ್ರಶಾಂತ್ ನೀಲ್ ಹಾಗು ಲಿಖಿತ ರೆಡ್ಡಿ ಅವರಿಗೆ ಒಂದು ಹೊಸ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ ೫೦ ಲಕ್ಷ ರೂಪಾಯಿಗಳು ಎಂದು ತಿಳಿದು ಬಂದಿದೆ. ಈ ಮದುವೆಯ ವಾರ್ಷಿಕೋತ್ಸವದ ಆಚರಣೆಯಲ್ಲಿ ಕೇಜಿಫ್೨ ಚಿತ್ರದ ಕೆಯ್ಮರಾ ಮ್ಯಾನ್ ಭುವನ್ ಗೌಡ ಅವರು ಕೂಡ ಪಾಲ್ಗೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಶಾಂತ್ ನೀಲ್ ಅವರ ಪತ್ನಿ ಲಿಖಿತಾ ರೆಡ್ಡಿ ಹಾಗು ಭುವನ್ ಗೌಡ ಈ ಸುಂದರ ಕ್ಷಣಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಜೂನಿಯರ್ ಏನ್ ಟಿ ಆರ್ ಅವರು ಕೂಡ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಲಕ್ಷಾಂತರ ಜನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗಿದ್ದು, ಕರ್ನಾಟಕ ಹಾಗು ಅಂದ್ರ ಪ್ರದೇಶದ ಜನರು ಈ ಫೋಟೋಗಳನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಪ್ರಶಾಂತ್ ನೀಲ್ ಅವರು ಆದಷ್ಟು ಬೇಗ ಜೂನಿಯರ್ ಏನ್ ಟಿ ಆರ್ ಅವರ ಜೊತೆ ಸಿನಿಮಾವನ್ನು ಮಾಡಲಿ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.
\
ಸದ್ಯ ಪ್ರಶಾಂತ್ ನೀಲ್ ಅವರು ಭಾರತದ ದೇಶದ ಟಾಪ್ ನಿರ್ದೇಶಕರು ಎಂದರೆ ತಪ್ಪಾಗಲಾರದು. ಪ್ರಶಾಂತ್ ನೀಲ್ ಅವರು ಕೇಜಿಫ್೨ ಚಿತ್ರಕ್ಕೋಸ್ಕರ ಪಡೆದಿರುವ ಸಂಭಾವನೆ ಬರೋಬ್ಬರಿ ೫ ಕೋಟಿ ರೂಪಾಯಿಗಳು ಎಂದು ತಿಳಿದು ಬಂದಿದೆ. ಕೇಜಿಫ್೨ ಬಿಡುಗಡೆಯಾಗಿ ೨೦ ದಿನಗಳಾಗಿದ್ದರೂ ಇವತ್ತಿಗೂ ಇಡೀ ದೇಶದಲ್ಲಿ ಕೇಜಿಫ್೨ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.