Manasa Manohar: ಜೊತೆ ಜೊತೆಯಲಿ ಧಾರಾವಾಹಿಯ ಮಾನಸ ಮನೋಹರ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು

Manasa Manohar birthday: ಹೌದು, ಚಿಕ್ಕಂದಿನಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ಮಾನಸಾ ಮನೋಹರ್ ಎಂಬಿಎ ಪದವೀಧರರು. ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮಾನಸ್ ಮನೋಹರ್ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟನೆಯ ಮೂಲಕ ಗಮನ ಸೆಳೆದ ಸುಂದರ ವ್ಯಕ್ತಿ.

 

 

‘ಜೊತೆಜೊತೆಯಲ್ಲಿ’ ಧಾರಾವಾಹಿಯಲ್ಲಿ ಕಾರ್ಪೋರೇಟರ್ ಲೋಕದಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಮಾನಸಾ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಆಧುನಿಕ ಯುಗದ ಹುಡುಗಿಯಾಗಿ ಟೆಲಿವಿಷನ್ ಲೋಕದಲ್ಲಿ ಮೋಡಿ ಮಾಡುತ್ತಿರುವ ಮಾನಸ್ ಮನೋಹರ್ ವ್ಯಾಸಂಗದಲ್ಲಿ ತುಂಬಾ ಮುಂದಿದ್ದ ಕಾರಣ ವೈದ್ಯ, ಇಂಜಿನಿಯರ್ ಆಗಬಹುದು ಎಂದು ಹೆತ್ತವರು ಅಂದುಕೊಂಡಿದ್ದರು. ಆದರೆ ಮಾನಸ ಡಾಕ್ಟರ್, ಇಂಜಿನಿಯರ್ ಆಗದೆ ನಟಿಯಾಗಿ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡರು.

 

 

ಆರೂರು ಜಗದೀಶ್ ನಿರ್ದೇಶನದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯಿಂದ ಕಿರುತೆರೆ ಪಯಣ ಆರಂಭಿಸಿದ ಮಾನಸಾ ಅದರಲ್ಲಿ ಅತಿಥಿ ಪಾತ್ರದಲ್ಲಿ ಗಮನ ಸೆಳೆದರು. ಆಕೆ ಎಂಬಿಎ ವಿದ್ಯಾರ್ಥಿನಿಯಾಗಿದ್ದ ಕಾರಣ ಪರೀಕ್ಷೆ ನಡೆಯುತ್ತಿತ್ತು. ಹಾಗಾಗಿ ಪೂರ್ಣಪ್ರಮಾಣದ ಪಾತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಕೇವಲ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

 

 

ಇಲ್ಲಿನ ಜನರು ಸಿನಿಮಾಗಳಿಗಿಂತ ಟಿವಿ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳನ್ನು ಹೆಚ್ಚು ಆನಂದಿಸುತ್ತಾರೆ. ಕನ್ನಡ ಟಿವಿ ವೀಕ್ಷಕರ ಸಂಖ್ಯೆ ದೊಡ್ಡದಿದೆ. ಆದರೆ ಪರಭಾಷೆಯಲ್ಲಿ ಅವರು ಟಿವಿಗಿಂತ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ನನಗೆ ಅನಿಸುತ್ತದೆ. ಅವಕಾಶ ಸಿಕ್ಕರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತೇನೆ, ಆದರೆ ಅಲ್ಲಿ ಕಿರುತೆರೆಗೆ ಹೋಗಲು ಇಷ್ಟವಿಲ್ಲ. ಪರಭಾಷೆ ಒಂದೇ ಸಮಯದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಬಹುದು.

 

 

ಆದರೆ ಕನ್ನಡದಲ್ಲಿ ಮಾತ್ರ ಒಂದೇ ಬಾರಿ ಎರಡು ಪಾತ್ರ ಮಾಡಲು ಸಾಧ್ಯವಿಲ್ಲ. ಇಲ್ಲವಾದಲ್ಲಿ ಒಂದೇ ವ್ಯಕ್ತಿಯ ಎರಡು ಪಾತ್ರಗಳು ಜನಮಾನಸದಲ್ಲಿ ಉಳಿಯುವುದಿಲ್ಲ.ಜನ ಗುರುತಿಸುವ ಪಾತ್ರಗಳಿಗೆ ಜೀವ ತುಂಬಬೇಕೆಂಬುದು ನನ್ನ ಆಸೆ.ಇದರ ಹೊರತಾಗಿ ಕಿರುತೆರೆ, ಹಿರಿತೆರೆ ಮೇಲೆ ಆಗಬೇಕು ಎಂದಲ್ಲ. ಬದಲಿಗೆ ಪಾತ್ರಕ್ಕೆ ಪ್ರಾಮುಖ್ಯತೆ ಇರಬೇಕೆನ್ನುವುದು ಅಷ್ಟೇ ಮುಖ್ಯ ಎನ್ನುತ್ತಾರೆ ಸದ್ಯ ಮೀರಾ ಪಾತ್ರದಲ್ಲಿ ಬ್ಯುಸಿಯಾಗಿರುವ ಮಾನಸಾ ಮನೋಹರ್.

 

 

ಇದೀಗ ನಟಿ ಮಾನಸ ಮನೋಹರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಟಿ ಮಾನಸ ಮನೋಹರ್ ತಮ್ಮ ಆಪ್ತ ಸ್ನೇಹಿತರ ಜೊತೆ ‘ಜೊತೆ ಜೊತೆಯಲಿ’ ತಂಡದೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಮಾನಸಾ ಮನೋಹರ್ ಅವರ ಹುಟ್ಟುಹಬ್ಬವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಿದ ಫೋಟೋಗಳು ಇಲ್ಲಿವೆ.

1 thought on “Manasa Manohar: ಜೊತೆ ಜೊತೆಯಲಿ ಧಾರಾವಾಹಿಯ ಮಾನಸ ಮನೋಹರ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು”

Leave a Comment