ಶ್ರೀನಿಧಿ ಶೆಟ್ಟಿ, ಕೆಜಿಎಫ್ ಚಾಪ್ಟರ್1 ಸಿನಿಮಾ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪರಿಚಯವಾದ ಅಪ್ಪಟ ಕನ್ನಡದ ನಟಿ. ರೀನಾ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿರುವ ಶ್ರೀನಿಧಿ ಶೆಟ್ಟಿ ಅವರು ಇಂದು ಭಾರತದ ಬಹುತೇಕ ಎಲ್ಲಾ ಹುಡುಗರ ಫೆವರೇಟ್ ಆಗಿದ್ದು, ಇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಲ್ಲಿದೆ. ಇಂದು ನಾವು ನಿಮಗೆ ಶ್ರೀನಿಧಿ ಅವರ ನಿಜ ಜೀವನದ ಬಗ್ಗೆ ತಿಳಿಸಿಕೊಡುತ್ತೇವೆ.

 

 

ಶ್ರೀನಿಧಿ ಶೆಟ್ಟಿ ಅವರು ಹುಟ್ಟಿದ್ದು ಮಂಗಳೂರಿನಲ್ಲಿ, 1992ರ ಅಕ್ಟೋಬರ್ 21ರಂದು ಜನಿಸಿದರು ಶ್ರೀನಿಧಿ, ಈಗ ಇವರಿಗೆ 29 ವರ್ಷ ವಯಸ್ಸು. ಶ್ರೀನಿಧಿ ಅವರ ತಂದೆಯ ಹೆಸರು ರಮೇಶ್ ಶೆಟ್ಟಿ, ತಾಯಿ ಹೆಸರು ಕುಶಾಲ. ಇವರಿಗೆ ಇಬ್ಬರು ಸಹೋದರಿಯರಿದ್ದಾರೆ, ಅವರ ಹೆಸರು ಪ್ರಿಯಾಂಕ ಮತ್ತು ಅಮೃತಾ. ಶ್ರೀನಿಧಿ ಅವರ ನಿಕ್ ನೇಮ್ ಶ್ರೀನಿ.

ಇವರು ಓದಿದ್ದು, ಬೆಳೆದದ್ದು ಮಂಗಳೂರಿನಲ್ಲಿ. ಮಂಗಳೂರಿನ, ಶ್ರೀ ನಾರಾಯಣ ಗುರು ಇಂಗ್ಲಿಷ್ ಸ್ಕೂಲ್ ನಲ್ಲಿ ಶಾಲೆ ಶಿಕ್ಷಣ ಮುಗಿಸಿದ ಶ್ರೀನಿಧಿ, ಸೇಂಟ್ ಅಲೋಯ್ಸಸ್ ಪ್ರೀ ಯೂನಿವರ್ಸಿಟಿ ಕಾಲೇಜಿನಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದರು. ನಂತರ ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಇಂಜಿನಿಯರಿಂಗ್ ಮುಗಿಯುವ ಸಮಯಕ್ಕೆ ಮಾಡೆಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು ಶ್ರೀನಿಧಿ.

 

 

ಹಲವು ಕಾಂಪಿಟೇಶನ್ ಗಳಲ್ಲಿ ಭಾಗವಹಿಸಿದ್ದರು. 2012 ರಲ್ಲಿ ಕ್ಲೀನ್ ಅಂಡ್ ಕ್ಲಿಯರ್ ಸಂಸ್ಥೆ ಅಯೋಜಿಸಿದ್ದ ಕಾಂಪಿಟೇಶನ್ ನಲ್ಲಿ ಟಾಪ್ 5 ಫೈನಲಿಸ್ಟ್ ಆಗಿದ್ದರು ಶ್ರೀನಿಧಿ. ನಸಂತರ 2015ರಲ್ಲಿ ಮಣಪುರಂ ಮಿಸ್ ಸೌತ್ ಇಂಡಿಯಾ ನಲ್ಲಿ ಭಾಗವಹಿಸಿದ್ದರು. ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಟೈಟಲ್ ಗೆದ್ದಿದ್ದರು ಶ್ರೀನಿಧಿ. ಆಕ್ಸೆಂಚರ್ ನಲ್ಲಿ ಕೆಲಸ ಮಾಡುತ್ತಾ, ಮಾಡೆಲಿಂಗ್ ಕೆಲಸವನ್ನು ಕೈಗೆತ್ತಿಕೊಂಡಿದ್ದರು ಶ್ರೀನಿಧಿ.

 

 

2016ರಲ್ಲಿ ಮಿಸ್ ದಿವಾ ಪೆಜೇಂಟ್ ನಲ್ಲಿ ಸಹ ಪಾರ್ಟಿಸಿಪೇಟ್ ಮಾಡಿ, ಇದರಲ್ಲಿ ಫೈನಲಿಸ್ಟ್ ಆಗಿದ್ದರು. 2016ರಲ್ಲಿ ಮಿಸ್ ಸುಪ್ರನ್ಯಾಶನಲ್ ಟೈಟಲ್ ಗೆದ್ದಿದ್ದರು. ಇದಾದ ಬಳಿಕ ಶ್ರೀನಿಧಿ ಶೆಟ್ಟಿ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬರಲು ಆರಂಭಿಸಿದವು. ಹಾಗೆ ಕೆಜಿಎಫ್ ಚಾಪ್ಟರ್ 1 ಸಿನಿಮಾಗೆ ಆಯ್ಕೆಯಾದರು ಶ್ರೀನಿಧಿ.

 

 

ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ, ಎಲ್ಲಾ ಭಾಷೆಗಳಲ್ಲೂ ಪರಿಚಯವಾದರು ಶ್ರೀನಿಧಿ. ಕೆಜಿಎಫ್ ಚಾಪ್ಟರ್1 ಸಿನಿಮಾ 250 ಕೋಟಿ ಬ್ಯುಸಿನೆಸ್ ಮಾಡಿತ್ತು. ಈ ಸಕ್ಸಸ್ ಬಳಿಕ ಕೆಜಿಎಫ್ ಚಾಪ್ಟರ್2 ನಲ್ಲಿ ನಟಿಸಿದರು ಶ್ರೀನಿಧಿ. ಈ ಸಿನಿಮಾ ಶ್ರೀನಿಧಿ ಅವರಿಗೆ ಇನ್ನು ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದೆ. ಇದಲ್ಲದೆ, ತಮಿಳಿನ ಸ್ಟಾರ್ ನಟ ವಿಕ್ರಂ ಅವರ ಕೋ-ಬ್ರಾ ಸಿನಿಮಾಗೆ ನಾಯಕಿಯಾಗಿದ್ದಾರೆ ಶ್ರೀನಿಧಿ.

 

 

ಶ್ರೀನಿಧಿ ಅವರು ಕರ್ನಾಟಕದ ಕುವರಿ ಆಗಿದ್ದು, ಇಲ್ಲಿಯೇ ವಾಸ ಮಾಡುತ್ತಿದ್ದಾರೆ. ಈಗ ಶ್ರೀನಿಧಿ ಅವರಿಗೆ ಬೇರೆ ಭಾಷೆಗಳಲ್ಲಿ ಸಹ ಭಾರಿ ಬೇಡಿಕೆ ಇದೆ. ಇವರ ಬಳಿ 38 ಲಕ್ಷ ರೂಪಾಯಿ ಬೆಲೆ ಬಿಎಂಡಬ್ಲ್ಯು ಬಾಳುವ ಕಾರ್ ಇದೆ. ಶ್ರೀನಿಧಿ ಶೆಟ್ಟಿ ಅವರು ಒಂದು ಸಿನಿಮಾಗೆ 3 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಾರೆ, ಇವರ ಒಟ್ಟು ಆಸ್ತಿ 11 ಕೋಟಿ ರೂಪಾಯಿ ಆಗಿದೆ.

 

 

ಸದ್ಯ ನಟಿ ಶ್ರೀನಿಧಿ ಶೆಟ್ಟಿ ಅವರು ಕೇಜಿಫ್ ಚಿತ್ರದಲ್ಲಿ ನಟಿಸಿದ ನಂತರ, ತೆಲುಗು ಹಾಗು ತಮಿಳು ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಸಿಗುತಿದ್ದು, ಈಗಾಗಲೇ ನಟಿ ಶ್ರೀನಿಧಿ ಶೆಟ್ಟಿ ಅವರು ತಮಿಳಿನ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಕನ್ನಡದಲ್ಲಿ ಕೂಡ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಸಾಕಷ್ಟು ಆಫ಼ರ್ ಗಳು ಬರುತ್ತಿದೆ. ಕೇಜಿಫ್ ಚಿತ್ರದ ನಂತರ ನಟಿ ಶ್ರೀನಿಧಿ ಶೆಟ್ಟಿ ಅವರು ಇಡೀ ಭಾರತದಲ್ಲಿ ಫೇಮಸ್ ಆಗಿದ್ದಾರೆ.

Leave a comment

Your email address will not be published. Required fields are marked *