ರಾತ್ರಿ ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ಹಲವಾರು ಕನಸುಗಳು ನಮ್ಮ ನಿದ್ರಾಲೋಕದಲ್ಲಿ ಬಂದು ಹೋಗುತ್ತವೆ. ಕನಸುಗಳನ್ನು ಬೇರೆಯವರ ಬಳಿ ಹಂಚಿಕೊಳ್ಳುವುದರಿಂದ ಅದರ ಫಲಗಳು ಕಡಿಮೆಯಾಗುತ್ತವೆ ಹಾಗೂ ಅದೃಷ್ಟವು ನಿಂತು ಹೋಗುತ್ತದೆ. ಕೆಲವರಿಗೆ ಕೆಟ್ಟ ಕನಸು ಬಿದ್ದರೆ ಇನ್ನು ಕೆಲವರಿಗೆ ಒಳ್ಳೆಯ ಕನಸುಗಳು ಬೀಳುತ್ತವೆ.

 

 

ಕನಸುಗಳ ನಡುವೆ ಒಳ್ಳೆಯದು ಹಾಗೂ ಕೆಟ್ಟದ್ದು ಇರುತ್ತದೆ. ಒಳ್ಳೆಯದರ ಬಗ್ಗೆ ಕನಸು ಬಿದ್ದಿದ್ದರೆ ನಿಮ್ಮ ಜೀವನದ ಮುಂದಿನ ದಿನದಲ್ಲಿ ಯಾವುದೋ ವಿಚಾರದಲ್ಲಿ ಒಳ್ಳೆಯದಾಗುತ್ತದೆ. ನನಗೆ ಇಂತಹ ಕನಸು ಬಿದ್ದಿದೆ ಎಂಬುದನ್ನು ಯಾರ ಬಳಿಯಾದರೂ ಹೇಳಿಕೊಂಡರೆ ಅದರ ಶಕ್ತಿ ಕುಂದಿ ಹೋಗುತ್ತದೆ.

 

 

ಕನಸಿನ ಶಾಸ್ತ್ರದ ಪ್ರಕಾರ ಎಲ್ಲಾ ಕನಸುಗಳ ಬಗ್ಗೆ ಚರ್ಚೆ ಮಾಡಬೇಕು ಎಂದೇನಿಲ್ಲ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕನಸುಗಳ ಬಗ್ಗೆ ಸ್ನೇಹಿತರು ಸಂಬಂಧಿಕರ ಜೊತೆ ಹೇಳಿಕೊಳ್ಳಬಾರದು ಯಾವ ಕನಸು ಬಿದ್ದರೆ ಏನಾಗುತ್ತದೆ ಎನ್ನುವುದನ್ನು ನಾವೇ ನೋಡಿ ತಿಳಿದುಕೊಳ್ಳಬಹುದು.

 

 

ಕನಸಿನಲ್ಲಿ ದೇವರು ಬಂದರೆ ಇದನ್ನು ಮನೆಯ ಎಲ್ಲರಿಗೂ ಹೇಳಬಾರದು ಈ ಕನಸಿನಲ್ಲಿ ಒಂದು ಒಳ್ಳೆಯ ಅರ್ಥ ಇರುತ್ತದೆ. ನಮ್ಮ ಕನಸಿನ ಬಗ್ಗೆ ಎಲ್ಲರಿಗೂ ಹೇಳಿದರೆ ಕನಸಿನ ಲಾಭ ಸಿಗುವುದಿಲ್ಲ ಕನಸಿನಲ್ಲಿ ದೇವರು ಬಂದರೆ ಖಂಡಿತ ಒಳ್ಳೆಯದನ್ನು ಮಾಡಲು ಬಂದಿರುತ್ತಾನೆ. ಅಂತಹ ಕನಸನ್ನು ಯಾರೊಂದಿಗೂ ಹೇಳಿಕೊಳ್ಳಬಾರದು.

ಇನ್ನು ಎರಡನೆಯದಾಗಿ ಕನಸಿನಲ್ಲಿ ತೀರ್ಥಕ್ಷೇತ್ರಗಳು ದೇವರ ಪುಣ್ಯ ಸ್ಥಳಗಳು ಬಂದರೆ ಇದನ್ನು ಕೂಡ ಯಾರ ಬಳಿ ಚರ್ಚಿಸಬಾರದು ಕನಸಲ್ಲಿ ಬಂದಿರುವ ಸ್ಥಳ ನಮಗೆ ಮೊದಲೇ ಗೊತ್ತಿದ್ದರೆ ಅಥವಾ ಅಲ್ಲಿಗೆ ನಾವು ಹೋಗಿದ್ದರೆ ಅಲ್ಲಿಗೆ ಮತ್ತೊಮ್ಮೆ ಭೇಟಿ ನೀಡಬೇಕು ಕನಸಿನಲ್ಲಿ ಆ ಸ್ಥಳ ಬಂದಿದ್ದರಿಂದ ನಾನು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಯಾರ ಬಳಿಗೂ ಹೇಳಿಕೊಳ್ಳಬಾರದು.

 

 

ನಿಮ್ಮ ಕನಸಿನಲ್ಲಿ ಹರಿಯುವ ನೀರು ಜಲಪಾತಗಳೇನಾದರೂ ಕಣ್ಣಲ್ಲಿ ನಿಮಗೆ ಒಳ್ಳೆಯದಾಗುತ್ತದೆ. ನೀರು ಕನಸಿನಲ್ಲಿ ಬರುವುದರಿಂದ ಧನಾತ್ಮಕ ಶಕ್ತಿ ಹಾಗೂ ಧನಲಕ್ಷ್ಮಿಯ ಆಗಮನವಾಗುತ್ತದೆ. ಅಷ್ಟೇ ಅಲ್ಲದೆ ಹಣದ ವಿಚಾರದಲ್ಲಿ ಒಳ್ಳೆಯದಾಗುತ್ತದೆ ಎಂಬ ಸೂಚನೆ ಇದಾಗಿದೆ.

 

 

ನಾಲ್ಕನೆಯದಾಗಿ ನಿಮ್ಮ ಕನಸಿನಲ್ಲಿ ನಿಮ್ಮ ತಂದೆ ತಾಯಿಗೆ ನೀರು ಕುಡಿಸುವಂತಹ ಕನಸು ಬಿದ್ದರೆ ಇದರ ಬಗ್ಗೆ ಕೂಡ ಯಾರಿಗೂ ಹೇಳಿಕೊಳ್ಳಬಾರದು ಯಾರಿಗಾದರೂ ಹೇಳಿಕೊಂಡ ನಿಮಗೆ ಬರಬೇಕಾದ ಲಾಭಗಳು ಕಡಿಮೆಯಾಗುತ್ತಾ ಹೋಗುತ್ತವೆ ಹರಿಯುವ ನೀರು ಕಂಡರು ನಿಮಗೆ ಒಳಿತಾಗುತ್ತದೆ ಇದು ಒಳ್ಳೆಯದರ ಸೂಚನೆಯಾಗಿದ್ದು ಇದನ್ನು ಯಾರ ಬಳಿಯೂ ಚರ್ಚಿಸಬಾರದು ಸ್ವಪ್ನ ಶಾಸ್ತ್ರದಲ್ಲಿ ಒಂದು ಕನಸುಗಳಿಗೂ ಒಂದೊಂದು ಅರ್ಥವಿದೆ.

Leave a comment

Your email address will not be published. Required fields are marked *