ಆಚಾರ್ಯ ಚಾಣಕ್ಯರು ರಾಜನೀತಿಯಿಂದ ಆಡಳಿತ ನಡೆಸಲು ಏನೇನು ಬೇಕು? ಸಾಮಾಜಿಕ ಜೀವನದಲ್ಲಿ ಯಾವ ಯಾವ ಎಚ್ಚರಿಕೆಗಳನ್ನು ತೆಗೆದುಕೊಂಡು ಮುನ್ನಡೆದರೆ ಒಳ್ಳೆಯದು ಎಂದು ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾನೆ. ಮದುವೆ ಪತಿ ಪತ್ನಿ ಮಕ್ಕಳು ರಾಜ ಆಡಳಿತ ಜೀವನದ ವಿವರಗಳ ಬಗ್ಗೆ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಬರೆದಿದ್ದಾನೆ.
ಭವಿಷ್ಯದಲ್ಲಿ ಮುಖ್ಯವಾದ ಸಮಯಗಳು ಎಂದರೆ ಮದುವೆಯ ಸಮಯ ಪತಿ-ಪತ್ನಿಯರ ನಡುವಿನ ಸಂಬಂಧ ಆಗ ತೆಗೆದುಕೊಳ್ಳುವ ನಿರ್ಧಾರಗಳು ತುಂಬಾ ಮುಖ್ಯವಾಗಿರುತ್ತವೆ. ಹುಡುಗರಂತೆ ಹುಡುಗಿಯರಿಗೂ ಕೂಡ ಹಲವಾರು ಗುಣಲಕ್ಷಣಗಳು ಆಸೆಗಳು ಇದ್ದೇ ಇರುತ್ತವೆ. ತಮ್ಮ ವೈವಾಹಿಕ ಜೀವನವನ್ನು ಉತ್ತಮವಾಗಿ ಇರಿಸಲು ಚಾಣಕ್ಯ ಆತನ ನೀತಿ ಶಾಸ್ತ್ರದಲ್ಲಿ ಹಲವಾರು ವಿಚಾರಗಳನ್ನು ಹೇಳಿಕೊಟ್ಟಿದ್ದಾನೆ.
ಯಾವುದಾದರೂ ಯುವತಿಯನ್ನು ಇಷ್ಟಪಟ್ಟರೆ ಅವಳನ್ನು ಮದುವೆಯಾಗಲು ಹಿಂಜರಿಯಬಾರದು ಅವಳೆಲ್ಲಿರುವ ಗುಣಗಳನ್ನು ಮದುವೆಯಾಗಬೇಕು ಉತ್ತಮ ನಿರ್ಧಾರವನ್ನು ತೆಗೆದುಕೊಂಡು ಜೀವನದಲ್ಲಿ ತೃಪ್ತಿ ಹೊಂದಬೇಕು ಜೀವನದಲ್ಲಿ ಯಾವಾಗಲೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು ಜೀವನ ಸಂಗಾತಿಯನ್ನು ಆಯ್ಕೆ ಮಾಡಬೇಕಾದರೆ ಅವಳ ಗುಣವನ್ನು ನೋಡಬೇಕು.
ದುರಾಸೆ ತುಂಬಿದ ಹೆಚ್ಚು ಕೋಪಗೊಳ್ಳುವ ಅತಿಯಾಸೆ ಇರುವ ಮಹಿಳೆಯನ್ನು ವಿವಾಹವಾಗಬಾರದು ವೈವಾಹಿಕ ಜೀವನ ನಡೆಸಲು ತಾಳ್ಮೆ ಅಗತ್ಯ ಕೋಪವನ್ನು ನಿಯಂತ್ರಿಸಬೇಕು ಕೋಪವೆಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ದೊಡ್ಡ ಕಪ್ಪು ಚುಕ್ಕೆ ಇದ್ದ ಹಾಗೆ ಈ ಕೋಪ ಯಾವುದೇ ಸಮಯದಲ್ಲಿ ಪತಿ-ಪತ್ನಿಯರ ಸಂಬಂಧವನ್ನು ಹಾಳು ಮಾಡುತ್ತದೆ ಹಾಗಾಗಿ ಉತ್ತಮ ಸಂಗಾತಿಯನ್ನು ಆರಿಸಿಕೊಳ್ಳಬೇಕು ಕಷ್ಟವಾಗಲಿ ಸುಖವಾಗಲಿ ದುಃಖವಾಗಲಿ ಎಲ್ಲಾ ಸಂದರ್ಭದಲ್ಲಿ ಹೊಂದಿಕೊಂಡು ಹೋಗಬೇಕು ಈ ರೀತಿ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಬರೆದಿದ್ದಾನೆ.