ನಟಿ ವಿನಯ್ ಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಹಲವಾರು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಚಿತ್ರರಂಗದ ಕುರಿತು ಕಲೆಯಲ್ಲಿ ಅವರಿಗಿರುವ ಆಸಕ್ತಿ ಉತ್ಸಾಹ ಇದೆಲ್ಲದರ ಬಗ್ಗೆ ಒಂದು ಸಂದರ್ಶನದಲ್ಲಿ ವಿನಯ್ ಪ್ರಸಾದ್ ಮಾತನಾಡಿದ್ದಾರೆ. ತನ್ನ ಜೀವನದ ಘಟನೆಗಳನ್ನು ಹಾಗೂ ಜನರಿಗೆ ಹಲವು ಸಂದೇಶಗಳನ್ನು ನಟಿ ವಿನಯ್ ಪ್ರಸಾದ್ ತಮ್ಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ತಮ್ಮನ್ನು ದಿನನಿತ್ಯ ಜನರು ಎಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಯುವ ಜನತೆಗೆ ಯಾವ ರೀತಿ ಸಂದೇಶಗಳನ್ನು ನೀಡಬೇಕು ಎಂಬುದನ್ನು ಎಲ್ಲಾ ಸವಿಸ್ತಾರವಾಗಿ ನಟಿ ವಿನಯ್ ಪ್ರಸಾದ್ ತಮ್ಮ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನಟಿ ವಿನಯ್ ಪ್ರಸಾದ್ ರವರನ್ನು ಉದ್ದೇಶಿಸಿ ನಿರೂಪಕರು ನೀವು ಯಾವಾಗಲೂ ಅಭಿನಯಿಸುತ್ತಿರುತ್ತೀರಿ ನಿಮಗೆ ವರ್ಷಪೂರ್ತಿ ದಿನಪೂರ್ತಿ ಅಭಿನಯಿಸಲು ಬೇಜಾರಾಗುವುದಿಲ್ಲವೇ? ಎಂದು ಕೇಳಿದ್ದಾರೆ. ಇದಕ್ಕೆ ನಟಿ ವಿನಯ್ ಪ್ರಸಾದ್ ಉತ್ತರಿಸಿ ನನ್ನ ನಟನೆಯನ್ನು ನೋಡುವಾಗ ನೀವು ಒಂದೇ ದೃಷ್ಟಿಕೋನದಿಂದ ನೋಡುತ್ತೀರಿ
ನಾವು ಒಂದು ಯಾವುದಾದರೂ ಸೀನ್ ನಲ್ಲಿ ನಟಿಸಬೇಕು ಎಂದರೆ ನಟರಾದೃಷ್ಟಿ ಕೋನ ಮ್ಯಾಂಡರಿಸಂ ಎಡಿಟಿಂಗ್ ಮಾಡುವವರ ದೃಷ್ಟಿಕೋನ ಕ್ಯಾಮರಾ ಮೆನ್ ಡೈರೆಕ್ಟರ್ ನಾವು ಅಭಿನಯಿಸುತ್ತಿರುವ ಪಾತ್ರ ಹಿನ್ನೆಲೆ ಗಾಯಕ ಇದಕ್ಕೆಲ್ಲಾ ಸಂಬಂಧಪಟ್ಟ ಹಾಗೆ ಯೋಚಿಸಿ ಅದನ್ನೆಲ್ಲ ತಲೆಯಲ್ಲಿಟ್ಟುಕೊಂಡು ಅಭಿನಯಿಸಬೇಕು.
ನಟನೆಯು ಒಂದು ದೃಷ್ಟಿಕೋನದಿಂದ ಕೂಡಿರುವುದಿಲ್ಲ ಹಲವಾರು ದೃಷ್ಟಿಕೋನಗಳಿಂದ ಕೂಡಿರುತ್ತದೆ. ನಟನೆಯೂ ಪಾತ್ರದಿಂದ ಪಾತ್ರಕ್ಕೆ ಸನ್ನಿವೇಶದಿಂದ ಸನ್ನಿವೇಶಕ್ಕೆ ಚಿತ್ರದಿಂದ ಚಿತ್ರಕ್ಕೆ ಹೀಗೆ ಬದಲಾಗುತ್ತಾ ಹೋಗುತ್ತದೆ ನನಗೆ ನನ್ನ ಪ್ರೊಫೆಶನ್ ಎಂದಿಗೂ ಕೂಡ ಬೋರ್ ಎನಿಸಿಲ್ಲ ಎಂದು ನಟಿ ವಿನಯ್ ಪ್ರಸಾದ್ ಹೇಳಿದ್ದಾರೆ.
ದಿನಪೂರ್ತಿ ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ನೀವು ಶೂಟಿಂಗ್ನಿಂದ ರಿರಾಕ್ಸೇಷನ್ ಪಡೆಯಲು ಯಾವ ನಶೆಯನ್ನು ತೆಗೆದುಕೊಳ್ಳುತ್ತೀರಾ ಎಂದು ನಿರೂಪಕರು ಕೇಳಿದಾಗ ನಟಿ ವಿನಯ್ ಪ್ರಸಾದ್ ಈ ಪ್ರಶ್ನೆಗೆ ಉತ್ತರಿಸಿ ಕಲೆ ಎನ್ನುವುದು ಅತಿ ದೊಡ್ಡ ನಶೆಯಾಗಿದೆ ಕಲೆಯಿಂದ ನಾವು ಹೆಚ್ಚು ನಶೆಯನ್ನು ಪಡೆದುಕೊಳ್ಳುತ್ತೇವೆ ಕಲೆ ಎಂದರೆ ಅಭಿನಯ ಸಂಗೀತ ಸಾಹಿತ್ಯ ಇನ್ನು ಮುಂತಾದ ಕಲೆಗಳು ಅತಿ ದೊಡ್ಡ ನಷೆಗಳ ಆಗಿವೆ.
ಕಲೆಯನ್ನು ಮನದಲ್ಲಿ ತುಂಬಿಕೊಂಡಾಗ ಅದು ದೊಡ್ಡ ನಷೆ ಆಗಿ ಪರಿವರ್ತನೆಯಾಗುತ್ತದೆ. ನನಗೆ ಯಾವುದಾದರೂ ಪಾತ್ರ ಸಿಕ್ಕಿದೆ ಎಂದರೆ ಅದರ ಒಳ ಹೃದಯ ಹಾಗೂ ಹೊರನೋಟವನ್ನೆಲ್ಲ ನಾನು ಆಹ್ಲಾದಿಸಿ ಯೋಚನೆ ಮಾಡಿ ನಟಿಸುತ್ತೇನೆ ಆ ಪಾತ್ರದ ಶೂಟಿಂಗ್ ಮುಗಿಯುವವರೆಗೂ ಅದೇ ಪಾತ್ರದಲ್ಲಿ ತಲ್ಲಿ ನಳಾಗಿ ಆ ಪಾತ್ರದ ಒಳಗೆ ಮುಳುಗಿ ಹೋಗಿರುತ್ತೇನೆ.
ನಾನು ನಟನೆಯನ್ನು ಶುರು ಮಾಡುವ ಮೊದಲ ದಿನದಿಂದ ಇಲ್ಲಿಯವರೆಗೂ ಕೂಡ ನಾನು ದಿನದಿಂದ ದಿನಕ್ಕೆ ಹೇಗೆ ಉತ್ತಮ ನಟನೆಯನ್ನು ಮಾಡಬಹುದು ಎಂದು ಯೋಚಿಸುತ್ತೇನೆ ನನಗೆ ನನ್ನ ನಟನೆಯನ್ನು ಬಿಟ್ಟು ಬೇರೆ ಯಾವುದೇ ನಶೆ ಇಷ್ಟವಾಗುವುದಿಲ್ಲ ನಟನೆಯು ನನಗೆ ಒಂದು ನಶೆ ಇದ್ದಂತೆ ನಾನು ಶೂಟಿಂಗ್ ಮುಗಿಸಿಕೊಂಡು ಮನೆಗೆ ಹೋದಾಗಲೂ ಕೂಡ ನನ್ನ ಎಲ್ಲಾ ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತೇನೆ ಅಷ್ಟು ಉತ್ಸಾಹ ನಶೆನಲ್ಲಲ್ಲಿ ಇರುತ್ತದೆ ಎಂದು ವಿನಯ ಪ್ರಸಾದ್ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.