ಕಳೆದ ಭಾನುವಾರ ಬಿಗ್ ಬಾಸ್ ಮುಗಿದಿದೆ. ಬಿಗ್ ಬಾಸ್ ಸೀಸನ್ 9 ಮುಗಿಯುತ್ತಿದ್ದಂತೆ ವಿನ್ನರ್ ರೂಪೇಶ ಶೆಟ್ಟಿ ಹಾಗೂ ರನ್ನರ್ ರಾಕೇಶ್ ಅಡಿಗ ಎಲ್ಲಾ ಕಡೆ ಸಂದರ್ಶನಗಳನ್ನು ನೀಡಲು ಮುಂದಾಗಿದ್ದು ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಬಿಗ್ ಬಾಸ್ ಸೀಸನ್ ೯ರಲ್ಲಿ ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ, ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಖ್ಯಾತ ಜೋಡಿಗಳಾಗಿ ಮಿಂಚುತ್ತಿದ್ದರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದೆ ತಡ ಈ ಜೋಡಿಗಳನ್ನು ಯಾವಾಗ ಮದುವೆ ಆಗುತ್ತೀರಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮ ಎಂದರೆ ಸಾಕು ಹಲವಾರು ಜೋಡಿಗಳು ಪ್ರೀತಿಸಿ ಮದುವೆಯಾಗಿರುವ ಉದಾಹರಣೆಗಳಿವೆ ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಕಾಲ ಕಳೆದು ಮನೆಯಿಂದ ಹೊರ ಬರುತ್ತಿದ್ದಂತೆ ಯಾವಾಗ ಮದುವೆಯಾಗುತ್ತಾರೆ ಎನ್ನುವ ಪ್ರಶ್ನೆಯನ್ನೂ ಅವರ ಅಭಿಮಾನಿಗಳೆಲ್ಲ ಕೇಳುತ್ತಾರೆ. ಅದೇ ರೀತಿ ಅಮೂಲ್ಯ ಗೌಡ ರವರನ್ನು ಹಾಗೂ ರಾಕೇಶ್ ಅಡಿಗರವರನ್ನು ಅಭಿಮಾನಿಗಳು ನೀವಿಬ್ಬರು ಯಾವಾಗ ಮದುವೆಯಾಗುತ್ತೀರಿ ಎಂದು ಸಂದರ್ಶನಗಳಲ್ಲಿ ಕೇಳುತ್ತಿದ್ದಾರೆ.
ಅಭಿಮಾನಿಗಳಿಂದ ರಾಕೇಶ ಹಾಗೂ ಅಮೂಲ್ಯ ರವರ ಫ್ರೆಂಡ್ಶಿಪ್ ಅನ್ನು ತುಂಬಾ ಇಷ್ಟಪಟ್ಟಿದ್ದಾರೆ. ಅಮೂಲ್ಯ ಗೌಡ ಲೈವ್ ಬಂದು ಬಿಗ್ ಬಾಸ್ ಮನೆಯ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ರಾಕೇಶ್ ಅಡಿಗಾರವರ ಬಗ್ಗೆ ಕೂಡ ಮಾತನಾಡಿದ್ದಾರೆ. ನಮ್ಮಿಬ್ಬರ ಫ್ರೆಂಡ್ಶಿಪ್ ಬಗ್ಗೆ ತುಂಬಾ ಹೊಗಳಿಕೆ ನೀಡಿದ್ದೀರಿ ನಮ್ಮಿಬ್ಬರ ಫ್ರೆಂಡ್ಶಿಪ್ ನಿಮಗೆ ಇಷ್ಟವಾಗಿದೆ ಎಂದು ಕೇಳಿ ನನಗೂ ಕೂಡ ಖುಷಿಯಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಇರುವ ವೇಳೆ ನಮ್ಮಿಬ್ಬರ ಫ್ರೆಂಡ್ಶಿಪ್ ಈ ರೀತಿ ನಿಮಗೆಲ್ಲ ಇಷ್ಟವಾಗುತ್ತದೆ ಎಂದು ನಾವು ಯೋಚಿಸಿರಲಿಲ್ಲ ಈಗ ನೀವೆಲ್ಲ ಹೇಳುವುದನ್ನು ಕೇಳಿ ನಮಗೆ ಕೂಡ ಖುಷಿಯಾಗುತ್ತದೆ. ಬಿಗ್ ಬಾಸ್ ಮನೆಯ ಸದಸ್ಯರನ್ನೆಲ್ಲ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅನುಪಮಾ ಗೌಡ, ದಿವ್ಯ ಉರುಡುಗ, ರಾಕೇಶ್ ಅಡಿಗ ಇವರನ್ನೆಲ್ಲ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಏಕೆಂದರೆ ಕಳೆದ ಮೂರು ತಿಂಗಳುಗಳಿಂದ ನಾವೆಲ್ಲಾ ಒಟ್ಟಿಗೆ ಇದ್ದೆವು ಇದೀಗ ನಾವೆಲ್ಲರೂ ಜೊತೆಗಿಲ್ಲ ಎಂದು ತಮ್ಮ ಬಿಗ್ ಬಾಸ್ ಮನೆಯಲ್ಲಿ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.