ನಟಿ ಪವಿತ್ರ ಲೋಕೇಶ್ ಹಾಗು ತೆಲುಗು ನಟ ನರೇಶ್ ಇಬ್ಬರು ಸುದ್ದಿ ಎಲ್ಲೆಡೆ ಹಬ್ಬಿತ್ತು. ನರೇಶ್ ಹಾಗೂ ಪವಿತ್ರ ಲೋಕೇಶ್ ಮೈಸೂರಿನಲ್ಲಿ ಒಂದು ಹೋಟೆಲ್ನ ಒಂದೇ ಕೊಠಡಿಯಲ್ಲಿ ತಂಗಿದ್ದು ಇಬ್ಬರು ಕೂಡ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಎಂಬ ವಿಷಯ ಕೂಡ ಎಲ್ಲ ಕಡೆ ಸದ್ದು ಮಾಡುತ್ತಿತ್ತು. ಈ ಕುರಿತು ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಕೂಡ ಹೇಳಿಕೊಂಡಿದ್ದರು.

 

 

ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪವಿತ್ರ ಲೋಕೇಶ್ ಮತ್ತು ನರೇಶ್ ನಂತರ ಎಲ್ಲೂ ಕೂಡ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ ಆದರೆ, ಇದೀಗ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ನರೇಶ್ ಪವಿತ್ರ ಲೋಕೇಶ್ ಹೆಗಲ ಮೇಲೆ ಕೈ ಹಾಕಿ ಮಾತನಾಡಿದ್ದಾರೆ.

 

 

ತೆಲುಗಿನ ಕೆಲವು ಸಿನಿಮಾಗಳಲ್ಲಿ ಪವಿತ್ರ ಲೋಕೇಶ್ ಹಾಗು ನರೇಶ್ ಒಟ್ಟಿಗೆ ನಟಿಸಿದ್ದರು. “ರಾಮರಾವ್ ಆನ್ ಡ್ಯೂಟಿ” ಚಿತ್ರದಲ್ಲಿ ನಟಿ ಪವಿತ್ರ ಲೋಕೇಶ್ ಹಾಗೂ ನರೇಶ್ ಅಣ್ಣ ತಂಗಿ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರದಲ್ಲಿ ಸಿನಿಮಾವನ್ನು ನೋಡಿದವರೆಲ್ಲ ಇವರಿಬ್ಬರನ್ನು ಟ್ರೋಲ್ ಮಾಡಿದ್ದರು. ಇವರಿಬ್ಬರೂ ಟ್ರೊಲ್ ಆದ ನಂತರ ಇವರಿಗೆ ಹೆಚ್ಚು ಡಿಮ್ಯಾಂಡ್ ಶುರುವಾಯಿತು.

 

 

ಹಾಸ್ಯ ನಟ ಆಲಿ ನಿರ್ಮಿಸಿರುವ ಸಿನಿಮಾ “ಅಂದರೋ ಬಾಗುಂಡಾಲಿ ಅಂದುಲೋ ನೇನುಂಡಾಲಿ” ಚಿತ್ರದಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಒಟ್ಟಿಗೆ ಗಂಡ ಹೆಂಡತಿ ಪಾತ್ರದಲ್ಲಿ ನಟಿಸಿದ್ದು ಈ ಚಿತ್ರ ಥಿಯೇಟರ್ ಗಳಲ್ಲಿ ರಿಲೀಸ್ ಆಗದೆ ನೇರವಾಗಿ ಆಹಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಿದೆ. “ಅಂದರೋ ಬಾಗುಂಡಾಲಿ ಅಂದುಲೋ ನೇನುಂಡಾಲಿ” ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಬಂದಿದ್ದು ರಾತ್ರಿಯೇ ಪವಿತ್ರ ಲೋಕೇಶ್ ಹಾಗು ನರೇಶ್ ಗೆ ಹಲವಾರು ಮೆಸೇಜ್ ಗಳು ಹಾಗೂ ಕಾಲ್ ಗಳು ಬಂದಿದ್ದವಂತೆ. ಈ ಚಿತ್ರದ ಕುರಿತು ಲೈವ್ ಬಂದ ಪವಿತ್ರ ಲೋಕೇಶ್ ಹಾಗೂ ನರೇಶ್ ಈ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ ಅದಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

 

 

ಸಧ್ಯ ಇವರಿಬ್ಬರ ವಿಡಿಯೋ ನೋಡಿದವರು ಇವರಿಬ್ಬರೂ ರಿಲೇಶನ್ ಶಿಪ್ ನಲ್ಲಿ ಇರುವುದು ನಿಜಾ ಎನ್ನುತ್ತಿದ್ದಾರೆ. ಪವಿತ್ರ ಲೋಕೇಶ್ ಹಾಗು ನರೇಶ್ ವೀಡಿಯೊದಲ್ಲಿ ಮಾತನಾಡುತ್ತಿರುವಾಗ ಆಗಾಗ ನರೇಶ್ ಬೇಕಂತಲೇ ಪವಿತ್ರ ಲೋಕೇಶ್ ಹೆಗಲ ಮೇಲೆ ಕೈ ಹಾಕಿದ್ದಾರೆ. ಇಬ್ಬರೂ ಹೆಚ್ಚು ಕ್ಲೋಸ್ ಎನ್ನುವ ಹಾಗೆ ವಿಡಿಯೋದಲ್ಲಿ ವರ್ತಿಸಿದ್ದಾರೆ. ವಿಡಿಯೋ ನೋಡಿದವರೆಲ್ಲ ಇವರನ್ನು ಇನ್ನು ಹೆಚ್ಚು ಟ್ರೋಲ್ ಮಾಡುತ್ತಿದ್ದಾರೆ. ನರೇಶ್ ಬೇಕಂತಲೇ ವಿಡಿಯೋದಲ್ಲಿ ಪವಿತ್ರ ಲೋಕೇಶ್ ಹೆಗಲ ಮೇಲೆ ರೋಮ್ಯಾಂಟಿಕ್ ಆಗಿ ಕೈ ಹಾಕುತ್ತಿದ್ದಾರೆ. ಇದು ನರೇಶ್ ರವರ ಮೂರನೇ ಹೆಂಡತಿ ರಮ್ಯಾ ರಘುಪತಿ ಯನ್ನು ಬೇಕು ಎಂದು ಕೆಣಕಲೆ ಮಾಡಿರುವುದು ಎಂದು ಕೂಡ ಟ್ರೋಲ್ ಹೈದರು ಹೇಳುತ್ತಿದ್ದಾರೆ.

 

 

ಪವಿತ್ರ ಲೋಕೇಶ್ ಹಾಗು ನರೇಶ್ ಇವರಿಬ್ಬರ ರಿಲೇಷನ್ ಶಿಪ್ ಬಗ್ಗೆ ವದಂತಿಗಳು ಹಬ್ಬಿದಾಗಿನಿಂದ ಇವರಿಬ್ಬರು ಎಲ್ಲಾ ಕಡೆಗಳಲ್ಲೂ ಫೇಮಸ್ ಆಗುತ್ತಿದ್ದಾರೆ. ಇದರಿಂದ ಇವರಿಗೆ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಕೂಡ ಸಿಗುತ್ತಿವೆ. ಇವರಿಬ್ಬರಿಬ್ಬರೂ ಕೂಡ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

 

ಪವಿತ್ರ ಲೋಕೇಶ್ ರವರು ತಮಗೆ ಹೆಚ್ಚು ಹೆಚ್ಚು ಅವಕಾಶಗಳು ಬರುತ್ತಿರುವುದರಿಂದ ತಾವು ಇನ್ನು ಹೆಚ್ಚು ಸುಂದರವಾಗಿ ಕಾಣಬೇಕು ಎಂದು ಡಯಟ್, ಜಿಮ್, ವರ್ಕೌಟ್ ಹಲವಾರು ಫೇರ್ನೆಸ್ ಕ್ರೀಮ್ ಗಳನ್ನು ಕೂಡ ಬಳಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Leave a comment

Your email address will not be published. Required fields are marked *