ವಿ.ರವಿಚಂದ್ರನ್ ರವರು ದರ್ಶನ್ ರವರ ಅಭಿನಯದ ಅಯ್ಯಾ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮಾಡಿದ್ದರು ಇದಾದ ನಂತರ ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನ ಪಾತ್ರವನ್ನು ಕೂಡ ದರ್ಶನ್ ರವರ ಜೊತೆಗೆ ಮಾಡಿದ್ದರು ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್ ರವರು ಡಿ ಬಾಸ್ ದರ್ಶನ್ ರವರ ಕ್ರಾಂತಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ರವರು ದರ್ಶನ್ ರವರ ಜೊತೆ ಹೆಚ್ಚು ಕಾಲ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
ಹಾಗಾಗಿ ಡಿ ಬಾಸ್ ದರ್ಶನ್ ರವರು ಕ್ರಾಂತಿ ಸಿನಿಮಾದ ಸಂದರ್ಶನದ ವೇಳೆ ರವಿಚಂದ್ರನ್ ರವರ ಬಗ್ಗೆ ಮಾತನಾಡಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಗ್ಗೆ ನಾನೇನು ಹೇಳುವುದಕ್ಕೆ ಸಾಧ್ಯವಿಲ್ಲ ಯಾಕೆಂದರೆ ಅವರು ಲೆಜೆಂಡ್ ಅವರು ಸಿನಿಮಾ ರಂಗದಲ್ಲಿ ಮಾಡಿರುವಷ್ಟು ಕೆಲಸವನ್ನು ನಾನು ಇನ್ನೂ ಮಾಡಿಲ್ಲ ನಾನು ಅವರ ಕಾಲು ದೂಳಿಗೆ ಸಮ ಅಲ್ಲ ರವಿಚಂದ್ರನ್ ಪಕ್ಕದಲ್ಲಿ ನಾನು ನಿಂತುಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಅವರು ನಮ್ಮ ಸಿನಿಮಾದಲ್ಲಿ ನಟಿಸುತ್ತಿದ್ದಾರಲ್ಲ ಎಂದು ಕೂಡ ನನಗೆ ಹೆಮ್ಮೆ ಇದೆ ಎಂದರು.
ಕ್ರಾಂತಿ ಸಿನಿಮಾದಲ್ಲಿ ಇವರು ದೊಡ್ಡವರು ಅವರು ದೊಡ್ಡವರು ಎಂಬುದೇನು ಇಲ್ಲ ನಾನೇ ಹೀರೋ ಎಂಬ ಬಿಮ್ಮು ಕೂಡ ಇಲ್ಲ ರವಿಚಂದ್ರನ್ ರವರು ಕ್ರಾಂತಿ ಸಿನಿಮಾದಲ್ಲಿ ತಂದೆಯ ಪಾತ್ರವನ್ನು ಮಾಡಿದ್ದಾರೆ ಆ ತಂದೆ ಹಾಗೂ ಮಗನ ಚಿತ್ರಣವನ್ನು ನೋಡುವುದಕ್ಕೆ ಖುಷಿಯಾಗುತ್ತದೆ.
ಸಂದರ್ಶನದಲ್ಲಿ ಡಿ ಬಾಸ್ ದರ್ಶನ್ ರವರು ಮಿಮಿಕ್ರಿ ಮಾಡುವುದರ ಬಗ್ಗೆ ಮಾತನಾಡಿದಾಗ ದರ್ಶನ್ ಅದರ ಬಗ್ಗೆ ಮಾತನಾಡಿ ನನಗೆ 360 ಡಿಗ್ರಿ ಕಣ್ಣು ಇದೆ ಹಾಗಾಗಿ ನಾನು ಎಲ್ಲವನ್ನು ಎಲ್ಲದರ ಮೇಲೆ ನಿಗಾ ವಹಿಸಿರುತ್ತೇನೆ. ಹಾಗಾಗಿ ನನಗೆ ಮಿಮಿಕ್ರಿ ಮಾಡಲು ತುಂಬಾ ಸುಲಭವಾಗುತ್ತದೆ ಎಂದಿದ್ದಾರೆ.
ಡಿ ಬಾಸ್ ದರ್ಶನ್ ರವರನ್ನು ಕನ್ನಡ ಮೀಡಿಯಾಗಳ ಬ್ಯಾನ್ ಮಾಡಿದ್ದು ಡಿ ಬಾಸ್ ಇದೀಗ youtube ಇನ್ಸ್ಟಾಗ್ರಾಮ್ ಫೇಸ್ಬುಕ್ ಮುಂತಾದ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ತಮ್ಮ ಸಿನಿಮಾವನ್ನು ಪ್ರಮೋಷನ್ ಮಾಡುತ್ತಿದ್ದಾರೆ. ಇದರ ಜೊತೆಗೆ ಅಭಿಮಾನಿಗಳು ಕೂಡ ಸಾತ್ ನೀಡಿದ್ದು ಇವರ ಕ್ರಾಂತಿ ಸಿನಿಮಾದ ಪ್ರಮೋಷನ್ ಜೋರಾಗಿಯೇ ನಡೆಯುತ್ತಿದೆ.