ನಟ ದಿಗಂತ್ (Diganth)ಹಾಗೂ ಅನಂತನಾಗ್ (Anant nag)ರವರ ಕಾಂಬಿನೇಷನ್ನಲ್ಲಿ ಇದೀಗ ತಿಮ್ಮಯ್ಯ ಅಂಡ್ ತಿಮ್ಮಯ್ಯ(timayya and timayya) ಚಿತ್ರವು ಬಿಡುಗಡೆಯಾಗಿದೆ. ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದಲ್ಲಿ ದಿಗಂತ್ ರವರ ಪತ್ನಿ ಐಂದ್ರಿತಾ ರೈ (aindrita Ray)ಕೂಡ ನಾಯಕ ನಟಿಯಾಗಿ ನಟಿಸಿದ್ದಾರೆ. ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರವು ಇಂದು ಚಲನಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು ಈ ಚಿತ್ರಕ್ಕೆ ಮೆಚ್ಚುಗೆಯು ಕೂಡ ವ್ಯಕ್ತವಾಗಿದೆ. ಇದೇ ವೇಳೆ ನಟ ದಿಗಂತ್ ಸಂದರ್ಶನ ಒಂದರಲ್ಲಿ ಮಾತನಾಡಿ ಡಿ ಬಾಸ್ ದರ್ಶನ್(d Boss Darshan) ರವರ ಬಗ್ಗೆ ಮಾತನಾಡಿದ್ದಾರೆ.
ಡಿ ಬಾಸ್ ದರ್ಶನ್ ಹಾಗೂ ನಾನು ಮಂಡ್ಯ ಎನ್ನುವ ಸಿನಿಮಾದಲ್ಲಿ ಈ ಹಿಂದೆ ನಟಿಸಿದ್ದೆವು ಮಂಡ್ಯ ಸಿನಿಮಾದಲ್ಲಿ ನಾನು ದರ್ಶನ್ ರವರ ತಮ್ಮನ ಪಾತ್ರವನ್ನು ಮಾಡಿದ್ದೆ. ದರ್ಶನ್ ಅಭಿನಯದ ಮಂಡ್ಯ(Mandya) ಚಿತ್ರವನ್ನು ಓಂ ಪ್ರಕಾಶ್ ರವರು ಡೈರೆಕ್ಟ್ ಮಾಡಿದ್ದರು ಓಂ ಪ್ರಕಾಶ್ ರವರು ನನ್ನ ಹತ್ತಿರ ಮಾತನಾಡಿ 25 ದಿನ ಶೂಟಿಂಗ್ ಇದೆ ದರ್ಶನ್ ಜೊತೆ ನೀನು ತಮ್ಮನ ಪಾತ್ರದಲ್ಲಿ ನಟಿಸಬೇಕು. ಫೈಟಿಂಗ್ ಇದೆ ಎಲ್ಲವೂ ಕೂಡ ತುಂಬಾ ಚೆನ್ನಾಗಿದೆ ಸಿನಿಮಾ ಮಾಡು ಒಪ್ಪಿಕೋ ಎಂದು ನನಗೆ ತುಂಬಾ ಬಿಲ್ಡಪ್ ಕೊಟ್ಟು ಓಂ ಪ್ರಕಾಶ್(Om Prakash) ರವರು ಕಥೆ ಹೇಳಿದ್ದರು.
ಹಲವಾರು ದಿನಗಳವರೆಗೂ ನಾನು ಕೂಡ ಶೂಟಿಂಗ್ನಲ್ಲಿ ಭಾಗವಹಿಸಿ ಮಂಡ್ಯ ಚಿತ್ರದಲ್ಲಿ ಅಭಿನಯಿಸಿದ್ದೆ. ಮಂಡ್ಯ ಚಿತ್ರದಲ್ಲಿ ಫೈಟಿಂಗ್ ಸೀನ್ ಹೊಂದಿದೆ ಅದರಲ್ಲಿ ನಾನು ಮೊದಲು ಫೈಟಿಂಗ್ ಮಾಡುತಿದ್ದೆ ನನಗೆ ಸುಸ್ತಾಗಿ ದಾಂಡಿಗರ ಬಳಿ ಒದೆ ತಿನ್ನುವ ಸಮಯದಲ್ಲಿ ದರ್ಶನ್ ರವರು ನನ್ನ ಅಣ್ಣನಾಗಿ ಬಂದು ನನ್ನನ್ನು ರಕ್ಷಿಸಿದರು ಈ ರೀತಿ ನಾನು ಕೂಡ ಮಂಡ್ಯ ಸಿನಿಮಾದಲ್ಲಿ ನಟಿಸಿದ್ದೆ.
ಮಂಡ್ಯ ಸಿನಿಮಾ ಚಲನಚಿತ್ರ ಮಂದಿರಗಳಲ್ಲಿ ರಿಲೀಸ್ ಆದಾಗ ನನ್ನ ಗೆಳೆಯರಿಗೆಲ್ಲರಿಗೂ ಕೂಡ ತುಂಬಾ ಬಿಲ್ಡಪ್ ಕೊಟ್ಟು ಸಿನಿಮಾ ಹಾಗಿದೆ ಹೀಗಿದೆ ನಾನು ಕೂಡ ಫೈಟ್ ಮಾಡಿದ್ದೇನೆ. ಎಂದೆಲ್ಲಾ ಹೇಳಿ ಥಿಯೇಟರ್ ಗೆ ನನ್ನ ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದೆ. ಆದರೆ ಸಿನಿಮಾದಲ್ಲಿ ನನ್ನ ಯಾವುದೇ ಫೈಟ್ ಸೀನ್ ಗಳು ಇರಲಿಲ್ಲ ಒಂದೇ ಒಂದು ಡೈಲಾಗ್ ಇತ್ತು “ಅಣ್ಣ ಕಾಫಿ ಬೇಕಾ” ಎನ್ನುವುದು ಆ ಡೈಲಾಗ್ ನೋಡಿ ನನಗೆ ಕೂಡ ಬೇಜಾರಾಯಿತು ಆಗ ಸ್ವಲ್ಪ ಬೇಜಾರಾದರೂ ಕೂಡ ಈಗೇನು ಅದರ ಬಗ್ಗೆ ನನಗೆ ಬೇಜಾರಿಲ್ಲ ಮಂಡ್ಯ ಚಿತ್ರದಿಂದ ದರ್ಶನ್ ರವರು ನನಗೆ ಪರಿಚಯವಾದರೂ
ನಾನು ದರ್ಶನ್ ಸರ್ ಇದೀಗ ಕ್ಲೋಸ್ ಫ್ರೆಂಡ್ಸ್ ಆಗಿದ್ದೇವೆ ನಾವಿಬ್ಬರೂ ರಾಜರಾಜೇಶ್ವರಿ ನಗರದಲ್ಲಿ ವಾಸ ಮಾಡುತ್ತಿರುವುದು ನಾನು ಹಾಗೂ ದರ್ಶನ್ ಸರ್ ಬೈಕ್ ರೈಡಿಂಗ್ ಗೆ ಜೊತೆಗೆ ಹೋಗುತ್ತೇವೆ ದರ್ಶನ್ ಸರ್ ಬೈಕ್ ರೈಡಿಂಗ್ ಗೆ (bike riding)ಪ್ಲಾನ್ ಮಾಡಿದರೆ ಮೊದಲು ನನಗೆ ಕರೆ ಮಾಡುತ್ತಾರೆ. ದರ್ಶನ್ ಸರ್ ಹಾಗೂ ನನ್ನ ನಡುವೆ ಈ ರೀತಿ ಉತ್ತಮ ಆತ್ಮೀಯತೆ ಇದೆ ಇದೇ ನನಗೆ ತುಂಬಾ ಇಷ್ಟ ಡಿ ಬಾಸ್ ದರ್ಶನ್ ರವರ ಜೊತೆಗೆ ಚೌಕ ಸಿನಿಮಾದಲ್ಲಿ ನಟಿಸಿದ್ದೇನೆ.
ಡಿ ಬಾಸ್ ದರ್ಶನ್ ರವರಿಗೆ ಪ್ರಾಣಿ ಹಾಗೂ ಪಕ್ಷಿಗಳು ತುಂಬಾ ಇಷ್ಟ ಅವರು ವೈಲ್ಡ್ ಲೈಫ್ ಫೋಟೋಗ್ರಾಫ್ (wildlife photography) ಕೂಡ ಮಾಡುತ್ತಾರೆ. ಅವರು ತುಂಬಾ ಅದ್ಭುತವಾಗಿ ಫೋಟೋಗಳನ್ನು ತೆಗೆದಿದ್ದಾರೆ. ತುಂಬಾ ಪೇಷನ್ಸ್ ಇಂದ ಫೋಟೋಗಳನ್ನು ತೆಗೆಯುತ್ತಾರೆ. ಯಾವುದೋ ಒಂದು ಪಕ್ಷಿಗಾಗಿ 12 ದಿನಗಳ ಕಾಲ ಕಾದು ತದನಂತರ ಅದು ಬಂದಾಗ ಫೋಟೋವನ್ನು ತೆಗೆದುಕೊಂಡಿದ್ದಾರೆ. ಡಿ ಬಾಸ್ ದರ್ಶನ್ ಜೊತೆ ನಾನು ಕೂಡ ವೈಟ್ ಲೈಫ್(wildlife Safari) ನೋಡಲು ಹೋಗುತ್ತೇನೆ ಬಂಡಿಪುರ ಮುಂತಾದ ಕಡೆಗಲ್ಲೆಲ್ಲ ನಾನು ಕೂಡ ಅವರ ಜೊತೆ ಹೋಗಿದ್ದೇನೆ. ಡಿ ಬಾಸ್ ದರ್ಶನ್ ರವರಿಗೆ ವನ್ಯಜೀವಿಗಳ ಮೇಲೆ ಇರುವ ಪ್ರೀತಿಯನ್ನು ನಾನು ಬೇರೆ ಯಾವ ಮನುಷ್ಯನಲ್ಲೂ ಕೂಡ ಕಾಣಲೇ ಇಲ್ಲ ಎಂದರು