ಡಿಜಿಟಲ್ ವೋಟರ್ ಐಡಿ ಕಾರ್ಡ್(digital voter ID card) ಎನ್ನುವ ಪದವು ಇತ್ತೀಚಿಗೆ ಸುದ್ದಿ ಮಾಡುತ್ತಿದೆ. ಈ ಹಿಂದೆ ವೋಟರ್ ಐಡಿಯನ್ನು ಪಡೆಯಲು ಸಾಕಷ್ಟು ಆಧಾರಗಳನ್ನು ನೀಡಿ ಹಲವು ದಿನಗಳವರೆಗೂ ಕಾದು ಪಡೆದುಕೊಳ್ಳಬೇಕಾಗಿತ್ತು ಆದರೆ ಇದೀಗ ಡಿಜಿಟಲ್ ವೋಟರ್ ಐಡಿ ಗಾರ್ಡನ್ನು ನಾವು ನಮ್ಮ ಮನೆಯ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ. ವೋಟರ್ ಐಡಿ ಕಾರ್ಡ್ ಇದೀಗ ಸಾಕಷ್ಟು ಪ್ರಚಲಿತದಲ್ಲಿದ್ದು 18 ವರ್ಷವಾಗುತ್ತಿದ್ದಂತೆ ಇದನ್ನು ಪಡೆಯಬಹುದು.
ನಾವು ಯಾವುದೇ ಕೆಲಸಕ್ಕೆ ಸೇರಿಕೊಳ್ಳಲು ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಗುರುತಿನ ಆಧಾರಕ್ಕಾಗಿ, ವೋಟರ್ ಐಡಿ ಕಾರ್ಡ್ ಅನ್ನು ಕೇಳುತ್ತಾರೆ. ಅಷ್ಟೇ ಅಲ್ಲದೆ ನಾವು ನಮ್ಮ ಗ್ರಾಮದಲ್ಲಿ ನಡೆಯುವ ಚುನಾವಣೆಯಲ್ಲಿ ಮತವನ್ನು ಚಲಾಯಿಸಲು ಕೂಡ ವೋಟರ್ ಐಡಿ ಬೇಕೇ ಬೇಕು ಈ ವೋಟರ್ ಐಡಿ ನಾವು 15 ಎಂಟು ವರ್ಷಗಳ ನಂತರ ಮಾಡಿಸಿಕೊಳ್ಳಬಹುದು ವೋಟರ್ ಐಡಿಯಂತು ಇಂದಿನ ದಿನಮಾನಗಳಲ್ಲಿ ಕಡ್ಡಾಯವಾಗಿದೆ.
ಏಕೆಂದರೆ ಭಾರತದ ಪ್ರತಿಯೊಬ್ಬ ಪ್ರಜೆ ಕೂಡ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಹಾಗಾಗಿ ನಮಗೆ ಇಷ್ಟ ಬಂದಂತಹ ವ್ಯಕ್ತಿಯನ್ನು ಮತ ಚಲಾಯಿಸುವ ಮೂಲಕ ಆರಿಸಿಕೊಳ್ಳಬಹುದು ನಾವು ಆಯ್ಕೆ ಮಾಡಿದ ಅಭ್ಯರ್ಥಿ ನಮ್ಮ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಾನೆ. ಆದ್ದರಿಂದಲೇ ಒಬ್ಬ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ವೋಟರ್ ಐಡಿ ಬಹಳ ಕಾಲದಿಂದಲೂ ಕೂಡ ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ. ಇದೀಗ ವೋಟರ್ ಐಡಿಯು ಕಾರ್ಡಿನ ರೂಪದಲ್ಲಿ ಜಾರಿಯಲ್ಲಿದ್ದು ಹಿಂದಿನ ಕಾಲದಿಂದಲೂ ಹಲವಾರು ರೂಪಗಳಲ್ಲಿ ಇದು ಜಾರಿಯಲ್ಲಿತ್ತು ಇದೀಗ ವೋಟರ್ ಐಡಿ ಕಾರ್ಡ್ ಅನ್ನು ಪಡೆಯುವುದು ತುಂಬಾ ಸುಲಭವಾಗಿದೆ. ಡಿಜಿಟಲ್ ವೋಟರ್ ಐಡಿಯನ್ನು ಯಾರು ಬೇಕಾದರೂ ಪಡೆದುಕೊಳ್ಳಬಹುದು ಆದರೆ ಆ ವ್ಯಕ್ತಿಗೆ 18 ವರ್ಷ ತುಂಬಿರಬೇಕಷ್ಟೇ
ವೋಟರ್ ಐಡಿಯನ್ನು ಮಾಡಿಸಲು ಹಿಡಿದಾಗ ಹಲವಾರು ತಪ್ಪುಗಳು ಉಂಟಾಗುತ್ತವೆ ಅದರ ಬದಲು ಅವುಗಳನ್ನು ನಿಯಂತ್ರಿಸುವುದಕ್ಕಾಗಿ ನಾವೇ ಅವುಗಳನ್ನು ಸರಿಪಡಿಸಿಕೊಳ್ಳಬಹುದು ನಾವು ವೋಟರ್ ಐಡಿಯಲ್ ಇರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಯಾವ ರೀತಿ ವೆಬ್ ಸೈಟಿಗೆ ಹೋಗಿ ಅರ್ಜಿ ಹಾಕಬೇಕು ಎಂಬುದನ್ನು ಈ ಲೇಖನದ ಮೂಲಕ ನಾವು ತಿಳಿದುಕೊಳ್ಳೋಣ.
18 ವರ್ಷ ಆಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ಎಂಬ ವೆಬ್ಸೈಟ್ ಗೆ ಹೋಗಿ ರಿಜಿಸ್ಟರ್ ಮಾಡಿಕೊಂಡು ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬೇಕು. ತದನಂತರ ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವೆಬ್ಸೈಟ್ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ನಂತರ ಯೂಸರ್ ಐಡಿ ಮತ್ತು ಪಾಸ್ವರ್ಡ್ ನಿಮಗೆ ಸಿಗುತ್ತದೆ.
ವೆಬ್ ಸೈಟಿನಲ್ಲಿ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಗಳನ್ನು ಹಾಕಿ ನೀವು ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬಹುದು. ಅಲ್ಲಿ ಕೇಳಿದ ಮಾಹಿತಿಯನ್ನು ಎಲ್ಲಾ ಸರಿಯಾಗಿ ಭರ್ತಿ ಮಾಡಿ ನೀವು ಯಾವುದನ್ನು ಸರಿ ಮಾಡಬೇಕು ಅದರ ಮಾಹಿತಿಯನ್ನು ಕೂಡ ಸರಿಯಾಗಿ ಬರ್ತಿ ಮಾಡಿ ಓಕೆ ಕೊಟ್ಟರೆ, ನಿಮ್ಮ ವೋಟರ್ ಐಡಿ 15 ದಿನಗಳ ಒಳಗೆ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.