Sumalatha spending all Abhishek Ambarish engagement: ಅಭಿಷೇಕ್ ಅಂಬರೀಶ್ ಎಂಗೇಜ್ಮೆಂಟ್ ಮುಗಿದ ದಿನದಿಂದಲೂ ಇಲ್ಲಿಯವರೆಗೂ ಅಭಿಷೇಕ್ ಅಂಬರೀಶ್ ಹಾಗೂ ಅವರ ಬಾವಿಪತ್ನಿ ಅವಿವಾ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು ಅವಿವಾ ಬಗೆಗಿನ ಗಾಸಿಪ್ಗಳಲ್ಲಿ ಅವರು ಇದಾಗಲೇ ಒಂದು ಮದುವೆಯನ್ನು ಆಗಿದ್ದು ಇದೀಗ ಅಭಿಷೇಕ್ ಅಂಬರೀಶ್ ಜೊತೆ ಎರಡನೇ ಮದುವೆ ಆಗುತ್ತಿದ್ದಾರೆ ಎಂಬುವ ವಿಚಾರ ಭಾರಿ ಸದ್ದು ಮಾಡುತ್ತಿತ್ತು ಅಷ್ಟೇ ಅಲ್ಲದೆ ಅವಿವ ಕೋಟ್ಯಾಧೀಶೆ ಆಗಿದ್ದು ಫ್ಯಾಶನ್ ಡಿಸೈನಿಂಗ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಸುಮಲತಾ ತಮ್ಮ ಮಗನ ಎಂಗೇಜ್ಮೆಂಟ್ ಗೆ ಖರ್ಚು ಮಾಡಿರುವ ಹಣದ ವಿವರ ರಿವೀಲ್ ಆಗಿದೆ.

 

 

ರೆಬಲ್ ಸ್ಟಾರ್ ಅಂಬರೀಷ್ ಹಾಗು ಸಂಸದೆ ಸುಮಲತಾ ರವರ ಪುತ್ರ ಅಭಿಷೇಕ ಅಂಬರೀಶ್ ಮೆಚ್ಚಿ ಪ್ರೀತಿಸುತ್ತಿದ್ದ ಹುಡುಗಿ ಅವಿವಾ ಬಿದ್ದಪ್ಪ ರವರ ಬೆರಳಿಗೆ ಬರೋಬ್ಬರಿ 37 ಲಕ್ಷದ ವಜ್ರದ ಉಂಗುರವನ್ನು ತೊಡಿಸಿ ತಮ್ಮ ನಿಶ್ಚಿತಾರ್ಥ ಶಾಸ್ತ್ರವನ್ನು ಮಾಡಿಕೊಂಡಿದ್ದಾರೆ. ಇಷ್ಟು ವರ್ಷಗಳಾದರೂ ಕೂಡ ಇವರಿಬ್ಬರ ಪ್ರೀತಿಯ ಗುಟ್ಟು ಎಲ್ಲಿಯೂ ಕೂಡ ರಟ್ಟಾಗಿರಲಿಲ್ಲ ಕಳೆದ ಐದು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ತಮ್ಮ ಪ್ರೀತಿಯನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದರು

ಅಭಿಷೇಕ್ ಹಾಗೂ ಅವಿವಾ ನಡುವೆ ಇವರಿಬ್ಬರು ಲಂಡನ್ ನಲ್ಲಿ ಓದುತ್ತಿರುವ ವೇಳೆ ಪ್ರೇಮಾಂಕುರವಾಗಿತ್ತು ಇವರಿಬ್ಬರ ಪ್ರೀತಿಯ ಬಗ್ಗೆ ರೆಬಲ್ ಸ್ಟಾರ್ ಅಂಬರೀಶ್ ರವರಿಗೂ ಕೂಡ ಗೊತ್ತಿತ್ತು ಇದೀಗ ನಿಶ್ಚಿತಾರ್ಥದ ಮೂಲಕ ಅಭಿಷೇಕ್ ಹಾಗೂ ಅವಿವಾ ನಡುವೆ ಮದುವೆಯ ಮುದ್ರೆ ಒತ್ತಿದೆ.

 

 

ಅಭಿಷೇಕ್ ಅಂಬರೀಶ್ ಎಂಗೇಜ್ಮೆಂಟ್ ಅವರ ತಾಯಿ ಸುಮಲತಾ ರವರ ಉಸ್ತುವಾರಿಯಲ್ಲಿ ನಡೆದಿತ್ತು ಸುಮಲತಾ ತಮ್ಮ ಮಗನ ನಿಶ್ಚಿತಾರ್ಥಕ್ಕೆ ಸ್ಯಾಂಡಲ್ ವುಡ್ ನ ಹಲವಾರು ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದು ತೀರಗುಟ್ಟಾಗೆ ಎಂಗೇಜ್ಮೆಂಟ್ ಅನ್ನು ಮಾಡಿಕೊಂಡಿದ್ದರು ಅವಿವ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಕುಟುಂಬದವರು ಹಾಗೂ ಆಪ್ತರು ಮಾತ್ರ ಈ ಎಂಗೇಜ್ಮೆಂಟ್ ನಲ್ಲಿ ಭಾಗಿಯಾಗಿದ್ದರು.

 

 

ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥಕ್ಕೆ ಯಶ್ ಹಾಗೂ ಡಿ ಬಾಸ್ ದರ್ಶನ್ ಕೂಡ ಆಗಮಿಸಿದ್ದರು ದರ್ಶನ್ ಮಟ್ಟಿಗೆ ಅಭಿಷೇಕ್ ನಿಶ್ಚಿತಾರ್ಥದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದರು ಸುಮಲತಾ ತಮ್ಮ ಮಗನ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಿದ್ದು ಈ ಕಾರ್ಯಕ್ರಮಕ್ಕೆ ಬಂದ ಅದ್ದಿಗಳಿಗೆ ದೊಡ್ಡ ಮಟ್ಟದಲ್ಲಿ ಔತಣಕೂಟವನ್ನು ಕೂಡ ಏರ್ಪಡಿಸಿದ್ದರು ಇಷ್ಟು ದೊಡ್ಡ ಮಟ್ಟದಲ್ಲಿ ನಿಶ್ಚಿತಾರ್ಥಕ್ಕೆ ಎಷ್ಟು ಹಣ ಖರ್ಚಾಗಿರಬಹುದು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಇತ್ತು ಸುಮಲತಾ ರವರು ತಮ್ಮ ಮಗ ಅಭಿಷೇಕ್ ಅಂಬರೀಶ್ ಎಂಗೇಜ್ಮೆಂಟ್ ನಲ್ಲಿ ಊಟದ ವ್ಯವಸ್ಥೆಗಾಗಿ ಬರೋಬ್ಬರಿ ಮೂರು ಕೋಟಿಗಿಂತಲೂ ಹೆಚ್ಚು ಹಣವನ್ನು ವ್ಯಯಿಸಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ

Leave a comment

Your email address will not be published. Required fields are marked *