ಚಳಿಗಾಲದ ಸಮಯದಲ್ಲಿ ಚರ್ಮವು ಕಾಂತಿ ರಹಿತವಾಗಿ ಚಳಿಯಿಂದ ಹೊಡೆದು ಬಿರುಕಾಗಿ ಕಾಣಿಸುತ್ತದೆ. ಅಷ್ಟೇ ಅಲ್ಲದೆ ಚರ್ಮದಲ್ಲಿ ಮೊದಲಿದ್ದಂತಹ ಕಳೆ ಕೂಡ ಕಾಣುವುದಿಲ್ಲ ಚಳಿಗಾಲದಲ್ಲಿ ಎಷ್ಟೇ ಬಾರಿ ಆಹಾರವನ್ನು ಸೇವಿಸಿದರು ನೀರನ್ನು ಕುಡಿದರೂ ಸಹ ನಿಶ್ಶಕ್ತಿ ಉಂಟಾಗುತ್ತದೆ. ಚಳಿಗಾಲದಲ್ಲಿ ನಾವು ಆರೋಗ್ಯಯುತವಾದ ಸಮತೋಲಿತ ಆಹಾರವನ್ನು ಸೇವಿಸಬೇಕು ಆಗೇ ಚರ್ಮಕ್ಕೆ ಹಾನಿ ಉಂಟಾಗದಂತೆ ಕಾಪಾಡಿಕೊಳ್ಳಬೇಕು ಹಾಗೆಯೇ ಚಳಿಗಾಲದಲ್ಲಿ ಸಂಗಾತಿಯನ್ನು ಸೇರುವುದಕ್ಕೂ ಕೂಡ ಉಚಿತವಾದ ಸಮಯವಿದ್ದು ಹಾಗೆ ಮಾಡಿದಲ್ಲಿ ಆರೋಗ್ಯಯುತವಾದ ಜೀವನವನ್ನು ಸಾಗಿಸಬಹುದು.

 

 

ಚಳಿಗಾಲದಲ್ಲಿ ನಮ್ಮ ಆರೋಗ್ಯ ಆಹಾರದ ಬಗ್ಗೆ ಗಮನವಹಿಸುವ ನಾವು ನಮ್ಮ ಸಂಗಾತಿಯ ಜೊತೆ ಸೇರಬೇಕಾದ ಸಮಯದ ಬಗ್ಗೆ ಆಲೋಚಿಸುವುದಿಲ್ಲ ಜೀವನದಲ್ಲಿ ಆರೋಗ್ಯದ ಜೊತೆ ಲೈಂಗಿಕತೆಯು ಕೂಡ ಮುಖ್ಯವಾಗಿದ್ದು ಆರೋಗ್ಯಯುತವಾದ ಜೀವನವನ್ನು ಸಾಧಿಸಲು ಅಂತಹ ನಿಯಮಗಳನ್ನೆಲ್ಲ ಪಾಲಿಸಬೇಕಾಗಿದೆ.

ಚಳಿಗಾಲದಲ್ಲಿ ಸಂಗಾತಿಯ ಜೊತೆ ರಾತ್ರಿಯ ಬದಲು ಬೆಳಗೆ ಸೇರಿದರೆ ಉತ್ತಮ ಎಂದು ಅನೇಕ ಸಂಶೋಧನೆಗಳ ಮೂಲಕ ತಿಳಿದು ಬಂದಿದೆ. ಏಕೆಂದರೆ ಆಫೀಸಿಗೆ ಹೋದ ಗಂಡ ಸುಸ್ತಾಗಿ ಮನೆಗೆ ಬರುತ್ತಾರೆ. ಹಾಗೆಯೇ ಹೆಣ್ಣು ಮಕ್ಕಳು ಕೂಡ ಮನೆಯ ಇತರ ಕೆಲಸಗಳಿಂದ ಸುಸ್ತಾಗಿರುತ್ತಾರೆ. ರಾತ್ರಿ ಊಟ ಮುಗಿಸಿ ಮಲಗಿದರೆ ಸಾಕು ಎಂಬಂತಾಗುತ್ತದೆ ಬೆಳಗ್ಗೆಯಿಂದ ಸಂಜೆವರೆಗೂ ಒಂದಲ್ಲ ಒಂದು ಕೆಲಸ ಕಾರ್ಯಗಳು ಎಂದು ದುಡಿಯುವುದರಲ್ಲಿ ಸಕ್ರಿಯರಾಗಿ ದೇಹಕ್ಕೆ ಆಯಾಸವಾಗಿರುತ್ತದೆ.

 

 

ಅಂತಹ ವೇಳೆ ಲೈಂಗಿಕ ಕ್ರಿಯೆಯನ್ನು ನಡೆಸುವುದು ಉತ್ತಮವಲ್ಲ ಹಾಗೆಯೇ ದೇಹ ಅನಾಯಾಸದಲ್ಲಿರುವಾಗ ಲೈಂಗಿಕ ಕ್ರಿಯೆಯನ್ನು ನಡೆಸುವುದು ಕೂಡ ಕಷ್ಟವಾಗುತ್ತದೆ. ಹಾಗಾಗಿ ಬೆಳಗಿನ ಜಾವ ತಮ್ಮ ಸಂಗಾತಿಯೊಡನೆ ಸೇರುವುದು ಉತ್ತಮವಾಗಿದೆ. ಬೆಳಗ್ಗೆ ಎಲ್ಲರೂ ಫ್ರೆಶ್ ಆಗಿರುತ್ತಾರೆ ಹಾಗೆ ಯಾವುದೇ ಒತ್ತಡಗಳು ಇರುವುದಿಲ್ಲ ಕೆಲಸ ಮಾಡಿದ ಸುಸ್ತು ಕೂಡ ಇರುವುದಿಲ್ಲ

ಬೆಳಗಿನ ಜಾವ ತಮ್ಮ ಸಂಗಾತಿಯೊಡನೆ ಸೇರಿದಾಗ ದೇಹಕ್ಕೆ ಹೆಚ್ಚು ಶಾಖ ಪ್ರವಹಿಸುತ್ತದೆ ಹಾಗೆ ರಕ್ತ ಪರಿಚಲನೆ ಕೂಡ ಸರಾಗವಾಗಿ ಆಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ ಬರೋಬ್ಬರಿ 250ಕ್ಕೂ ಹೆಚ್ಚು ಕ್ಯಾಲರಿ ಬರ್ನ್ ಆಗುವುದರಿಂದ ಯಾವುದೇ ಒತ್ತಡಗಳು ಇಲ್ಲದೆ ಇರುವಾಗ ಸಂಭೋಗ ನಡೆಸುವುದು ಉತ್ತಮವಾಗಿದೆ. ದೇಹದಲ್ಲಿರುವ ಹೆಚ್ಚು ಕ್ಯಾಲರಿಯೂ ಬರ್ನ್ ಆಗುವುದರಿಂದ ದೇಹಕ್ಕೆ ಸಕ್ಕರೆ ಕಾಯಿಲೆಯ ಅಪಾಯವು ಕೂಡ ಕಡಿಮೆಯಾಗುತ್ತದೆ.

 

 

ಬೆಳಗಿನ ಸಮಯದಲ್ಲಿ ತಮ್ಮ ಸಂಗಾತಿಯ ಜೊತೆ ಸೇರುವುದರಿಂದ ಹಲವು ಪ್ರಯೋಜನಗಳಿದ್ದು ಬೆಳಗಿನ ಜಾವ ಗಂಡಸರಲ್ಲಿ ವೀರ್ಯಾಣುವಿನ ಉತ್ಪಾದನೆಯ ಕೊಡು ಹೆಚ್ಚಾಗಿ ಇರುತ್ತದೆ. ಯಾವುದೇ ಒತ್ತಡವಿಲ್ಲದಂತ ಸಮಯದಲ್ಲಿ ವೀರ್ಯಾಣುಗಳ ಉತ್ಪಾದನೆ ಹೆಚ್ಚಾಗಿರುತ್ತದೆ ಎಂದು ಅನೇಕ ಪ್ರಯೋಗಗಳ ಮೂಲಕ ತಿಳಿಯುವುದು ಬಂದಿದೆ.

ಮಕ್ಕಳನ್ನು ಪಡೆಯುವುದರ ಬಗ್ಗೆ ಯೋಚಿಸುತ್ತಿರುವ ದಂಪತಿಗಳಂತೂ ಬೆಳಗಿನ ಸಮಯದಲ್ಲಿ ತಮ್ಮ ಸಂಗಾತಿಯ ಜೊತೆ ಸೇರಿದರೆ ಮಗುವಾಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಲೈಂಗಿಕ ಕ್ರಿಯೆಯಿಂದ ಒತ್ತಡದಿಂದ ಕೂಡ ಹೊರಗೆ ಬರಬಹುದು ಕೇವಲ ಗಂಡಸರಿಗೆ ಮಾತ್ರವಲ್ಲದೆ ಹೆಂಗಸರಿಗೂ ಕೂಡ ಬೆಳಗಿನ ಜಾವದ ಲೈಂಗಿಕ ಕ್ರಿಯೆಯಿಂದ ಪ್ರಯೋಜನಗಳಿವೆ.

ಹಲವು ಸಂಶೋಧನೆಗಳ ಪ್ರಕಾರ ಚಳಿಗಾಲದಲ್ಲಿ ಮುಂಜಾನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಆಕ್ಸಿಟೋಸಿನ್ ಎನ್ನುವ ಹಾರ್ಮೋನು ದೇಹದಲ್ಲಿ ಉತ್ಪಾದನೆಯಾಗುತ್ತದೆ ಈ ಆಕ್ಸಿಟೋಸಿನ್ ಹಾರ್ಮೋನ್ ಮನುಷ್ಯನ ದೇಹದಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೆ ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಗಮನ ಹರಿಸುತ್ತದೆ. ಡಾಕ್ಟರ್ ಗಳು ಕೂಡ ಬೆಳಗಿನ ಜಾವ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಎಂದು ಹಲವಾರು ದಂಪತಿಗಳಿಗೆ ಸಜೆಸ್ಟ್ ಮಾಡುತ್ತಾರೆ.

 

 

ಲೈಂಗಿಕ ಕ್ರಿಯೆಯಲ್ಲಿ ಉದ್ವೇಗಕ್ಕೆ ಒಳಗಾಗುವುದರಿಂದ ಚರ್ಮವು ಕೂಡ ಪರೋಕ್ಷವಾಗಿ ಸುಕ್ಕು ಗಟ್ಟಿ ಚರ್ಮದ ಮೇಲೆ ಪರಿಣಾಮ ಕೂಡ ಬೀರುತ್ತದೆ. ಇದರಿಂದ ರಕ್ತ ಪರಿಚಲನೆಗೂ ಕೂಡ ತೊಂದರೆಯಾಗಿ ಚರ್ಮವು ಸುಕ್ಕುಗಟ್ಟುತ್ತದೆ ಹಾಗಾಗಿ ಬೆಳಗಿನ ಜಾವ ಚರ್ಮಕ್ಕೂ ಕೂಡ ಉತ್ತಮವಾದ ವಾತಾವರಣವೆಂದು ಮಧುಮೇಹ ದಂತಹ ಕಾಯಿಲೆಗಳು ಕೂಡ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದಾಗಿದೆ ಹಾಗೂ ದೇಹದಲ್ಲಿ ತಾಜಾತನ ಉಂಟಾಗಿ ಒತ್ತಡವು ಕಡಿಮೆಯಾಗಿ ದೇಹದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

Leave a comment

Your email address will not be published. Required fields are marked *