ಗಾಯಕ ಹೇಮಂತ್ ಕುಮಾರ್ ಮಗನ ನಾಮಕರಣ ಶಾಸ್ತ್ರ: ಖ್ಯಾತ ನಟ ನಟಿಯರು ಸೇರಿದಂತೆ ಡಿ ಬಾಸ್ ಕೂಡ ಭಾಗಿ

ಕನ್ನಡದ ಹೆಸರಾಂತ ಗಾಯಕ ಹೇಮಂತ್ ಕುಮಾರ್ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೃತಿಕಾ ಎಂಬುವವರ ಜೊತೆ ಕುಟುಂಬದವರ ಆಶೀರ್ವಾದದೊಂದಿಗೆ ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು, ಇವರ ಮದುವೆ ಸಮಯದಲ್ಲಿ ಕರೋನ ಇದ್ದ ಕಾರಣ ಹೆಚ್ಚು ಜನರನ್ನು ಆಹ್ವಾನಿಸಲಾಗದೆ ತುಂಬಾ ಸರಳವಾಗಿ ವಿವಾಹವಾದರೂ ಗಾಯಕ ಹೇಮಂತ್ ರವರು ಈ ಮೊದಲು ಪ್ರಿಯದರ್ಶಿನಿ ಎನ್ನುವವರನ್ನು ವಿವಾಹವಾಗಿದ್ದರು. 2007 ರಲ್ಲಿ ಇವರಿಬ್ಬರು ವಿವಾಹವಾಗಿ ಒಂದು ವರ್ಷದ ಬಳಿಕ ವಿಚ್ಛೇದನವನ್ನು ಪಡೆದುಕೊಂಡಿದ್ದರು. ಇದೀಗ 13 ವರ್ಷಗಳ ನಂತರ ಗಾಯಕ ಹೇಮಂತ್ ಕುಮಾರ್ ಅವರು ಮತ್ತೊಮ್ಮೆ ಆಸೆಮಣೆಯನ್ನು ಏರಿದ್ದಾರೆ.

 

 

ಇದೀಗ ಗಾಯಕ ಹೇಮಂತ್ ಕುಮಾರ್ ರವರು ವಿವಾಹವಾಗಿರುವ ಉಡುಗಿಯ ಹೆಸರು, ಕೃತಿಕ ವೃತ್ತಿಯಲ್ಲಿ ವೈದ್ಯರಾಗಿರುವ ಕೃತಿಕಾರವರು ಬೆಂಗಳೂರಿನ ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ ನೆಫ್ರೋಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಗಾಯಕ ಹೇಮಂತ ಹಾಗೂ ಕೃತಿಕ ವಿವಾಹ ಮಹೋತ್ಸವದಲ್ಲಿ ಕನ್ನಡದ ಖ್ಯಾತ ನಟರು ಕೂಡ ಭಾಗವಹಿಸಿದ್ದರು. ಮುಖ್ಯವಾಗಿ ಸೃಜನ್ ಲೋಕೇಶ್ ,ದರ್ಶನ್ ,ಉಪೇಂದ್ರ, ನಾದಬ್ರಹ್ಮ ಹಂಸಲೇಖ, ಗಾಯಕ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಗುರುರಾಜ್, ಪ್ರಜ್ವಲ್ ದೇವರಾಜ್, ಗುರುಕಿರಣ್, ವಿನೋದ್ ಪ್ರಭಾಕರ್, ಸ್ಮಿತಾ ಮಲ್ನಾಡ್, ನಂದಿತಾ ಮುಂತಾದ ಕಲಾವಿದರು ಹೇಮಂತ್ ಹಾಗೂ ಕೃತಿಕಾರರವರ ವಿವಾಹವನ್ನು ನೆರವೇರಿಸಿದರು.

 

 

ಇದೇ ವರ್ಷದ ಜೂನ್ ತಿಂಗಳಿನಲ್ಲಿ ಹೇಮಂತ್ ಪತ್ನಿ ಕೃತಿಕ ಗಂಡು ಮಗುವಿಗೆ ಜನ್ಮ ನೀಡಿದರು ಈಗ ತಮ್ಮ ಮಗನಿಗೆ ನಾಮಕರಣ ಶಾಸ್ತ್ರವನ್ನು ಕೂಡ ಮಾಡಿದ್ದಾರೆ. ಸಿವಿರಂಗದ ಕೆಲವು ಗಣ್ಯರು ಸ್ನೇಹಿತರು ನೆಂಟರು ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ತಮ್ಮ ಮುದ್ದಿನ ಮಗನಿಗೆ ಶ್ರೇಯಾಂತ ಎಂದು ನಾಮಕರಣವನ್ನು ಮಾಡಿದ್ದಾರೆ. ಗಾಯಕ ಹೇಮಂತ್ ರವರ ಕುಟುಂಬ ಸಂಗೀತ ಕಲಾವಿದರ ಕುಟುಂಬವಾಗಿದ್ದು ಇವರ ತಂದೆ ಸುಬ್ರಮಣ್ಯ ಶಾಸ್ತ್ರಿ, ತಾಯಿಯೂ ಕೂಡ ಸಂಗೀತದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು.

ಹಾಗಾಗಿ ತಂದೆ ತಾಯಿ ಇಬ್ಬರು ಸೇರಿ ಹೇಮಂತ್ ಕುಮಾರರಿಗೇ ಸಂಗೀತ ಶಾಸ್ತ್ರವನ್ನು ಹೇಳಿಕೊಡುತ್ತಾ ಅವರಿಗೂ ಕೂಡ ಸಂಗೀತದಲ್ಲಿ ಒಲವು ಮೂಡುವಂತೆ ಮಾಡಿದ್ದರು.ನಾದಬ್ರಹ್ಮ ಹಂಸಲೇಖ ರವರಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಹೇಮಂತ್ ರವರು 1999 ರಲ್ಲಿ ಪ್ರೀತ್ಸೆ ಎನ್ನುವ ಸಿನಿಮಾದಲ್ಲಿನ ಪ್ರೀತ್ಸೆ ಪ್ರೀತ್ಸೆ ಎನ್ನುವ ಹಾಡಿನ ಮೂಲಕ ಗಾಯಕ ಹೇಮಂತ್ ರವರನ್ನು ಕನ್ನಡ ಚಿತ್ರರಂಗಕ್ಕೆ ನಾದಬ್ರಹ್ಮ ಹಂಸಲೇಖರವರು ಪರಿಚಯ ಮಾಡುತ್ತಾರೆ. ಪ್ರೀತ್ಸೆ ಚಿತ್ರದ ಹಾಡುಗಳು ಜನಪ್ರಿಯವಾಗುತ್ತಿದ್ದಂತೆ ಗಾಯಕ ಹೇಮಂತ್ ಕುಮಾರ್ ರವರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತವೆ.

 

 

ಸಂಗೀತ ನಿರ್ದೇಶಕರಾದ ಗುರು ಕಿರಣ್, ಹರಿಕೃಷ್ಣನ್, ವಿ ಮನೋಹರ್, ಮನೋಹರ್ ಮೂರ್ತಿ ಸೇರಿದಂತೆ ಇನ್ನಿತರ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಗಳು ಜೊತೆ ಕೆಲಸ ಮಾಡಿದ್ದಾರೆ . ಗಾಯಕ ಹೇಮಂತ್ ಕುಮಾರ್ ಸ್ಯಾಂಡಲ್ ವುಡ್ ನ ಸ್ಟಾರ್ಗಳಾದ ಗಣೇಶ್ ,ದರ್ಶನ್, ಶಿವರಾಜ್ ಕುಮಾರ್ ಇನ್ನು ಹಲವಾರು ನಟರ ಸಿನಿಮಾಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಹಲವಾರು ಸ್ಟೇಜ್ ಶೋಗಳನ್ನು ಕೂಡ ಹೇಮಂತ್ ಕುಮಾರ್ ರವರು ನಡೆಸಿಕೊಟ್ಟಿದ್ದಾರೆ.

Be the first to comment

Leave a Reply

Your email address will not be published.


*