ನಟಿ ಹರಿಪ್ರಿಯಾ(haripriya) ಹಾಗೂ ನಟ ವಸಿಷ್ಠ ಸಿಂಹ(Vashisht Simha) ಎಂಗೇಜ್ಮೆಂಟ್(engagement) ಮಾಡಿಕೊಂಡಿದ್ದರು ಯಾರಿಗೂ ಹೇಳದೆ ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯ ಎಂಗೇಜ್ಮೆಂಟ್ ಮಾಡಿಕೊಂಡ ಹಿನ್ನೆಲೆಯಲ್ಲಿ ಹಲವಾರು ಗುಸು ಗುಸು ಸದ್ದುಗಳು ಹರಿದಾಡುತ್ತಿದ್ದವು ಇದೀಗ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಟ ಸಿಂಹ ಅವರು ಎಂಗೇಜ್ಮೆಂಟ್ ಆಗಿರುವ ಫೋಟೋಗಳನ್ನು ಇವರಿಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು ಇದಾದ ನಂತರ ಇಂದು ಇವರಿಬ್ಬರ ಎಂಗೇಜ್ಮೆಂಟ್ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ನಟಿ ಹರಿಪ್ರಿಯಾರವರು (haripriya)ಸ್ಯಾಂಡಲ್ವುಡ್ನ ಬಹು ಬೇಡಿಕೆಯ ನಟಿಯಾಗಿದ್ದು ಇದೀಗ ಅವರು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಮದುವೆಯ ವಿಚಾರ ಸ್ಯಾಂಡಲ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಟಿ ಹರಿಪ್ರಿಯಾ ಕಂಚಿನ ಕಂಠದ ವಸಿಷ್ಟ ಸಿಂಹ ರವರನ್ನು ವಿವಾಹವಾಗುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲಾ ಕಡೆ ವೈರಲ್ (viral dance video)ಆಗಿದ್ದು ಅದಕ್ಕೆ ಪುಷ್ಠಿ ನೀಡುವಂತೆ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಟ ಸಿಂಹ(Vashishtha Simha) ರವರ ಡ್ಯಾನ್ಸ್ ವಿಡಿಯೋಗಳು ಅವರು ಕೈ ಕೈ ಹಿಡಿದುಕೊಂಡು ದುಬೈನಲ್ಲಿ ಶಾಪಿಂಗ್ ಮಾಡಿರುವ ಫೋಟೋಗಳು ಎಲ್ಲಾ ಕಡೆ ವೈರಲ್ ಆಗಿದ್ದವು. ಆದರೆ ಇದೀಗ ಇವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಇದೀಗ ಒಂದು ಹೊಸ ಚಿತ್ರದಲ್ಲಿ ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ ನಟಿಸಿದ್ದು ಆ ಸಿನಿಮಾಕ್ಕಾಗಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಈ ಚಿತ್ರದ ವೇಳೆ ಅವರಿಬ್ಬರ ಸ್ನೇಹವೂ ಪ್ರೀತಿಗೆ ತಿರುಗಿ ಇದೀಗ ಅವರು ತಮ್ಮ ಎಂಗೇಜ್ಮೆಂಟ್(engagement) ಕೂಡ ಮಾಡಿಕೊಂಡಿದ್ದಾರೆ. ನಟಿ ಹರಿಪ್ರಿಯಾ ವಸಿಷ್ಟ ಸಿಂಹ ರವರ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡು ತಮ್ಮ instagram ಖಾತೆಯಲ್ಲಿ ಫೇವರೆಟ್ ಪಾರ್ಟ್ನರ್(favourite partner) ಎಂದು ಬರೆದುಕೊಂಡಿದ್ದರು.
ನಟಿ ಹರಿಪ್ರಿಯಾ ಇತ್ತೀಚಿಗಷ್ಟೇ ಮೂಗು ಚುಚ್ಚಿಸಿಕೊಳ್ಳುವ ಶಾಸ್ತ್ರವನ್ನು ಮಾಡಿಕೊಂಡಿದ್ದರು. ಆಗ ನಟ ವಸಿಷ್ಟ ಸಿಂಹ ಖುದ್ದು ಹರಿಪ್ರಿಯಾಗೆ ಮುತ್ತು ನೀಡಿ ಸಮಾಧಾನವನ್ನು ಮಾಡಿದ್ದಾರೆ. ಆದರೆ ಅವರ ಮುಖ ಮೀಡಿಯೋದಲ್ಲಿ ಕಾಣಿಸಿಲ್ಲ ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ವಿಡಿಯೋ ಸ್ವತಹ ತಾವೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು ಇದಾದ ನಂತರ ಇವರಿಬ್ಬರು ಜೊತೆ ಜೊತೆಯಾಗಿ ದುಬೈನಲ್ಲಿ ಟ್ರಿಪ್ ಮಾಡುತ್ತಿದ್ದು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಆರ್ ಆರ್ ನಗರದಲ್ಲಿ ತಮ್ಮ ತಾಯಿ ಹಾಗೂ ಸಹೋದರಿಯ ಜೊತೆ ಜೀವಿಸುತ್ತಿದ್ದರು ಇದೀಗ ನಟ ವಸಿಷ್ಠ ಸಿಂಹ ಕೂಡ ನಟಿ ಹರಿಪ್ರಿಯಾಗೋಸ್ಕರ ಆರ್ ಆರ್ ನಗರಕ್ಕೆ ಮನೆಯನ್ನು ಶಿಫ್ಟ್ ಮಾಡಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಇವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡ ನಂತರ ನಟಿ ಹರಿಪ್ರಿಯಾ ನಮ್ಮಿಬ್ಬರ ಪ್ರೀತಿ ಹೇಗೆ ಶುರುವಾಯಿತು ಎನ್ನುವ ಕಥೆಯನ್ನು ಕೂಡ ಹೇಳಿದ್ದಾರೆ. ಒಂದು ನಾಯಿಮರಿಯಿಂದ ಇವರಿಬ್ಬರ ಪ್ರೀತಿ ಶುರುವಾಗಿದ್ದು ವಶಿಷ್ಠ ಸಿಂಹಾ ರವರ ಗೆಳೆಯ ಡಾಲಿ ಧನಂಜಯ್(dolly Dhananjay) ರವರಿಗು ಕೂಡ ಇವರಿಬ್ಬರ ಎಂಗೇಜ್ಮೆಂಟ್ ವಿಚಾರ ಗೊತ್ತಿರಲಿಲ್ಲ ಎಂದು ಸ್ವತಹ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಟ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ರವರ ಎಂಗೇಜ್ಮೆಂಟ್ ವಿಡಿಯೋ ಇಂದು ಎಲ್ಲಾ ಕಡೆ ವೈರಲ್ ಆಗಿದ್ದು ಇವರಿಬ್ಬರೂ ಅಂತ್ಯಾಕ್ಷರಿ ಈ ಆಡುತ್ತಾ ತಮ್ಮ ಎಂಗೇಜ್ಮೆಂಟನ್ನು ಮಾಡಿಕೊಂಡಿದ್ದಾರೆ. ಈ ವೇಳೆ ವಶಿಷ್ಟ ಸಿಂಹ ಕೂಡ ಹಾಡನ್ನು ಹಾಡಿದ್ದು ಈ ವೇಳೆ ನಟಿ ಹರಿಪ್ರಿಯ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಆಗ ವಶಿಷ್ಟ ಸಿಂಹ ನಟಿ ಹರಿಪ್ರಿಯಾ ರವರಿಗೆ ಸಮಾಧಾನ ಪಡಿಸುತ್ತಾ ಕಣ್ಣೀರನ್ನು ಒರೆಸಿದ್ದಾರೆ.