ನಟಿ ಮಾಲಾಶ್ರೀ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ.. ಫೋಟೋಶೂಟ್ ವೈರಲ್

Diwali Photoshoot Malashree Aradhana:ಬೆಳಕಿನ ಹಬ್ಬವಾದ ದೀಪಾವಳಿಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂತೆಯೇ ದೇಶದೆಲ್ಲೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಸಿನಿಮಾ ತಾರೆಯರು ಕೂಡ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

 

 

ಕನಸಿನ ರಾಣಿ ಮಾಲಾಶ್ರೀಗೆ ಈ ಬಾರಿಯ ದೀಪಾವಳಿ ವಿಶೇಷ, ಮಗಳು ಕನ್ನಡ ಚಿತ್ರರಂಗಕ್ಕೆ ಕಲ್ಟ್ ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ನಟಿಸಿದ್ದಾರೆ. ಹಾಗಾಗಿ ಮಾಲಾಶ್ರೀಗೆ ಈ ಹಬ್ಬ ತುಂಬಾ ವಿಶೇಷ.

 

 

ಈ ಕಾರಣಕ್ಕಾಗಿಯೇ ಬೆಳಕಿನ ಹಬ್ಬವನ್ನು ತಾಯಿ ಮತ್ತು ಮಗಳು ವಿಶೇಷವಾಗಿ ಆಚರಿಸುತ್ತಾರೆ. ಮಾಲಾಶ್ರೀ ಮತ್ತು ಆರಾಧನಾ ಇಬ್ಬರೂ ಶುದ್ಧ ಸಾಂಪ್ರದಾಯಿಕ ಲುಕ್‌ನಲ್ಲಿ ಒಂದೇ ಫ್ರೇಮ್‌ನಲ್ಲಿ ಫೋಟೋ ಶೂಟ್ ಮಾಡಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಅಮ್ಮನ ಮಗಳು ಕ್ಯಾಮರಾಗೆ ಪೋಸ್ ಕೊಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

“ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಫೋಟೋ ಶೂಟ್ ಮಾಡಿದ್ದೇವೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಹಲವು ವರ್ಷಗಳ ನಂತರ ಫೋಟೋ ಶೂಟ್ ಮಾಡಿದ್ದೇನೆ. ನನ್ನ ಮಗಳ ಜೊತೆ ಫೋಟೋ ಶೂಟ್ ಮಾಡಿರುವುದು ತುಂಬಾ ಖುಷಿ ತಂದಿದೆ.

 

 

ಈ ವರ್ಷ ನನ್ನ ಮಗಳು ‘ಕಟೇರ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾಳೆ.ನೀವು ನನಗೆ ನೀಡಿದ ಪ್ರೋತ್ಸಾಹ ನನ್ನ ಮಗಳಿಗೂ ಕೊಡಿ’ ಎಂದು ನಟಿ ಮಾಲಾಶ್ರೀ ಈ ಸಂದರ್ಭದಲ್ಲಿ ನಾಡಿನ ಜನತೆಯಲ್ಲಿ ಮನವಿ ಮಾಡಿದರು.

Leave a Comment